ನಿಶ್ಶಬ್ದ

Author : ಯಂಡಮೂರಿ ವೀರೇಂದ್ರನಾಥ್

Pages 100

₹ 99.00




Year of Publication: 2022
Published by: ಸಾಹಿತ್ಯ ಪ್ರಕಾಶನ

Synopsys

ನಿಶಬ್ದ ಯಂಡಮೂರಿ ವೀರೇಂದ್ರನಾಥ್‌ ಕಾದಂಬರಿಯಾಗಿದೆ.ಜೀವನ ಆ ಯುವಕನಿಗೆ ಊಟ ಬಡಿಸಿದ ಬಾಳೆ ಎಲೆಯಂತಹದ್ದು. ಆದರೆ ಒಂದು ಕೊರತೆ ಮಾತ್ರವಿತ್ತು. ಹುಡುಗರೂ, ಹುಡುಗಿಯರೂ ಹೇಗೆ ಭೇಟಿಯಾಗುತ್ತಾರೆ. ಏನು ಮಾತಾಡಿಕೊಳ್ಳುತ್ತಾರೆ. ಆಮೇಲಾಮೇಲೆ ಇನ್ನೇನು ಮಾತಾಡಿಕೊಳ್ಳುತ್ತಾರೆಂದು ತಿಳಿದುಕೊಳ್ಳುವ ಬಯಕೆ, ಹಂಬಲ, ತವಕ, ವಿನೋದ ಎಲ್ಲವೂ ಆ ನಿಜವಾದ ಗುಟ್ಟನ್ನು ತಿಳಿದುಕೊಳ್ಳಬೇಕೆಂಬ ಅಭಿಲಾಷೆ ಉಂಟಾಗಿ, ಬಹಳ ವಿಧಾನಗಳಲ್ಲಿ ಪ್ರಯತ್ನಿಸಿದ. ಅದು ಕುಸ್ತಿಯ ಪಟ್ಟುಗಳಂತೆ ಅವನನ್ನು ಹಿಡಿದುಕೊಂಡಾಗ ತಾನೊಬ್ಬ ಸೈಕೋ ಆಗಿಬಿಡುವನೇನೋ ಎಂದು ಹೆದರಿದ. ಒಮ್ಮೆ ಪಟ್ಟಣದಿಂದ ಹಳ್ಳಿಗೆ ಪ್ರಯಾಣ ಮಾಡಿದಾಗ, ಅಲ್ಲಿನ ಗೋದಾವರಿ ನದೀ ತೀರ, ತನ್ನ ಸೋದರ ಮಾವ, ಅಲ್ಲಿಯೇ ಒಬ್ಬಳು ಮುದ್ದು ಸುಂದರಿ. ಆ ನಿಶ್ಯಬ್ದದಲ್ಲಿಯೇ, ಆ ಪ್ರಶಾಂತ ವಾತಾವರಣದಲ್ಲಿಯೇ ಎಲ್ಲವೂ ತಿಳಿದುಬಿಟ್ಟಂತೆ ಮನಸ್ಸು ಹಗುರವಾಗಿತ್ತು. ಆನಂದಭೈರವಿ ರಾಗದಂತೆ ಯುವಜನಕ್ಕೆ ಈ ವಿಷಯಗಳನ್ನೆಲ್ಲಾ ಮುಗ್ಧ ಮನೋಹರವಾಗಿ ಬಾಳೆಯ ಹಣ್ಣು ಸುಲಿದಂತೆ ಎಂದು ಯಂಡಮೂರಿ ವೀರೇಂದ್ರನಾಥ್‌ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books