ಬೃಹದಾರಣ್ಯಕ

Author : ಗಂಗಾಧರ ಬೀಚನಹಳ್ಳಿ

Pages 420

₹ 400.00
Year of Publication: 2021
Published by: ಭೂಮಿಶ್ರೀ ಪ್ರಕಾಶನ, ಮೈಸೂರು
Address: ಭೂಮಿಶ್ರೀ ಪ್ರಕಾಶನ, ಮೈಸೂರು ಪ್ರಿಯದರ್ಶಿನಿ, # ೪೨, ಎಸ್.ಬಿ.ಎಂ ಬಡಾವಣೆ, ʼಎʼ ಬ್ಲಾಕ್‌, ಬೋಗಾದಿ, ಮೈಸೂರು- 570026.

Synopsys

ಲೇಖಕ ಗಂಗಾಧರ ಬೀಚನಹಳ್ಳಿ ಅವರ ಕಾದಂಬರಿ- ಬೃಹದಾರಣ್ಯಕ. ದೇಶ ಅನುಭವಿಸುತ್ತಿರುವ ದಿಕ್ಕು ದೆಸೆಗಳ ಕುರಿತು ಲೇಖಕರು ನೋಟವನ್ನು ಬೀರಿದ್ದು, ಅವರಲ್ಲಿ ಮೂಡಿರುವ ಜಿಜ್ಞಾಸೆಗಳನ್ನು ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ. ಲೇಖಕರು ತಮ್ಮ ಜಿಜ್ಞಾಸೆಗೆ ಒಂದು ಕತೆಯ ಚೌಕಟ್ಟನ್ನು ನೀಡಿದ್ದು ಅರಣ್ಯಕ ಎನ್ನುವ ದೇಶದ ಸುತ್ತಲೂ ಈ ಕಥೆ ಗಿರಾಕಿ ಹೊಡೆಯುತ್ತದೆ. ಕಲ್ಪನಾ ಲೋಕದಲ್ಲಿ ಮಾನಸಪುರ ಊರನ್ನು ಕಥೆಯಗಾರಿಕೆಯ ಮುಖ್ಯ ನೆಲೆಯಾಗಿಸಿಕೊಂಡು, ರಾಗಯಂಕಾ ಎನ್ನುವ ಕೈಗಾರಿಕಾ ಸಂಸ್ಥೆ ಸ್ಥಾಪನೆಯಾಗುವ ಬೆಳವಣಿಗೆಯ ಪರಿಧಿಯಲ್ಲಿ ಈ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ.

ಮನುಷ್ಯನನ್ನು ಪ್ರಾಣಿಗಳನ್ನಾಗಿ ಮಾಡುವ ಕೈಗಾರೀಕರಣವನ್ನು ಕೇಂದ್ರವಾಗಿಸಿ, ಪ್ರಚಲಿತ ವಿದ್ಯಮಾನಗಳನ್ನು ಬಳಸಿಕೊಂಡು ರಾಜಕೀಯ ಹಾಗೂ ಅಧಿಕಾರ ಶಾಹಿ ವರ್ಗಗಳು ನಡೆಸುವ ಲಾಭೋದ್ಯಮವು ಹೇಗೆ ಸಮಾಜವನ್ನು ಕೆಡಿಸುತ್ತದೆ ಎನ್ನುವುದನ್ನು ವಿಶ್ಲೇಷಿಸಿದ್ದಾರೆ.

ಕೃತಿಯ ಕುರಿತು ಹಿರಿಯ ಲೇಖಕ ಡಿ.ಎಸ್‌. ನಾಗಭೂಷಣ, ಕೈಗಾರೀಕರಣದ ಮೂಲಕ ನಾವು ಅನುಭವಿಸುತ್ತಿರುವ ಅಭಿವೃದ್ದಿ ಮಾದರಿ, ಪರಿಸರ ವೈಪರಿತ್ಯಗಳು, ಹೆಚ್ಚುತ್ತಿರುವ ಅಸಮಾನತೆ ಮತ್ತು ಅದರ ಪರಿಣಾಮವಾಗಿ ಸೃಷ್ಟಿಯಾಗುತ್ತಿರುವ ಮೂರ್ತ-ಅಮೂರ್ತ ಹಿಂಸೆಗಳ ಧೋರಣೆಗಳೇ ಈ ಪುಸ್ತಕದ ಜೀವಾಳವಾಗಿದೆ. ಮನುಷ್ಯನ ಮೇಲೆ ಆಕ್ರಮಣವೆಸಗುತ್ತಿರುವ ನಿಗೂಢ ರೋಗ ರುಜಿನಗಳು ಅನಾಹುತಕಾರಿ ಎನಿಸಿದ್ದು, ಈ ವಿಚಾರವನ್ನೇ ಗಟ್ಟಿಗೊಳಿಸುವ ಪ್ರಯತ್ನವನ್ನು ಮಾಡಲಾಗಿದೆ’ ಎಂದು ಪ್ರಶಂಸಿಸಿದ್ದಾರೆ.

About the Author

ಗಂಗಾಧರ ಬೀಚನಹಳ್ಳಿ

ಗಂಗಾಧರ ಬೀಚನಹಳ್ಳಿ ಹಿರಿಯ ಕಥೆಗಾರ. ಮೂಲತಃ ಬೀಚನಹಳ್ಳಿಯ ಹುಲಿಯೂರು ದುರ್ಗದವರು. ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವೀಧರರು.  ರೈತಾಪಿ ಮೂಲದ ಲೇಖಕರು, ಇವರ ಕವನಗಳು ಹಲವಾರು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ.  ಕೃತಿಗಳು: ʼಬೃಹದಾರಣ್ಯಕʼ (ಕಾದಂಬರಿ), ಆಕೃತಿಗಳು (ಕಥಾ ಸಂಕಲನ-ಪ್ರಜಾವಾಣಿ ಪತ್ರಿಕೆಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕೃತಿ),  ಸೇರಿದಂತೆ, ಹಲವಾರು ಕವನ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದಿರುತ್ತಾರೆ. ...

READ MORE

Reviews

’ಬೃಹದಾರಾಣ್ಯಕ’ ಕೃತಿಯ ವಿಮರ್ಶೆ

 ನಮ್ಮ ಹಿರಿಯ ಕಥೆಗಾರ ಗಂಗಾಧರ ಬೀಚನಹಳ್ಳಿ, ಬೃಹದಾರಣ್ಯಕ ಸಾಕಷ್ಟು ಬಿಡುವಿನ ನಂತರ ಮಹತ್ವಾಕಾಂಕ್ಷೆಯ ಒಂದು ಸಿಕ್ಕಿಕೊಂಡು ಕೂ ಮುಖ್ಯ ಕಥೆಗೆ ಹ ಕಥೆ ಕಟ್ಟಲು ಈ ರಾಜಕಾರಣಿಗಳು ನಡೆಸುವ ಲಾಭ ಕುರಿತ ಜನಪ್ರಿಯ ಬೃಹತ್ ಕಾದಂಬರಿಯನ್ನು ಬರೆದಿದ್ದಾರೆ. ಈ ದೀರ್ಘ ಅಭಿವೃದ್ಧಿ ಮಾಡ ಬಿಡುವಿನ ವೇಳೆಯಲ್ಲಿ ಅವರು ತನ್ನ ಸುತ್ತಣ ಬದುಕಿನ ಆದರ ಪರಿಣಾ ಬಗ್ಗೆ ಸಾಕಷ್ಟು ಯೋಚಿಸಿದ್ದಾರೆ. ರೈತಾಪಿ ಮೂಲದ ಅವರು ತುಮಕೂರಿನಲ್ಲಿದ್ದ ಎಚ್‌ಎಂಟಿ ಕೈಗಡಿಯಾರದ ಕಾರ್ಖಾನೆಯಲ್ಲೂ ನೌಕರಿ ಮಾಡಿದವರು, ಈ ಎರಡೂ ನೆಲೆಗಳ ಅನುಭವಗಳು ಅವರ ಈ ಆಲೋಚನಾ ಲಹರಿಯನ್ನು ರೂಪಿಸಿ ದೇಶ ಇಂದು ಸಾಗುತ್ತಿರುವ ದಿಕ್ಕು ದೆಸೆಗಳ ಬಗ್ಗೆ ಅವರಲ್ಲಿ ಒಂದು ಜಿಜ್ಞಾಸೆಗೆ ಕಾರಣವಾದಂತಿದ್ದು, ಈ ಕಾದಂಬರಿ ಈ ಜಿಜ್ಞಾಸೆಗೆ ಒಂದು ಭಿತ್ತಿ ಒದಗಿಸಿದಂತಿದೆ. ಈ ಜಿಜ್ಞಾಸೆಗೆ ಅವರು ಆಯ್ದುಕೊಂಡಿರುವ ಕೇಂದ್ರ ವಸ್ತು ಇಂದು ಕರೋನಾ ಸೇರಿದಂತೆ ಹಲವು ಅನಾಹುತಗಳಿಗೆ ಕಾರಣವಾಗಿದೆಯೆಂದು ಹೇಳಲಾಗುವ ನಮ್ಮ 'ಅಭಿವೃದ್ಧಿ ಮಾದರಿ'.

ಲೇಖಕರು ತಮ್ಮ ಜಿಜ್ಞಾಸೆಗೆ ಒಂದು ಕಥೆಯ ಚೌಕಟ್ಟು ನೀಡಲು ಆರಣ್ಯಕ ಎಂಬ ಪಡೆಯುವುದು ಒಂದು ದೇಶ, ಅದರಲ್ಲಿ ಸೌಮ್ಯಾವರಣ ಎಂಬ ಪ್ರಾಂತ್ಯ ಮತ್ತು ಅದರಲ್ಲಿನ ಮಾನಸಪುರ ತೀರಾ ಹವಾಸಿ ಎಂಬ ಸಣ್ಣ ಊರೊಂದನ್ನು ಕಲ್ಪಿಸಿಕೊಂಡು ಅದನ್ನು ತಮ್ಮ ಕಥೆಗಾರಿಕೆಯ ಮುಖ್ಯ ಸಂಪನ್ಮೂಲಗಳಿದ ನೆಲೆಯಾಗಿಸಿಕೊಂಡು ಅಲ್ಲೊಂದು ರಾಗಯಂಕಾ (ರಾಷ್ಟ್ರೀಯ ಗಡಿಯಾರ ಯಂತ್ರ ಕಾರ್ಖಾನೆ) ಎಂಬ ಕೈಗಾರಿಕೆಯ ಸ್ಥಾಪನೆಯಾಗುವ ಬೆಳವಣಿಗೆಯ ಸುತ್ತ ಈ ಕಾದಂಬರಿಯನ್ನು ಕಟ್ಟಿದ್ದಾರೆ. ಅದಕ್ಕಾಗಿ ಇಂಥಹುದೇ ಹಲವು ಕಾಲ್ಪನಿಕ ಊರುಗಳು ಮತ್ತು ಪಾತ್ರಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಉದಾ: ಪರಸ್ಥಲಿ, ಕಲ್ಯಾಣನಗರಿ, ವ್ಯಾಘ್ರಪುರಿ, ಪ್ರಸ್ಥಾನಮಠ, ನಿಜಗುಣ ಸಂಪನ್ನ, ಜಂಬುಕೇಶ್ವರ ಧನುರ್ಧರ, ದಿವ್ಯಾನಂದ ನಭೋವಿಹಾರಿ, ಸಿದ್ಧಾಂಶು ಗೌತಮ್, ಮಧುಕೇಶ ಸಂಭ್ರಮಿತ, ಮೈತ್ರೇಯಿ ವಿಶ್ವಪ್ರಭೆ, ಶರಭ ಸೌರಭ, ಉನ್ನು ಪತ್ರಲೋಚನೆ ಇತ್ಯಾದಿ ಇತ್ಯಾದಿ. ಈ ಅರಣ್ಯಕದ ಪರ್ವತಶ್ರೇಣಿ: ರಜತಾದ್ರಿಯಾದರೆ, ಮಾನಸಪುರದ ಬಳಿಯ ಬೆಟ್ಟಶ್ರೇಣಿ ಮಾತುಂಗೇಶ್ವರ, ಈ ಕಾದಂಬರಿಯಲ್ಲಿ ಜರುಗುವ ಹಲವು ಘಟನೆಗಳು ಕೈ ಗಡಿಯಾರ ಕಾರ್ಖಾನೆಯೊಂದರ ಅವನತಿಗೆ ಸಂಬಂಧಿಸಿದ ಕಥೆಯ ಸ್ಥಳ ಮತ್ತು ಪಾತ್ರಗಳನ್ನು ನೆನಪಿಗೆ ತರಬಹುದಾದದ್ದರಿಂದ ಮತ್ತು ಅದು ಈ ಕಾದಂಬರಿಯ ಮುಖ್ಯ ಗಮನವನ್ನು ವಿಚಲಿತಗೊಳಿಸಬಹುದಾದದ್ದರಿಂದ ಈ ಕಾಲ್ಪನಿಕ ಸ್ಥಳ ಮತ್ತು ಪಾತ್ರಗಳು ಅಗತ್ಯವಾಗಿದೆಯೆಂದು ಭಾವಿಸಬಹುದು.

ಒಂದು ಪರ್ಯಾ ಕೃಷ್ಣಮೂರ್ತಿ  ಹೆಸರಲ್ಲಿ ಆರಂಭವಾಗುವ ರಾಗಯಂಕಾ ನಿಂತಿರುವುದು ಅದರ ಮೂಲ ಜಾಗದಲ್ಲಿದ್ದ ರೈತಾಪಿ ಜನರ ಜಮೀನುಗಳನ್ನು ಕಿತ್ತುಕೊಂಡು, ಒಂದು ಜೀವನ ದೃಷ್ಟಿ ಮತ್ತು ಕ್ರಮಗಳನ್ನು ಅಸ್ತವ್ಯಸ್ತಗೊಳಿಸಿ, ಜಮೀನು ಕೊಟ್ಟವರ ಕುಟುಂಬಕ್ಕೊಂದು ಉದ್ಯೋಗವೆಂಬ ಆಮಿಷಕ್ಕೆ ಒಳಗಾಗಿ ಅದರಲ್ಲಿ ನೌಕರರಾಗಿರುವವರ ಸ್ಥಿತಿಯನ್ನು ಈ ಕಾದಂಬರಿ: ವರ್ಣಿಸುವುದು ಹೀಗೆ: ಬಡತನ-ಸಿರಿತನಗಳ ಕಲನೆಯೇ ಇಲ್ಲದೆ ತಮ್ಮ ಅನ್ನವನ್ನು ತಾವೇ ದುಡಿದುಕೊಂಡ ತಮ್ಮದೇ ಘನತೆಯಲ್ಲಿ ಬಾಳುತ್ತಿದ್ದ ಜನ ಇಲ್ಲಿ ದುಡಿಮೆಯ ವೇಳೆಯ ಮಧ್ಯೆ, ಕಾರ್ಖಾನೆ ರಿಯಾಯ್ತಿ ದರದಲ್ಲಿ ಒದಗಿಸುವ ಅಲ್ಪ ತಿಂಡಿ ತೀರ್ಥಗಳಿಗಾಗಿ ಆ ವಿರಾಮ ವೇಳೆಯ ಗಂಟೆ ಹೊಡೆಯಲೆಂದೇ ಕಾಯುತ್ತಾ, ಆ ಗಂಟೆ ಕೇಳಿದೊಡನೆ ರಸಾಯನಿಕದಿಂದ ಅಶುದ್ಧವಾಗಿದ್ದ ತಮ್ಮ ಕೈಗಳನ್ನು ಶುಚಿಗೊಳಿಸಿಕೊಂಡು, ಮತ್ತೆ ದುಡಿಮೆಗೆ ವಾಪಸಾಗಲು ಎಲ್ಲಿ ತಡವಾಗುವುದೋ ಸಂಬಳದ ಒಂದು ಭಾಗ ಕಡಿತವಾಗುವುದೋ ಎಂಬ ಆತಂಕದಿಂದ ತಮ್ಮ ದುಡಿಮೆಯ ಮಳಿಗೆಗಳ ಸಣ್ಣ ಬಾಗಿಲುಗಳ ಮೂಲಕ ಉಪಹಾರಗೃಹದೆಡೆಗೆ ಒಬ್ಬರ ಮೇಲೆ ಒಬ್ಬರು ಬಿದ್ದು ಪ್ರಾಣಿಗಳಂತೆ ನುಗ್ಗುವರು.

ಮನುಷ್ಯರನ್ನು ಪ್ರಾಣಿಗಳನ್ನಾಗಿ ಮಾಡುವ ಇಂತಹ ಮೈಮರೆವಿನ ಕ್ಷಣಗಳೇ ಕೈಗಾರಿಕೀಕರಣದ ಕೇಂದ್ರದಲ್ಲಿರುವ ದುರಂತ ಪ್ರಜ್ಞೆಯ ಬೀಜ ಕ್ಷಣಗಳು, ಆದರೆ ಸದರಿ ಕಾದಂಬರಿಯ ದೌರ್ಬಲ್ಯವೆಂದರೆ ಅದು ತಾನು ಕಾಣುವ ಇಂತಹ ಕ್ಷಣಗಳನ್ನು ವಿಸ್ತರಿಸಿ ಅವುಗಳ ಆಳಕ್ಕೆ ಹೋಗದೆ ಪುಟಗಟ್ಟಲೆಯ ನೀತಿ ಪಾಠಗಳು, ಹಳೆಯ ಲೆಕ್ಕಾಚಾರಗಳು, ಪುರಾಣ ಪ್ರವಚನ ಶೈಲಿಯ ಭೀಷಣ ಭಾಷಣಗಳಂತಹ ವಾಚ್ಯ ಸಂಗತಿಗಳ ಮೇಲೆ ತನ್ನ ಕಥೆಯನ್ನು, ಅದರ ತರ್ಕವನ್ನು ಕಟ್ಟುತ್ತಾ ಹೋಗುವುದು, ಇಡೀ ಕಾದಂಬರಿಯಲ್ಲಿ ಇಂತಹ ಸೂಕ್ಷ್ಮ ಗ್ರಹಿಕೆಯ ಕ್ಷಣದ ಹತ್ತಿರಕ್ಕೆ ಬರುವ ಇನ್ನೊಂದೇ ಘಟನೆ ಎಂದರೆ, ಕಾರ್ಖಾನೆ ಸ್ಥಾಪನೆಯ ಸಂದರ್ಭದ ಭಾಗವಾಗಿ ಬಾಡಿಗೆ ಹೆಣ್ಣಾಗಬೇಕಾಗಿ
  ಶರಭ ಸೌರಭ ಅಂತಿಮವಾಗಿ ಎದುರಿಸುವ ತನ್ನ ಮನಸ್ಸಿನ ಒಳತೋಟಿಯ ಮತ್ತು ಇದಕ್ಕೆ ಇದೇ ಕಾರ್ಖಾನೆ ಸೃಷ್ಟಿಸುವ, ಸುಲಭವಾಗಿ ಹಣ ಮಾಡುವ ಜಾಲದಲ್ಲಿ ಸಿಕ್ಕಿಕೊಂಡು ಕೊನೆಗೊಂದು ದಿನ ಇದ್ದಕ್ಕಿದಂತೆ ಎದುರಿಸಬೇಕಾಗಿ ಬರುವ ಶೂನ್ಯತೆಯಲ್ಲಿ ರಮ್ಯಪ್ರಕಾಶ ಕುಸುಮಾಂಗದನು ಪ್ರತಿಸ್ಪಂದಿಸುವ ಕ್ಷಣ. ಇಂತಹ ಸಂದನಶೀಲ ಕ್ಷಣಗಳನ್ನು ಮುಖ್ಯ ಕಥೆಗೆ ಹೆಣೆದು ಕಾದಂಬರಿಯಲ್ಲಿನ ದುರಂತವನ್ನು ಆಳಗೊಳಿಸಲಾಗದ ಲೇಖಕರು ಕಥೆ ಕಟ್ಟಲು ನಂಬಿರುವುದು, ಕೈಗಾರಿಕೀಕರಣದ ವಿರುದ್ಧದ ಪ್ರಚಲಿತವಿರುವ, ರಾಜಕಾರಣಿಗಳು, ವ್ಯಾಪಾರಿಗಳು, ಧರ್ಮಗುರುಗಳು ಮತ್ತು ಅಧಿಕಾರಶಾಹಿ ಒಗ್ಗೂಡಿ ನಡೆಸುವ ಲಾಭೋದ್ಯಮ ಹೇಗೆ ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿದೆ ಎಂಬುದನ್ನು ಕುರಿತ ಜನಪ್ರಿಯ ಕಥೆ-ಉಪಕಥೆಗಳನ್ನು ಹೇಳುವ ಸುಲಭ ದಾರಿಗಳನ್ನೇ.

ಹೌದು, ಕುರುಡು, ಕೈಗಾರಿಕೀಕರಣದ ಮೂಲಕ ನಾವು ಅನುಸರಿಸುತ್ತಿರುವ ಅಭಿವೃದ್ಧಿ ಮಾದರಿ, ಪರಿಸರ ವೈಪರೀತ್ಯಗಳು, ಹೆಚ್ಚುತ್ತಿರುವ ಅಸಮಾನತೆ ಮತ್ತು ಅದರ ಪರಿಣಾಮವಾಗಿ ಸೃಷ್ಟಿಯಾಗುತ್ತಿರುವ ಮೂರ್ತ ಮತ್ತು ಅಮೂರ್ತ ಹಿಂಸೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮೇಲೆರಗುತ್ತಿರುವ ನಿಗೂಢ ರೋಗ ರುಜಿನಗಳ ಮೂಲಕ ಅನಾಹುತಕಾರಿ ಎನ್ನಿಸತೊಡಗಿದೆ. ಆದರೆ ಈ ಅನ್ನಿಸಿಕೆಯನ್ನು ಗಟ್ಟಿಗೊಳಿಸುವ ಪ್ರಯತ್ನ ಇಲ್ಲಿ ಮಾಡಲಾಗಿರುವಂತೆ ಜನಪ್ರಿಯ ಘಟನಾವಳಿಯನ್ನಾಧರಿಸಿದ ಸರಳೀಕೃತ ಕಥನಗಾರಿಕೆ ಮತ್ತು ಕಳೆದುಹೋದ ಆದರ್ಶಗಳನ್ನು ಕುರಿತ ಆವೇಶದ ಮಾತುಗಾರಿಕೆ ಮೂಲಕ ಮಾಡಿದರೆ ಅದು ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾದೀತು. ಉದಾಹರಣೆಗೆ ಈ ಕಾದಂಬರಿಯಲ್ಲಿ ಅಭಿವೃದ್ಧಿಗೆ ಸಂಕೇತವಾಗಿ ಬರುವ ರೆಸಾರ್ಟ್‌ಗಳು ಹತ್ತಿರದ ಹಳ್ಳಿಗಳ ಸುಂದರ ಹುಡುಗಿಯರನ್ನು ಅಪಹರಿಸಿ ವೇಶೈಯರನ್ನಾಗಿ ಮಾಡುತ್ತವೆ ಎಂದು ನಂಬಿಸಲು ಹೊರಡುವ ರೀತಿ ಮತ್ತು ಹಾಗೆ ಅಪಹರಿಸಲ್ಪಟ್ಟ ಓರ್ವ ಹುಡುಗಿ ಈ ಕಾದಂಬರಿಯ ಒಂದು ಪಾತ್ರವಾಗಿ ಲೇಖಕರಿಂದ ಕುಚೋನ್ನತೆ ಎಂಬ ಅಭಿದಾನ ಪಡೆಯುವುದು ಎಂತಹ ಕೂರ ವ್ಯಂಗ್ಯವೆನಿಸಿಬಿಟ್ಟು ಈ ಅಭಿವೃದ್ಧಿ ವಿರೋಧಿ ಸಂಕಥನ ತೀರಾ ಹವ್ಯಾಸಿ ಎನಿಸಿಬಿಡುತ್ತದೆ. ಇದಕ್ಕೆ ಬದಲಾಗಿ ಮಣ್ಣಿನ ವಾಸನೆಯ ಸಮೃದ್ಧ ಸಂಪನ್ಮೂಲಗಳಿರುವ ಬೀಚನಹಳ್ಳಿಯವರು ಈ ಕಥೆಗೆ ಸಮಾನಾಂತರವಾಗಿಯೇ ಬದುಕಿನ ಒಂದು ಪರ್ಯಾಯ ಮಾದರಿಯನ್ನು ಕಟ್ಟಿಕೊಟ್ಟಿದ್ದರೆ?

(ಕೃಪೆ: ಹೊಸಮನುಷ್ಯ, ಬರಹ: ಡಿ.ಎಸ್. ನಾಗಭೂಷಣ)

Related Books