ಬೆಳ್ಳೆ ರಾಮಚಂದ್ರರಾಯರ ಎರಡು ಕಾದಂಬರಿಗಳು

Author : ಬೆಳ್ಳೆ ರಾಮಚಂದ್ರರಾಯ

Pages 440

₹ 200.00




Year of Publication: 2009
Published by: ಕರ್ನಾಟಕ ಸಂಘ
Address: ಬಿ. ಎಚ್. ರೋಡ್, ಶಿವಮೊಗ್ಗ, 577201
Phone: 277406

Synopsys

’ಬೆಳ್ಳೆ ರಾಮಚಂದ್ರರಾಯರ ಎರಡು ಕಾದಂಬರಿಗಳು’ ಕೃತಿಯಲ್ಲಿ ’ಚಿರವಿರಾಹಿ’   ಮತ್ತು’ರಾಯರು ಕಂಡ ರಂಗು’ ಎಂಬ ಎರಡು ಕಾದಂಬರಿಗಳಿವೆ. 

1953 ರಲ್ಲಿ ಪ್ರಕಟಗೊಂಡ ಬೆಳ್ಳೆರಾಮಚಂದ್ರ ರಾಯರ ’ಚಿರವಿರಹಿ’ ಕಾದಂಬರಿ ಕನ್ನಡ ಸಾಹಿತ್ಯದ ಮಹತ್ವದ ಕೃತಿಗಳಲ್ಲೊಂದು. ಕಾದಂಬರಿಯ ನಡೆ ಸುಲಲಿತ, ಸಂಭಾಷಣೆಯ ವಿವರಣೆಯ ನಿರೂಪಣೆಯ ಸರಳವಾಗಿ ಪರಿಣಾಮಕಾರಿ ಮತ್ತು ಪ್ರಭಾವಶಾಲಿಯಾಗಿದೆ.

’ರಾಯರು ಕಂಡ ರಂಗು’ಕಾದಂಬರಿಯಲ್ಲಿ ರಂಗರಾಯರ ಬದುಕು ತನ್ನ ಕೃತಕ ಪಂಜರವನ್ನು ಕಳಚಿಕೊಂಡು ಹೊಸ ಹಾದಿಯನ್ನು ಹಿಡಿದಾಗಲೂ ಅದೊಂದು ವಿಶೇಷವೆಂಬಂತೆ ನಿರೂಪಣೆಯಿಲ್ಲ. ಬದಲಾಗಿ ಈ ಮಧ್ಯೆ ಲೋಕ ಅದರ ಪಾಡಿಗೆ ಅದು ಸಾಗುತ್ತಿತ್ತು ರಂಗರಾಯರ ಗೊಡವೆಯಿಲ್ಲದೆ, ರಂಗರಾಯರಂಥ ಆತ್ಮಸಾಕ್ಷಿಯ ಭೂತಗ್ರಸ್ತರಾದ ಯಾರ ಗೊಡವೆಯೂ ಇಲ್ಲದೆ. ಎಂಬ ನಿರೂಪಣೆಯಿದೆ. 

Related Books