ಬೂಬರಾಜ ಸಾಮ್ರಾಜ್ಯ

Author : ಬಿ. ಜನಾರ್ದನ ಭಟ್

Pages 272

₹ 250.00
Year of Publication: 2020
Published by: ಅಂಕಿತ ಪುಸ್ತಕ
Address: 53, ಶ್ಯಾಮ್‍ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080- 2661 7100

Synopsys

‘ಬೂಬರಾಜ ಸಾಮ್ರಾಜ್ಯ’ ಲೇಖಕ ಬಿ. ಜನಾರ್ದನ ಭಟ್ ಅವರ ಕಾದಂಬರಿ. ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಬರೆಯುತ್ತಾ ‘ಈ ಕಾದಂಬರಿ ನನಗೆ ತೃಪ್ತಿ ಕೊಟ್ಟ ಕಾದಂಬರಿ.  ಸಮಾಜದ ಸಂಸ್ಕೃತಿಯನ್ನು ಅರಿಯುವಲ್ಲಿ ಸದ್ಯದ ಜತೆಗೆ ಪೂರ್ವಕಾಲವನ್ನು ಸಾರ್ವಕಾಲಿಕ ಮನುಷ್ಯ ವರ್ತನೆಗಳನ್ನೂ ಒಟ್ಟಾಗಿ ಅಥವಾ ಜತೆಯಾಗಿ ಗ್ರಹಿಸುವ ಪ್ರಯತ್ನವನ್ನು ಈ ಹಿಂದೆ ಉತ್ತರಾಧಿಕಾರ, ‘ಹಸ್ತಾಂತರ’ ಮತ್ತು ‘ಮೂರು ಹೆಜ್ಜೆ ಭೂಮಿ’ ಕಾದಂಬರಿಗಳಲ್ಲಿ ನಾನು ಮಾಡಿದ್ದೇನೆ. ಪ್ರಸ್ತುತ ಕಾದಂಬರಿ ‘ಬೂಬರಾಜ ಸಾಮ್ರಾಜ್ಯ’ದಲ್ಲಿ ಈ ಪ್ರಯತ್ನ ಬೇರೊಂದು ಬಗೆಯಲ್ಲಿ ನಡೆದಿದೆ. ನನ್ನ ಹಿಂದಿನ ಕಾದಂಬರಿಗಳಲ್ಲಿ ಇಪ್ಪತ್ತನೆಯ ಶತಮಾನದ ತುಳುನಾಡಿನ ಚಿತ್ರಣಗಳು ಆನುಷಂಗಿಕವಾಗಿ ಬಂದಿದ್ದರೆ ಈ ಕಾದಂಬರಿಯ ಒಂದು ಭಾಗವಾಗಿ ಒಂದು ಕಥಾನಕವಿದ್ದು, ಅದರಲ್ಲಿ ಸುಮಾರು ಏಳನೆಯ ಶತಮಾನದ ತುಳುನಾಡಿನ ಒಂದು ರಾಜ್ಯದ ಕಾಲ್ಪನಿಕ ಚಿತ್ರಣವಿದೆ. ಆದರೆ ಮುಖ್ಯವಾದ ಸಂಗತಿ ಎಂದರೆ ಕಾದಂಬರಿಯ ಮುಖ್ಯ ನೆಲೆಯ ಕಥನ ಪ್ರಸ್ತುತ ಸಮಾಜವನ್ನು ಚಿತ್ರಿಸುವ ಉದ್ದೇಶವುಳ್ಳದ್ದು. ತುಳುನಾಡಿನ ಪ್ರಾಚೀನ ಇತಿಹಾಸ, ನಾಗರಿಕತೆ ಮತ್ತು ಸಂಸ್ಕೃತಿಗಳ ಕುರಿತಾದ ನನ್ನ ಅಧ್ಯಯನವು ಈ ಕಾದಂಬರಿಯ ಒಳಗಿನ ಇನ್ನೊಂದು ಕಥಾನಕವಾಗಿ ದಾಖಲಾಗಿದೆ’ ಎಂದು ಹೇಳಿದ್ದಾರೆ.  

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Conversation

Related Books