ಯಜ್ಞಕುಂಡ

Author : ಕಡೆಂಗೋಡ್ಲು ಶಂಕರಭಟ್ಟ

Pages 189

₹ 1.00
Year of Publication: 1932
Published by: ಬಾಲಸಾಹಿತ್ಯ ಮಂಡಲ
Address: ಕೊಡಿಯಾಲ್ ಬೈಲ್, ಮಂಗಳೂರು

Synopsys

ಕಡಂಗೊಡ್ಲುಶಂಕರ ಭಟ್ಟರು ಬರೆದ ಐತಿಹಾಸಿಕ ನಾಟಕ- ಯಜ್ಞಕುಂಡ. ಅಹಮ್ಮದ್ ಷಾ, ಆಹೋರಿನ ಕೋಟೆ, ಲೀಲಾವತಿಯ ಧೈರ್ಯ, ವಿಕ್ರಮ, ಶಾರ್ದೂಲಾ, ಅಜೀಂ, ಬೀಬಿ, ಮಧು, ರಾಮಸಿಂಗ್, ಪರ್ವತಸಿಂಗ್ ಹೀಗೆ ಪಾತ್ರಧಾರಿಗಳ ಮೂಲಕ ಸ್ವಾಭಿಮಾನಿ ಹೆಣ್ಣಿನ ಕಥೆಯನ್ನು ಹೇಳುವ ರಜಪೂತ ಕಾಲದ ನಾಟಕವಿದು.

 

About the Author

ಕಡೆಂಗೋಡ್ಲು ಶಂಕರಭಟ್ಟ
(09 August 1904 - 17 May 1968)

ಕನ್ನಡದ ನವೋದಯ ಕವಿ- ಸಾಹಿತಿಗಳ ಪೈಕಿ ಕಡೆಂಗೋಡ್ಲು ಶಂಕರಭಟ್ಟರು ಪ್ರಮುಖರು. 1904ರ ಆಗಸ್ಟ್ 9ರಂದು ಜನಿಸಿದರು. ತಂದೆ ಈಶ್ವರಭಟ್ಟ ತಾಯಿ ಗೌರಮ್ಮ. ಪ್ರಾರಂಭದ ವಿದ್ಯಾಭ್ಯಾಸ ಮುಳಿಯ ತಿಮ್ಮಪ್ಪಯ್ಯನವರ ಮನೆಯಲ್ಲಿ ಮಂಗಳೂರಿನಲ್ಲಿ ನಡೆಯಿತು. ಮದರಾಸಿನ ವಿಶ್ವವಿದ್ಯಾನಿಲಯದಲ್ಲಿ ವಿದ್ವಾನ್ ಪದವಿ ಗಳಿಸಿದರು. 1927ರಲ್ಲಿ ಮಂಗಳೂರಿನ  ಸೆಂಟ್ ಅಗ್ನೆಸ್ ಕಾನ್ವೆಂಟಿನಲ್ಲಿ ಕನ್ನಡ ಅಧ್ಯಾಪಕ ಕೆಲಸಕ್ಕೆ ಸೇರಿ 1964ರಲ್ಲಿ ನಿವೃತ್ತರಾದರು. ರಾಷ್ಟ್ರಬಂಧು ಪತ್ರಿಕೆಯ (1953-1968) ಸಂಪಾದಕರಾಗಿದ್ದರು, 1927ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ‘ಪಂಚಕಜ್ಜಾಯ’ ನೆನಪಿನ ಸಂಚಿಕೆಗೆ ಶ್ರಮಿಸಿದರು. ನವಯುಗ, ರಾಷ್ಟ್ರಮತ ವಾರಪತ್ರಿಕೆಗಳಿಗೂ ಸ್ವಲ್ಪ ಕಾಲ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. 1932ರಲ್ಲಿ ಮಡಿಕೇರಿಯಲ್ಲಿ ...

READ MORE

Related Books