ಸಾಧ್ಯ ಅಸಾಧ್ಯಗಳ ನಡುವೆ

Author : ಪ್ರಮೋದ ಕರಣಂ (chiದು)

Pages 96

₹ 180.00
Year of Publication: 2020
Published by: ಶಾಶ್ವತ ಪಬ್ಲಿಕೇಷನ್ಸ್,
Address: # 33/426. ರಾಮದಾಸ ನಗರ, ಬಿಲಾಸಪುರ, ಛತ್ತೀಸ್ ಘರ್-495001.
Phone: 9993001841

Synopsys

ಲೇಖಕ ಪ್ರಮೋದ ಕರಣಂ (chiದು) ಅವರ ಚೊಚ್ಚಲ ಕಾದಂಬರಿ-ಸಾಧ್ಯ-ಅಸಾಧ್ಯಗಳ ನಡುವೆ. ಸ್ವತಃ ಲೇಖಕರು ‘ಹೊಸಪೇಟೆ ಹಾಗೂ ಕಲಬುರ್ಗಿಯಲ್ಲಿ ಕೌಟುಂಬಿಕ ಕಟ್ಟುಪಾಡುಗಳ ನಡುವೆ, ದುಶ್ಚಟಗಳ ಬಲೆಗೆ ಬೀಳದೆ ವಿದ್ಯಾಭ್ಯಾಸ ಮುಗಿಸಿ ನೌಕರಿಗಾಗಿ ಬೆಂಗಳೂರಿಗೆ ಬಂದಾಗ, ಅಲ್ಲಿನ ಅಲಿ ಅಸ್ಕರ್ ರಸ್ತೆಯಲ್ಲಿ ನನ್ನ ಕಚೇರಿಗೆ ಸಮಾನಾಂತರ ರಸ್ತೆಯಾಗಿದ್ದ ಕನ್ನಿಂಗ್ಹ್ಯಾಮ್ ರಸ್ತೆಗೆ ಟೀ ಕುಡಿಯಲು ಪ್ರತಿದಿನ ಬೆಳಿಗ್ಗೆ ಹಾಗೂ ಮಧ್ಯಾಹ್ನ ಎರಡು ಬಾರಿ ಅಲ್ಲಿಯ ಅರಸು ಹೋಟೆಲ್ಲಿಗೆ ಹೋಗುತ್ತಿದ್ದಾಗ, ಅದೇ ಹೋಟೆಲ್ಲಿಗೆ ಬರುತ್ತಿದ್ದ ಯುವತಿಯರು ಟೀ/ ಕಾಫಿ ಜೊತೆಗೆ ಸಿಗರೇಟನ್ನು, ಯುವಕರೊಂದಿಗೆ ಸಾರ್ವಜನಿಕವಾಗಿ ಯಾವುದೇ ಮುಚ್ಚುಮರೆ ಸಂಕೋಚವಿಲ್ಲದೆ ಸೇದುವುದನ್ನು, ದಿನವೂ ನೋಡಿ ನೋಡಿ ತಲೆಯಲ್ಲಿ ಹುಟ್ಟಿಕೊಂಡ ಆಲೋಚನೆಗಳ ಸರಮಾಲೆಯೇ ಈ ‘ಸಾಧ್ಯ ಅಸಾಧ್ಯಗಳ ನಡುವೆ’ ಕಾದಂಬರಿ’ ಎಂದು ಹೇಳಿಕೊಂಡಿದ್ದಾರೆ. ವಿಷಯ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ,ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. 

 

About the Author

ಪ್ರಮೋದ ಕರಣಂ (chiದು)
(01 May 1974)

ಲೇಖಕ ಪ್ರಮೋದ ಕರಣಂ (chiದು) ಮೂಲತಃ (ಜನನ: 01-05-1974) ಕಲಬುರಗಿಯವರು. ಬಿ.ಎಸ್.ಸಿ. ಪದವೀಧರರು. ಸದ್ಯ, ಕಲಬುರಗಿಯಲ್ಲಿ ಸಹಕಾರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ‘ಸಾಧ್ಯ ಅಸಾಧ್ಯಗಳ ನಡುವೆ’ -ಇವರ ಮೊದಲ ಕಾದಂಬರಿ.  ...

READ MORE

Related Books