ಓದಿರಿ

Author : ಬೊಳುವಾರು ಮಹಮದ್ ಕುಂಞ್

Pages 250

₹ 220.00




Published by: ಮುತ್ತುಪ್ಪಾಡಿ ಪುಸ್ತಕ
Phone: 876 2800786

Synopsys

ಪ್ರವಾದಿ ಮುಹಮ್ಮದ್ ಪೈಗಂಬರರ ಜೀವನಾಧಾರಿತ ಮೊತ್ತ ಮೊದಲ ಕಾದಂಬರಿ. ಪ್ರವಾದಿ ಮುಹಮ್ಮದರನ್ನು ಧಾರ್ಮಿಕ ವ್ಯಕ್ತಿಗಳು ಕಟ್ಟಿಕೊಟ್ಟಿರುವುದನ್ನು ನಾವು ಓದಿದ್ದೇವೆ. ಪ್ರವಾದಿ ಮುಹಮ್ಮದರನ್ನು ಎಲ್ಲ ಧರ್ಮ, ವರ್ಗದ ಜನರಿಗೆ ಸಾರ್ವತ್ರಿಕಗೊಳಿಸಿದ ಹೆಗ್ಗಳಿಕೆ ಈ ಕಾದಂಬರಿಯದು. ಹಾಗೆ ನೋಡಿದರೆ ಕಾದಂಬರಿಕಾರರದು ಹಗ್ಗದ ಮೇಲಿನ ನಡಿಗೆ, ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಬೊಳುವಾರು ಬೊಳುವಾರು ಮಹಮದ್ ಕುಂಞ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅತ್ಯಂತ ಭಾವ ತೀವ್ರತೆಯಲ್ಲಿ ಪ್ರವಾದಿಯ ವ್ಯಕ್ತಿತ್ವವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರವಾದಿಯ ಬಾಲ್ಯಕಾಲ, ಯೌವನ ಮತ್ತು ಹೋರಾಟದ ಕಾಲ ಹೀಗೆ ಮೂರು ಘಟ್ಟಗಳನ್ನು ಅಂತರಂಗ, ಬಹಿರಂಗ ಮತ್ತು ಚದುರಂಗ ಎಂದು ವಿಂಗಡಿಸಿದ್ದಾರೆ. ಅಂದರೆ ಮೊದಲನೆಯದು ಅವರೊಳಗಿನ ಚಿಂತನೆ ಆಲೋಚನೆಗಳ ಸಂಘರ್ಷ ವನ್ನು ತಿಳಿಸುತ್ತದೆ. ಎರಡನೆ ಭಾಗದಲ್ಲಿ, ಅದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಹಂತಕ್ಕೆ ಇಳಿಯುತ್ತಾರೆ. ಮೂರನೆಯದಾಗಿ, ಅದರ ಅನುಷ್ಠಾನಕ್ಕಾಗಿ ಅವರು ನಡೆಸಿದ ಹೋರಾಟಗಳನ್ನು ತೆರೆದಿಡುತ್ತಾರೆ. ಪ್ರವಾದಿ ಮುಹಮ್ಮದರನ್ನು ಅರಿತವರು ಮತ್ತು ಅರಿಯದವರು ಜೊತೆಗೂಡಿ ಓದಬೇಕಾದ ಕೃತಿಯಾಗಿದೆ ಇದು.

About the Author

ಬೊಳುವಾರು ಮಹಮದ್ ಕುಂಞ್
(22 October 1951)

ಕನ್ನಡದ  ವಿಶಿಷ್ಟ ಕತೆಗಾರ ಬೊಳುವಾರು ಮಹಮದ್ ಕುಂಞ್   ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ‘ಅತ್ತ, ಇತ್ತಗಳ ಸುತ್ತಮುತ್ತ’. ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡು ಗೋಡೆ, ಅವರ ಕಥಾಸಂಗ್ರಹಗಳು. ತಟ್ಟು ಚಪ್ಪಾಳೆ ಪುಟ್ಟ ಮಗು ಅವರು ಸಂಪಾದಿಸಿದ ಮಕ್ಕಳ ಪದ್ಯಗಳ ಸಂಕಲನ. ಜಿಹಾದ್, ಸ್ವಾತಂತ್ರ್ಯದ ಓಟ, ಓದಿರಿ ಅವರ ಕಾದಂಬರಿಗಳು. ಬ್ಯಾಂಕ್ ಉದ್ಯೋಗಿಯಾಗಿ ನಾಲ್ಕು ದಶಕ ಕೆಲಸ ಮಾಡಿ ನಿವೃತ್ತರಾಗಿರುವ ಬೊಳುವಾರರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಂ ಬದುಕನ್ನು ಮೊತ್ತ ಮೊದಲು ಪರಿಚಯಿಸಿದ ಇವರು, ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಎಂಬ ...

READ MORE

Related Books