ಮುಖವಾಡ

Author : ಎಂ.ಕೆ. ಇಂದಿರಾ

₹ 70.00

Synopsys

ಕಥೆಗಾರ್ತಿ ಎಂ.ಎ.ಇಂದಿರಾ ಅವರ ಕಾದಂಬರಿ ‘ಮುಖವಾಡ’. ಈ ಪುಸ್ತಕ ಎಂ.ಎ. ಇಂದಿರಾರವರ ಏಳನೇ ಕೃತಿ. ಬದುಕಿನಲ್ಲಿ ಜನ ಅದೆಷ್ಟು ತರದ ಮುಖವಾಡ ತೊಟ್ಟಿರುತ್ತಾರೆ. ಮುಖವಾಡ ತೊಟ್ಟ ಮನುಷ್ಯನ ಅಸಲಿ ಮುಖ ಅರ್ಥವಾಗುವಷ್ಟರಲ್ಲಿ ಜೀವನದಲ್ಲಿ ಅದೇನೇನೊ ಆಗಿಬಿಡುತ್ತದೆ. ನಗುವಿನ ಹಿಂದಿನ ದುಃಖದ ಮುಖವಾಡ ಇರಬಹುದು, ಆತ್ಮೀಯತೆಯ ಸೋಗಿನಲ್ಲಿ ಮೋಸ ಮಾಡುವ ಮುಖವಾಡ ಇರಬಹುದು, ಅಹಿಂಸೆ ವಾದಮಾಡುವನ ಮುಖವಾಡದ ಹಿಂದೆ ಕ್ರೂರತನವೇ ತುಂಬಿರಬಹುದು..... ಬಹಳಷ್ಟು ನೋವು ಕೊಡುವಂತದ್ದು ತೀರ ಹತ್ತಿರದ ಸಂಬಂಧಿಗಳೇ ಮುಖವಾಡ ತೊಟ್ಟು ಜೀವನವನ್ನು ಹಾಳು ಮಾಡಿದಾಗ. ಇಲ್ಲಿ ಕಥಾನಾಯಕಿಯ ಜೀವನವು ಹಾಗೆ ಆಗಿದೆ. ಮುಖವಾಡ ತೊಟ್ಟ ಸೋದರಮಾವನ ಮುಖವಾಡ ಕಳಚುವಷ್ಟರಲ್ಲಿ ಅವಳ ಜೀವನ ಅಲ್ಲೋಲ ಕಲ್ಲೋಲವಾಗಿ ಬಿಡುತ್ತದೆ.ಅವಳ ಜೀವನವನ್ನೇ ಹಾಳು ಮಾಡಬೇಕೆಂದು ಪಣತೊಟ್ಟು ಮುಖವಾಡ ತೊಟ್ಟು ಬಂದಿರುವಾಗ ಅವಳು ತಾನೆ ಮಾಡಲು ಸಾಧ್ಯ…?

About the Author

ಎಂ.ಕೆ. ಇಂದಿರಾ
(05 January 1917 - 15 March 1994)

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ  2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...

READ MORE

Related Books