ಬೆಳದಿಂಗಳ ಬೇಗೆ

Author : ಹೆಚ್.ಜಿ. ರಾಧಾದೇವಿ

Pages 220
Year of Publication: 2018
Published by: ಶ್ರೀ ಲಕ್ಷ್ಮಿ ವೆಂಕಟೇಶ್ವರ ಪ್ರಕಾಶನ
Address: ನ0.298,6ನೇ ಕ್ರಾಸ್ ತ್ರಿವೇಣಿ ರಸ್ತೆ, ಯಶವಂತಪುರ,ಬೆಂಗಳೂರು -560022

Synopsys

ಹೆಚ್. ಜಿ. ರಾಧಾದೇವಿಯವರ ಸಾಮಾಜಿಕ ಕಾದಂಬರಿ ‘ಬೆಳದಿಂಗಳ ಬೇಗೆ’. ಕಾದಂಬರಿಗಾರ್ತಿ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಆಗಿನ ಕಾಲದ ಸಮಕಾಲೀನ ಪರಿಸ್ಥಿತಿಗೆ ತಕ್ಕಂತೆ ಕಥೆಗಳನ್ನು ಬರೆದಿದ್ದಾರೆ. ಅವರ ಅನೇಕ ಕಥೆಗಳಲ್ಲಿ ವರ್ಣನೆ ,ಹಬ್ಬ ಹರಿದಿನಗಳ ಆಚರಣೆ , ಹೆಣ್ಣಿನ ಮನಸ್ಸು ,ಬಡತನ , ಮಾಧ್ಯಮ ವರ್ಗ ಮತ್ತು ಶ್ರೀಮಂತರ ಕಾದಂಬರಿಗಳನ್ನು ಬರೆದಿದ್ದಾರೆ. ರಾಧಾ ದೇವಿ ಅವರ ಕಾದಂಬರಿಗಳನ್ನು ಓದುತ್ತಾ ಹೋದರೆ ಅವು ಇಲ್ಲಿಯೇ ನಮ್ಮ ನಡುವೆ ನಡೆದ ಘಟನೆಗಳು ಎನಿಸುತ್ತವೆ. ನೈಜತೆ ಇರುತ್ತದೆ.ಹಾಗೆಯೇ ಈ ಕಾದಂಬರಿ ಬೆಳದಿಂಗಳ ಬೇಗೆ.

ಇದರಲ್ಲಿ ಯೌವ್ವನದ ಚಂದ್ರಿಕಾ ಮತ್ತು ವಯಸ್ಸಾದ ಅಂಬಮ್ಮ ಇಬ್ಬರ ನಡುವಿನ ಭಾವನೆಗಳು ಮೂಡಿ ಬಂದಿವೆ. ಅಂಬಮ್ಮ ಎರಡು ಹೆಣ್ಣು ಮತ್ತು ಒಂದು ಗಂಡು ಮಗನ ತಾಯಿ.ಪತಿಯಿಲ್ಲದ ವಿಧವೆ.ಮೂರು ಮಕ್ಕಳಿಗೂ ಮದುವೆಯಿಲ್ಲ , ಕಾರಣ ಮೂರು ಜನರ ಬಣ್ಣ ಕಪ್ಪು.ಹಿರಿಯವನಾದ ಮಗ ಶ್ರೀಧರನಿಗೆ ಮದುವೆ ಮಾಡೋಣ ಎಂದು ಕನ್ಯಾ ಅನ್ವೇಷಣೆಯನ್ನು ಮಾಡುತ್ತಾರೆ, ಏಕೆಂದರೆ ಸೊಸೆಯ ದೆಸೆಯಿಂದ ಹೆಣ್ಣು ಮಕ್ಕಳ ಮದುವೆ ಆಗಬಹುದು ಎಂದು.

ಮುದ್ದು ಮೊಗದ ಚೆಲುವೆ ಚಂದ್ರಿಕಾ ಮೊದಲನೇ ನೋಟದಲ್ಲೇ ಶ್ರೀಧರನ ಮನ ಸೆಳೆಯುತ್ತಾಳೆ. ಅದೇನೋ ಅಂಬಮ್ಮ ಅಂದುಕೊಂಡಂತೆ ಚಂದ್ರಿಕಾ ಮನೆಯೊಳಗೆ ಕಾಲಿಟ್ಟ ಘಳಿಗೆ ಬಹಳ ಒಳ್ಳೆಯದಾಗಿ ಅಂದೆ ಮೊದಲ ಮಗಳಿಗೆ ಒಳ್ಳೆಯ ಕಡೆ ವರಸಿಕ್ಕಿ ಮಾರನೇ ದಿನ ನಿಶ್ಚಿತಾರ್ಥ ನಡೆಯುತ್ತದೆ.ವರದಕ್ಷಿಣೆ - ವರೋಪಚಾರ ಏನು ಬೇಡ ಎಂದು ಮದುವೆಯಾಗುತ್ತದೆ. ಚಿಕ್ಕವಳಿಗೆ ಚಂದ್ರಿಕಾ ತಂದೆಯ ಮೂಲಕ ಮದುವೆ ನಿಶ್ಚಯವಾಗಿತ್ತದೆ. ಆದರೆ ಅವರು ಹೆಚ್ಚಿನ ವರದಕ್ಷಿಣೆ - ವರೋಪಚಾರ ತೆಗೆದುಕೊಂಡು ಮದುವೆ ಮಾಡಿ ಕೊಳ್ಳುತ್ತಾರೆ. ಅಂಬಮ್ಮ ಹೆಚ್ಚು ಕಡಿಮೆ ಮಗ ಮದುವೆಯ ಬಗ್ಗೆ ಮರತೆ ಹೋದಂತೆ ನಟಿಸುತ್ತಾರೆ.ಅಲ್ಲದೆ ಚಂದ್ರಿಕಾ ತಂದೆಗೆ ವರದಕ್ಷಿಣೆ ವರೋಪಚಾರ ಕೊಡುವಂತೆ ಕೇಳುತ್ತಾರೆ.ಆದರೆ ವರದಕ್ಷಿಣೆ ಕೊಡುವ ಸ್ಥಿತಿಯಲ್ಲಿ ಚಂದ್ರಿಕಾ ತಂದೆ ಇರುವುದಿಲ್ಲ.

ಶ್ರೀಧರ್ ತಾಯಿಯ ಮಾತಿಗೆ ಬೆಲೆ ಕೊಡದೆ ವರದಕ್ಷಿಣೆಯನ್ನು ತೆಗೆದು ಕೊಳ್ಳದೆ ಚಂದ್ರಿಕಾಳನ್ನು ಮದುವೆಯಾಗುತ್ತಾನೆ. ಆದರೆ ಅಂಬಮ್ಮ ಸೊಸೆಯನ್ನು ಮನೆಯ ಕೆಲಸದವಳ ಹಾಗೆ ನಡೆಸಿ ಕೊಳ್ಳುತ್ತಾರೆ. ಅವಳನ್ನು ಅಲಂಕರಿಸಿ ಕೊಳ್ಳಲು , ಬಿಡದೆ ಬರೀ ಮೂರು ಹೊತ್ತು ಮನೆಕೆಲಸ ಮಾಡಿಸುತ್ತಾರೆ.ಆದರೆ ಯುವತಿಯಾದ ಚಂದ್ರಿಕಳಿಗೆ ವಯೋಸಹಜವಾಗಿ ಮದುವೆಯ ನಂತರ ಚೆನ್ನಾಗಿ ಅಲಂಕರಿಸಿ ಕೊಳ್ಳಬೇಕು , ಗಂಡನ ಜೊತೆ ಸಿನಿಮಾ , ಪಾರ್ಕ್ ಹೀಗೆ ಸುತ್ತಬೇಕು ಎನ್ನುವ ಆಸೆ ಇರುತ್ತದೆ. ಅಲ್ಲದೆ ಮನೆ ಆಧುನಿಕವಾಗಿ ಮನೆ ಇರಬೇಕು ಎನ್ನುವ ಆಸೆ ಇರುತ್ತದೆ.ಆದರೆ ಅಂಬಮ್ಮ ಅದಕ್ಕೆ ಅವಕಾಶ ಕೊಡದೆ ಕಟ್ಟಿಗೆ ಒಲೆಯ ಮೇಲೆ ಅಡುಗೆ ಮಾಡು , ದಿನಾಲೂ ಒಲೆ ಸಾರಿಸುವುದು ಹೀಗೆ ಕೆಲಸವಿರುತ್ತದೆ.ಶ್ರೀಧರ್ ಮತ್ತು ಚಂದ್ರಿಕಾ ನಡುವೆ ಇರುವ ವಯಸ್ಸಿನ ಅಂತರದಿಂದ ಶ್ರೀಧರ್ ಚಂದ್ರಿಕಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಅಸಫಲನಾಗುತ್ತನೆ. ಒಮ್ಮೆ ಚಂದ್ರಿಕ ಜ್ವರ ಬಂದು ಮಲಗಿದಾಗ ತನ್ನ ಭಾವನೆಗಳನ್ನು ಹೇಳಿ ಕೊಳ್ಳುತ್ತಾಳೆ.ಶ್ರೀಧರ್ ನಂತರ ತನ್ನ ನಡುವಳಿಕೆಯನ್ನು ತಿದ್ದಿ ಕೊಳ್ಳುತ್ತಾನೆ. ನಂತರ ಎರಡನೇ ಮಗಳು ಗಂಡನ ಮನೆಯಲ್ಲಿ ತೊಂದರೆ ಅನುಭವಿಸಿ ತವರಿಗೆ ಬಂದಾಗ ಅಂಬಮ್ಮನವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ.

ಚಂದ್ರಿಕಾ ಗರ್ಭಿಣಿಯಾಗುತ್ತಾಳೆ. ಚಂದ್ರಿಕಾ ತವರಿಗೆ ಹೋದಾಗ ಶ್ರೀಧರ್ ಚಂದ್ರಿಕಳ ವಿವಾಹ ಪೂರ್ವ ಪ್ರೇಮದ ಬಗ್ಗೆ ತಿಳಿದು ಕೊಳ್ಳುತ್ತಾನೆ.ಮುಂದೆ ? ಶ್ರೀಧರ್ ಚಂದ್ರೀಕಳನ್ನು ಕ್ಷಮಿಸುವನೆ ? , ಅವರಿಬ್ಬರ ಪ್ರೀತಿಯ ಕುಡಿ ಭೂಮಿಗೆ ಬರುತ್ತದೆಯೇ ಎಂಬೆಲ್ಲ ಓದುಗರ ಪ್ರಶ್ನೆಗೆ ಈ ಕಾದಂಬರಿಯ ಓದು ಉತ್ತರ ನೀಡಲಿದೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books