ಲೇಖಕ ಕೆ.ಎನ್. ಗಣೇಶಯ್ಯ ಅವರು ಬರೆದ ರೋಚಕ ಕಾದಂಬರಿ-ಕಪಿಲಿಸಾರ. ವೈದ್ಯಕೀಯ ಅಂತಾರಾಷ್ಟ್ರೀಯ ಜಾಲದ ಹಿನ್ನೆಲೆಯಲ್ಲಿ ಪಡೆದ ಕಥಾವಸ್ತುವು ಪೌರಾಣಿಕ ಹಾಗೂ ಸಸ್ಯಶಾಸ್ತ್ರವನ್ನು ತನ್ನ ಹಂದರ ವ್ಯಾಪ್ತಿಗೆ ತಂದುಕೊಂಡು ತುಂಬಾ ನಾಜೂಕಾಗಿ ಅಷ್ಟೇ ಪ್ರಭಾವಶಾಲಿಯಾಗಿ ಹೆಣೆದ ಕಾದಂಬರಿ ಇದು. ಈ ಕಾದಂಬರಿ ಪ್ರಕಾರ, ಸಂಜೀವಿನಿ ಸಸ್ಯ ಇಂದಿಗೂ ಇದ್ದು, ಅದನ್ನು ಪಡೆದು ಲಾಭ ಮಾಡಬೇಕೆನ್ನುವ ದುರಾಸೆಯ ಅನಾವರಣವಿದೆ. ಸಂಶೋಧನೆ ಹಾಗೂ ಕಾಲ್ಪನಿಕ ಸನ್ನಿವೇಶಗಳು ತಳುಕು ಹಾಕಿಕೊಂಡಿದ್ದರೂ ಈ ಕೃತಿಯು ಸುಲಭವಾಗಿ ಹಾಗೂ ಕುತೂಹಲಕಾರಿ ಓದಿಸಿಕೊಂಡು ಹೋಗುತ್ತದೆ.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MORE