ಹೇಮ ವಿಹಾರಿ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 152

₹ 120.00




Year of Publication: 2012
Published by: ದಿವ್ಯಚಂದ್ರ ಪ್ರಕಾಶನ,
Address: # 6/7, ಕಾಳಿಕಾಸೌಧ, ಪೂರ್ಣಯ್ಯ ಛತ್ರಂ ರಸ್ತೆ, ಕಾರ್ಪೋರೇಷನ್ ವಾರ್ಡ್ ಕಚೇರಿ ಎದುರು, ಬಳೇಪೇಟೆ, ಬೆಂಗಳೂರು-560053
Phone: 9448259595

Synopsys

ಖ್ಯಾತ ಕಾದಂಬರಿಗಾರ್ತಿ ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ) ಅವರು ರಚಿಸಿದ ಸಾಮಾಜಿಕ ಕಾದಂಬರಿ-ಹೇಮ ವಿಹಾರಿ. ಸಾಮಾಜಿಕ ವಿಷಯ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. ಬದುಕು, ಪ್ರೇಮ, ನಿಸರ್ಗ, ಕುಟುಂಬ, ವೈಮನಸ್ಸು, ತ್ಯಾಗ ಹೀಗೆ ಸುತ್ತಲಿನ ಪರಿಸರದಲ್ಲಿಯ ಪ್ರತಿಯೊಂದು ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಕಾದಂಬರಿಯ ವಸ್ತುವಿನ ಆಯ್ಕೆಯ ಪ್ರಕ್ರಿಯೆಯು ಈ ಲೇಖಕಿಯ ಬರಹವು ಓದುಗರನ್ನು ಸೆಳೆಯುವ ಪ್ರಮುಖ ಅಂಶವಾಗಿದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books