ಝವಾದಿ

Author : ಸುನಂದಾ ಬೆಳಗಾಂವಕರ

Pages 448

₹ 248.00




Year of Publication: 2013
Published by: ವಸಂತ ಪ್ರಕಾಶನ
Address: # 360, 10ನೇ ಬಿ;ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ್ ಕ್ಲಬ್, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011,
Phone: 080 2244 3996

Synopsis

ಲೇಖಕಿ ಸುನಂದಾ ಬೆಳಗಾಂವಕರ್ ಅವರ ಕಾದಂಬರಿ-ಝವಾದಿ. ದಾಂಪತ್ಗದ ವಿರಸ-ಸಮರಸತೆಗಳು ಒಳಗೊಂಡ ಕೃತಿ. ಮಧ್ಯಮವರ್ಗದ ಎರಡು ಮೂರು ಪರಿವಾರಗಳ ನಡುವಿನ ಕೌಟುಂಬಿಕ ಸಂಬಂಧಗಳ ಅಂತಃಕರಣನ್ನು ಚಿತ್ರಿಸುತ್ತದೆ. ಆಫ್ರಿಕಾ ಅರಣ್ಯದಲ್ಲಿಯ ಸಿಂಹ ಮತ್ತು ಸಿಂಹಿಣಿಯರ ಸಂಸಾರ ಕಂಡಿದ್ದ ಶಂಕರರಾಯ ತನ್ನ ಸ್ವಂತ ಜೀವನದಲ್ಲಿಯ ಓರೆಕೋರೆಗಳನ್ನು ತಿದ್ದಿಕೊಂಡು ಪರಿಪೂರ್ಣನಾಗುವುದೇ ಇಲ್ಲಿಯ ಕಥಾವಸ್ತು. ಗುರಿಯಿಂದ ದೂರ ಹೋಗುವುದೇ ದಾರಿಯೆಂದು ಭ್ರಮಿಸಿದ್ದವನು ಹೆಂಡತಿಯ ತ್ಯಾಗದಿಂದ ಸರಿಯಾದ ದಾರಿಗೆ ಬರುತ್ತಾನೆ. ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ., ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

About the Author

ಸುನಂದಾ ಬೆಳಗಾಂವಕರ
(20 October 1935)

ಇಪ್ಪತ್ತನೆ ಶತಮಾನದ ಪೂರ್ವಾರ್ಧದ ಸಮಕಾಲೀನ ಲೇಖಕಿಯರಲ್ಲಿ ಒಂದು ಗಣನೀಯ ಹೆಸರೆಂದರೆ ಸುನಂದಾ ಬೆಳಗಾಂವಕರ. ಧಾರವಾಡದ ಮಹಿಷಿ ಕುಟುಂಬದವರು. ವಿವಾಹದ ನಂತರ ಆಫ್ರಿಕಾ ಖಂಡದ ಝಾಂಬಿಯ ದೇಶದಲ್ಲಿ ತಮ್ಮ ಪತಿಯೊಡನೆ ಮೂವತ್ತು ವರ್ಷ ಕಳೆದು, ಬಳಿಕ ಭಾರತಕ್ಕೆ ಹಿಂತಿರುಗಿದರು. ಸುನಂದಾ ಬೆಳಗಾವಕರರವರು ಬರೆದ ‘ಕಜ್ಜಾಯ(ಪ್ರಬಂಧ)’ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ  ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಇದಲ್ಲದೆ ಅವರು ‘ಶಾಲ್ಮಲಿ’ ಎನ್ನುವ ಕಾವ್ಯಸಂಕಲನ, ‘ನಾಸು’, ‘ಝವೇರಿ’ ಎನ್ನುವ ಕಾದಂಬರಿಗಳನ್ನು ಬರೆದಿದ್ದಾರೆ. ಸುನಂದಾ ಬೆಳಗಾಂವಕರ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ‘ನಾಸು’ ಕಾದಂಬರಿಗೆ 1990 ರಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಲಭಿಸಿದೆ. 2017ರಲ್ಲಿ ನಿಧನ ಹೊಂದಿದರು.  ...

READ MORE

Related Books