ಕೃಷ್ಣೆ ಹರಿದಳು

Author : ಬಾಳಾಸಾಹೇಬ ಲೋಕಾಪುರ

Pages 396

₹ 290.00
Year of Publication: 2016
Published by: ಕಣ್ವ ಪ್ರಕಾಶನ
Address: ಕಾಳ ಮನಸ್ಸು #894. 1 ನೇ ಮುಖ್ಯ ರಸ್ತೆ, ನಿಸರ್ಗ ಬಡಾವಣೆ, ಚಂದ್ರ ಲೆಔಟ್ ಬೆಂಗಳೂರು.- 560072
Phone: 9343466313

Synopsys

ಲೇಖಕ ಬಾಳಾ ಸಾಹೇಬ ಲೋಕಾಪುರ ಅವರ ಕಾದಂಬರಿ- ಕೃಷ್ಣೆ ಹರಿದಳು. ಕೃತಿಗೆ ಬೆನ್ನುಡಿ ಬರೆದ ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು, ಗ್ರಾಮ ಜಗತ್ತಿನ ಒಳಸುಳಿವುಗಳು, ಸಂಘರ್ಷಗಳು, ಸಂಕಟಗಳು ಹಾಗೂ ಪಲ್ಲಟವನ್ನು ನಿರುದ್ವಿಗ್ನವಾಗಿ ಚಿತ್ರಿಸುವ ’ಕೃಷ್ಣೆ ಹರಿದಳು’ ಕಾದಂಬರಿ ಏಕಾಕೃತಿಯ ಸ್ವರೂಪದ್ದಲ್ಲ; ಅನೇಕ ಎಳೆಗಳ ಹೆಣಿಗೆ ಈ ಕೃತಿಯ ವಿನ್ಯಾಸವನ್ನು ರೂಪಿಸಿದೆ. ಹೀಗಾಗಿ, ಈ ಕಾದಂಬರಿ ಒಂದು ಬಹುಮುಖೀ ಕಥನ. ಭೂಮಿ ಮತ್ತು ಹೆಣ್ಣು ತೀವ್ರ ಆಕ್ರಮಣಕ್ಕೆ ಒಳಗಾಗುತ್ತಿರುವ ನಮ್ಮ ಕಾಲದ ಸಾಮಾಜಿಕ ರಚನೆಯನ್ನು ಈ ಕೃತಿ ಸೃಜನಶೀಲ ನೆಲೆಯಲ್ಲಿ ವಿಶ್ಲೇಷಿಸಲು ಪ್ರಯತ್ನಿಸುತ್ತದೆ.

ಕಾದಂಬರಿಯಲ್ಲಿ ಹೆಣ್ಣು ಅನೇಕ ಸ್ತರಗಳಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳಲು ಹೆಣಗುವುದು ಈ ಕಥಾನಕಕ್ಕೆ ಒಂದು ಬಗೆಯ ಸಾಂಗತ್ಯವನ್ನು ಕಲ್ಪಿಸಿದೆ. ಸ್ತ್ರೀ ಚೈತನ್ಯ ಕಾದಂಬರಿಯ ಜೀವಸೆಲೆ. ಕತೆಯ ಜೀವಶಕ್ತಿಯ ಬಗ್ಗೆ ಗಾಢ ನಂಬಿಕೆಯಿರುವ ಲೋಕಾಪುರ ಅವರಿಗೆ ಕತೆಯೆಂದರೆ ಬದುಕು. ತಮ್ಮ ಪರಿಸರದ ಬದುಕಿನ ಅನೇಕ ವಿನ್ಯಾಸಗಳನ್ನು ಬಾಳಾಸಾಹೇಬ ಇಲ್ಲಿ ದಟ್ಟವಾಗಿ ಕಟ್ಟಿಕೊಡುತ್ತಾರೆ. ನಗರೀಕರಣದ ಉತ್ಪಾತಗಳ ತಲ್ಲಣಗಳ ಜೊತೆಜೊತೆಗೇ ಪರಿಹಾರದ ಸಾಧ್ಯತೆಗಳನ್ನೂ ಸೂಚಿಸುವ ಈ ಕಾದಂಬರಿ, ನಮ್ಮ ಕಾಲದ ಚರಿತ್ರೆಯ ಕಥನವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಬಾಳಾಸಾಹೇಬ ಲೋಕಾಪುರ

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶಿರಹಟ್ಟಿಯವರಾದ ಲೇಖಕ ಬಾಳಾಸಾಹೇಬ ಲೋಕಾಪುರ 1955ರಲ್ಲಿ ಜನಿಸಿದರು. ನವ್ಯೊತ್ತರ ಸಾಹಿತಿಗಳಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂಗೋಳ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ’ ವಿಷಯದಲ್ಲಿ ಪಿಹೆಚ್ ಡಿ ಪಡೆದರು.  ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾದ ಇವರು ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕತಾಸಂಕಲನಗಳು, ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು, ...

READ MORE

Related Books