ಅತಂತ್ರರು (ಕಾದಂಬರಿ)

Author : ಬಿ.ಎಲ್.ವೇಣು

Pages 168

₹ 135.00




Year of Publication: 2021
Published by: ಕೀರ್ತಿ ಪಬ್ಲಿಕೇಷನ್ಸ್
Address: # 230, ಬಿಲ್ಡಿಂಗ್ 167, ಕೆ.ಎಚ್.ಬಿ. ಅಪಾರ್ಟ್ ಮೆಂಟ್, ಕೆಂಗೇರಿ ಉಪನಗರ, ಬೆಂಗಳೂರು-560060

Synopsys

ಖ್ಯಾತ ಕಾದಂಬರಿಕಾರ ಬಿ.ಎಲ್. ವೇಣು ಅವರು ರಚಿಸಿದ ಕಾದಂಬರಿ -ಅತಂತ್ರರು. ಈಗಾಗಲೇ ಕನ್ನಡ ಕಾದಂಬರಿ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಲೇಖಕರು ತಮ್ಮ ವಸ್ತುವಿನ ವೈವಿಧ್ಯಮಯತೆಯಿಂದಾಗಿ ಓದುಗರ ಗಮನ ಸೆಳೆದಿದ್ದು, ಅತಂತ್ರರು ಈ ಕಾದಂಬರಿಯು ಸಹ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಹಾಗೂ ಸನ್ನಿವೇಶಗಳ ಜೋಡಣೆಯ ಕಲಾತ್ಮಕತೆಯಿಂದ ಓದುಗರನ್ನು ಆಕರ್ಷಿಸಿದೆ. ಈ ಕಾದಂಬರಿಯು ‘ಸುಧಾ’ ವಾರಪತ್ರಿಕೆ ನಡೆಸುವ ಸ್ಪಧೆಯಲ್ಲಿ ಬಹುಮಾನ ಪಡೆದಿದೆ.

About the Author

ಬಿ.ಎಲ್.ವೇಣು
(05 May 1945)

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. ಬಣ್ಣಗಳು, ದೊಡ್ಡ ಮನೆ, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ, ಬಣ್ಣದ ಗೊಂಬಿ (ಕಥಾ ಸಂಕಲನಗಳು), ಪರಾಜಿತ, ಪ್ರೇಮಪರ್ವ, ಅಜೇಯ, ಬೆತ್ತಲೆ ಸೇವೆ, ಅತಂತ್ರರು, ಗಂಡುಗಲಿ ಮದಕರಿ ನಾಯಕ, ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ದ, ಹೆಬ್ಬುಲಿ ಹಿರೇಮದಕರಿನಾಯಕ (ಮುಂತಾದ 26 ಕಾದಂಬರಿಗಳು), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ (ಮಿನಿ ಕಾದಂಬರಿಗಳು), ಯಮಲೋಕದಲ್ಲಿ ಮಾನವ, ಭೂಲೋಕಕ್ಕೆ ಬಂದ ಬಸವಣ್ಣ, ...

READ MORE

Related Books