ಭುವಿಗಿಳಿದ ಹಕ್ಕಿ ಮತ್ತು ಇತರ ಕಿರು ಕಾದಂಬರಿಗಳು

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 232

₹ 175.00




Year of Publication: 2019
Published by: ಸುಧಾ ಎಂಟರ್ ಪ್ರೈಸಸ್
Address: #761, 8ನೇ ಮುಖ್ಯ ರಸ್ತೆ, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560034

Synopsys

‘ಭುವಿಗಿಳಿದ ಹಕ್ಕಿ’ ಮತ್ತು ಇತರ ಕಿರು ಕಾದಂಬರಿಗಳು ಕೃತಿಯು ಸಾಯಿಸುತೆ ಅವರ ಕಿರು ಕಾದಂಬರಿಗಳ ಸಂಕಲನ. ಸುಮಾರು 80 ಮತ್ತು 90ರ ದಶಕದಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕಿರು ಕಾದಂಬರಿಗಳಿವು. ಈ ಮುಖೇನ ಗೊಂಚಲಿನ ರೂಪ ಪಡೆದುಕೊಂಡಿದೆ. ‘ಭುವಿಗಿಳಿದ ಹಕ್ಕಿ’ ಕಾದಂಬರಿಗಳ ಒಡನಾಡಿಗಳು ‘ಆಶಾ ಪಲ್ಲವಿ’ ಮತ್ತು ‘ಅನುಬಂಧ’ ಗಳಾಗಿದ್ದು ಕಾದಂಬರಿಯ ವಸ್ತುವಿಷಯವಾಗಿ ಹೆಣ್ಣಿನ ಮನಸ್ಥಿತಿ ವಿಚಾರಗಳನ್ನು ತೆಗೆದುಕೊಳ್ಳಲಾಗಿದೆ. ಕೌಟುಂಬಿಕ ವಿಚಾರಗಳು ಕೂಡಾ ಇಲ್ಲಿ ಪ್ರಾಧಾನ್ಯತೆಯನ್ನು ಪಡೆದುಕೊಂಡಿದ್ದು, ಹೆಣ್ಣಿನ ಮನಸ್ಸಿನ ತುಮುಲುಗಳು ಭಿನ್ನವಾಗಿ ಇಲ್ಲಿ ವ್ಯಕ್ತವಾಗಿದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books