ನೀರಿನೊಳಗಿನ ಮಂಜು

Author : ನಾ. ಮೊಗಸಾಲೆ

₹ 250.00




Year of Publication: 2022
Published by: ಅಂಕಿತ ಪ್ರಕಾಶನ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100

Synopsys

ಸಾಹಿತಿ ನಾ. ಮೊಗಸಾಲೆ ಅವರ ಕಾದಂಬರಿ ನೀರಿನೊಳಗಿ ಮಂಜು. ಈ ಕೃತಿಯಲ್ಲಿ ಎಚ್.ಎಸ್. ಸತ್ಯನಾರಾಯಣ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳ್ನು ಬರೆದಿದ್ದಾರೆ. ಅವರು ಹೇಳುವಂತೆ, 'ನೀರಿನೊಳಗಣ ಮಂಜು' ಕಾದಂಬರಿಯು ನಮ್ಮ ಕಾಲದ ಅನೇಕ ಮುಖ್ಯಪ್ರಶ್ನೆಗಳನ್ನು ಚರ್ಚಿಸುತ್ತದೆ. ಮಠಮಾನ್ಯಗಳ ಪ್ರಸ್ತುತತೆ, ಶಿಕ್ಷಣ ಕಲಿಕೆಯ ಸವಾಲುಗಳು, ಮನುಷ್ಯ ಸಂಬಂಧದ ಬಿಕ್ಕಟ್ಟಿನ ಸ್ವರೂಪ, ಕಾಣದ ಕೈಗಳು ತಂದೊಡ್ಡುವ ಆತಂಕಗಳು, ವೃದ್ಧಾಪ್ಯದ ಅಭದ್ರತೆಯ ಸಂಕಷ್ಟಗಳು, ವೇಶ್ಯಾವೃತ್ತಿಯ ಬದುಕಿನ ಅತಂತ್ರತೆ- ಹೀಗೆ ಮನುಷ್ಯನ ಹಲವು ಬಗೆಯ ತೆವಲುಗಳ ಜೊತೆಗೆ ಭೂಮಿ, ಕಾಮ, ಅನ್ನದ ಪ್ರಶ್ನೆಗಳೆಲ್ಲವೂ ಈ ಕಾದಂಬರಿಯಲ್ಲಿ ಮಿಳಿತಗೊಂಡು ಕಾದಂಬರಿಯ ಒಟ್ಟು ಸ್ವರೂಪವನ್ನು ಸಂಕೀರ್ಣಗೊಳಿಸಿದೆ. ಈ ಬಹುಮುಖಿ ಆಯಾಮದ ಬರಹ ಇತ್ತೀಚಿನ ದಿನಗಳಲ್ಲಿ ಅಪೂರ್ವವೇ ಸರಿ. ಇಂತಹ ಹೊಸ ಕಾದಂಬರಿಯನ್ನು ಸೃಜಿಸಿದ ಡಾ. ನಾ. ಮೊಗಸಾಲೆಯವರ ಲೇಖನಿ ಮತ್ತಷ್ಟು ಕಾಲ ಹೆಚ್ಚೆಚ್ಚು ಕ್ರಿಯಾಶೀಲವಾಗಿರಲಿ, ಕನ್ನಡದ ಕಥನಪ್ರಿಯರು ಈ ಕೃತಿಯನ್ನು ಆದರದಿಂದ ಬರಮಾಡಿಕೊಳ್ಳಲೆಂದು ಹಾರೈಸುವೆ ಎಂಬುದಾಗಿ ಹೇಳಿದ್ದಾರೆ.

About the Author

ನಾ. ಮೊಗಸಾಲೆ
(27 August 1944)

ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ  ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...

READ MORE

Related Books