ಬದುಕಿನ ದಾರಿಯಲ್ಲಿ

Author : ಹೆಚ್.ಜಿ. ರಾಧಾದೇವಿ

₹ 110.00




Year of Publication: 2011
Published by: ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ
Address: ಬೆಂಗಳೂರು

Synopsys

ಖ್ಯಾತ ಕಾದಂಬರಿಗಾರ್ತಿ ಹೆಚ್.ಜಿ.ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ‘ಬದುಕಿನ ದಾರಿಯಲ್ಲಿ’. ಹುಟ್ಟು ಸಾವುಗಳ ಮಧ್ಯದ ಬದುಕು ಪಯಣ ದಾರಿ ಎಂದೆಲ್ಲ ಹೇಳುತ್ತೇವೆ. ಹುಟ್ಟು ಪ್ರಾರಂಭದ ನಿಲ್ದಾಣವಾದರೆ ಗಮ್ಯ ಮರಣ ಮಧ್ಯದ ದಾರಿ ಕೆಲವರಿಗೆ ಸುಖ ನೆಮ್ಮದಿ ಇತ್ತರೆ ಇನ್ನು ಕೆಲವರದು ಬರೀ ಗೋಳು ಸಂಕಟಗಳೇ. ಕೆಲವರಿಗೆ ಹೂವು ಚೆಲ್ಲಿದ ಹಾದಿಯಾದರೆ ಮತ್ತೆ ಹಲವರಿಗೆ ಮುಳ್ಳಿನ ದಾರಿ.ಹೀಗೆ ಬದುಕಿನ ದಾರಿಯನ್ನು ಈ ಕಾದಂಬರಿಯ ಕಥಾನಾಯಕಿ ಪ್ರೇಮಾ ಸವೆಸುವ ರೀತಿ ಈ ಕಾದಂಬರಿಯಲ್ಲಿ ವರ್ಣಿತವಾಗಿದೆ . ಕಥಾನಾಯಕ ಶ್ಯಾಮ ಮೂವರು ತಂಗಿಯರ ಅಣ್ಣ .ಅವರ ಮದುವೆಗೆ ಮಾಡಿದ ಸಾಲ ತೀರಿಲ್ಲವೆಂದು ತಾಯಿ ಸುಬ್ಬಮ್ಮ ಮೂವತ್ತೈದಾದರೂ ಅವನ ಮದುವೆಯ ಯೋಚನೆಯೇ ಮಾಡಿರುವುದಿಲ್ಲ. ಅಲ್ಲದೆ ಏನೇನೋ ಸುಳ್ಳು ಹೇಳಿ ಇವನ ಜೀವನವೂ ಸುಖಮಯವಾಗಿರಿಸದೆ ಹಣ ಗಂಟುಮಾಡಿ ಹೆಣ್ಣುಮಕ್ಕಳಿಗೆ ಸಾಗಿಸುತ್ತಿರುತ್ತಾರೆ .ಈ ವಿಷಯ ತಿಳಿದು ಮನಸ್ಸು ಕೆಟ್ಟ ಶಾಮ ತಾಯಿ ಮನೆ ಬಿಟ್ಟು ಮಗಳ ಮನೆಗೆ ತೆರಳಿದಾಗ ತಡೆಯದೆ ಮತ್ತೆ ಗೆಳೆಯ ರಮೇಶನ ಬೆಂಬಲ ಹಾಗೂ ಸಲಹೆಯಂತೆ ಬಡ ಕುಟುಂಬದ ಪ್ರೇಮಾಳನ್ನು ತನ್ನ ಮನೆಯವರಿಗೆ ಯಾರಿಗೂ ತಿಳಿಸದೆ ಮದುವೆಯಾಗುತ್ತಾನೆ..ನಂತರ ಅವರ ಜೀವನವೇ ಕಾದಂಬರಿಯ ಜೀವಾಳ. ವಾಸ್ತವ ಜಗತ್ತಿನ ಅನೇಕ ಮುಖಗಳ ಮುಖವಾಡಗಳ ಅನಾವರಣವನ್ನು ಮಾಡಿಸುವ, ಬದುಕಿನ ದಾರಿಯ ವಿವಿಧ ದೃಶ್ಯಗಳನ್ನು ತೋರಿಸುವ ಈ ಕಥೆ ಸುಗಮವಾಗಿ ಓದಿಸಿಕೊಂಡು ಹೋಗುವುದಷ್ಟೇ ಅಲ್ಲದೆ ಸವಿ ಮಾತುಗಳಿಗೆ ಮರುಳಾಗಿ ಬದುಕನ್ನು ಹಾಳು ಮಾಡಿಕೊಳ್ಳುವಂತಹ ಎಷ್ಟೋ ಹೆಣ್ಣು ಮಕ್ಕಳಿಗೆ ಪಾಠವೂ ಆಗುತ್ತದೆ. ಜೀವನದ ಅರಿವು ತಿಳಿವಿಗೆ ಮಾರ್ಗದರ್ಶಿಯಾಗುತ್ತದೆ,ಒಳಿತು ಕೆಡಕುಗಳ ಪಾಠ ಹೇಳುತ್ತದೆ . ಉತ್ತಮ ಸಾಮಾಜಿಕ ಸಂದೇಶಗಳನ್ನು ಈ ರೀತಿ ಕಥೆಗಳ ಮೂಲಕ ಹೇಳುವುದರಲ್ಲಿ ಲೇಖಕಿಯವರು ಸಿದ್ಧಹಸ್ತರು ಎಂಬುದರಲ್ಲಿ ಎರಡು ಮಾತಿಲ್ಲ . ಮನರಂಜನೆಯ ಜತೆಗೆ ಸಮಾಜದಲ್ಲಿನ ಒಳ್ಳೆಯತನ ಹಾಗೂ ಇಬ್ಬಗೆಯ ನೀತಿ, ಗೋಮುಖ ವ್ಯಾಘ್ರಗಳ ಬಗೆಗಿನ ಅರಿವು ಮೂಡಿಸುವುದರಲ್ಲಿ ಈ ಕಾದಂಬರಿ ಯಶಸ್ವಿಯಾಗುತ್ತದೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books