ಕೊನೆಗಾಣದ ರಾತ್ರಿ

Author : ಸಿ.ಎಸ್. ನಾಗೇಶ್ ಕುಮಾರ್

Pages 194

₹ 220.00
Year of Publication: 2022
Published by: ನೋಷನ್ ಪ್ರೆಸ್
Address: 38, ಎಂಸಿ ನಿಕೋಲಸ್ ರಸ್ತೆ, ಚೆಟ್‌ಪರಟ್‌, ಚೆನ್ನೈ, ತಮಿಳುನಾಡು-600031
Phone: 9036805460

Synopsys

ಕಾದಂಬರಿಕಾರ ನಾಗೇಶ್ ಕುಮಾರ್ ಸಿ.ಎಸ್ ಅವರ ಕಾದಂಬರಿ ಕೊನೆಗಾಣದ ರಾತ್ರಿ. ಇದು ಅಲಿಸ್ಟೆರ್‍ ಮೆಕ್ಲಿನ್ ಅವರ ನೈಟ್ ವಿದೌಟ್ ಎಂಡ್ ಕೃತಿಯ ಅನುವಾದವಾಗಿದೆ. ಇದು ಯೂರೋಪ್ ಖಂಡದ ಹಿಮಗಟ್ಟಿದ ಗ್ರೀನ್ಲ್ಯಾಂಡಿನ ನಿರ್ಜನ ಪ್ರದೇಶದಲ್ಲಿ ನಡೆಯುವ ಹವಾಮಾನ ಸಂಶೋಧಕ ಕ್ಯಾಂಪಿನ ಹಿನ್ನೆಲೆಯಲ್ಲಿ, ಅಲ್ಲಿನ ಅತಿ ಉಗ್ರ ಶೀತದ ಹವಾಮಾನ, ಅಲ್ಲಿ ಜೀವಂತವಾಗಿದ್ದು ಕರ್ತವ್ಯ ಮಾಡಬಂದ ವಿಜ್ಞಾನಿ ತಂಡದವರ ಕಥೆಯಾಗಿದೆ. ಅಲ್ಲೆಲ್ಲಾ ಹಾರಾಡಲು ಯಾವುದೇ ವಾಯುಮಾರ್ಗವಿಲ್ಲದಿದ್ದರೂ ಇದ್ದಕ್ಕಿದ್ದಂತೆ ಒಂದು ಪ್ರಯಾಣಿಕ ವಿಮಾನ ಗಗನದಿಂದ ಬಿದ್ದು ನೆಲಕ್ಕಪ್ಪಳಿಸುತ್ತದೆ. ಆಗ ನಾಯಕ, ವಿಜ್ಞಾನಿ ಡಾ// ಮೇಸನ್ ಮತ್ತು ಗಾಯಗೊಂಡ ಉಳಿದ ಬೇರೆ ಬೇರೆ ಸಾಮಾಜಿಕ ಹಿನ್ನೆಲೆ ಮತ್ತು ವ್ಯಕ್ತಿತ್ವವುಳ್ಳ 10 ಪ್ರಯಾಣಿಕರು ಬದುಕುಳಿಯಲು ಕ್ಲಿಷ್ಟ ಸಾಹಸ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ...ಆದರೆ ಅಲ್ಲಿ ಇನ್ನೇನೋ ಗುಪ್ತ ರಹಸ್ಯ ಅಡಗಿದ್ದಂತೆ ಕೆಲವರ ಕೊಲೆಗಳು, ವಿಧ್ವಂಸಕ ಅಪರಾಧಗಳು ನಡೆಯುತ್ತವೆ. ಅವರ ಮಧ್ಯದಲ್ಲೇ ಇರುವ ಈ ದುಷ್ಟ ಯಾರು? ಆ ವಿಮಾನ ಯಾರೂ ಇಲ್ಲದ ಈ ಹಿಮಭೂಮಿಗೆ ಬಂದು ಬಿದ್ದಿದ್ದಾದರೂ ಏಕೆ? ಮೊದಲ ಪ್ರಶ್ನೆ- ಆ ವಿಮಾನದ ಪೈಲೆಟ್ಟಿಗೆ ಗುಂಡು ಹೊಡೆದು ಕೊಂದಿದ್ದು ಯಾರು ಮತ್ತು ಏಕೆ?

About the Author

ಸಿ.ಎಸ್. ನಾಗೇಶ್ ಕುಮಾರ್

ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್‌. ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತೀಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ...

READ MORE

Related Books