ವರ್ಣಕ

Author : ಕೆ.ಪಿ. ರಾವ್ (ಕಿನ್ನಿಕಂಬಳ ಪದ್ಮನಾಭರಾವ್)

Pages 480

₹ 450.00
Year of Publication: 2021
Published by: ಅಂಕಿತ ಪುಸ್ತಕ
Address: 53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 08026617100

Synopsys

‘ವರ್ಣಕ’ ತತ್ವಶಿಲೆಯಲ್ಲಿ ಮತ್ತೆ ಜೀವತಳೆದ ಭಾಷಾವಿಲಾಸ’- ಭಾರತೀಯ ಭಾಷಾ ಗಣಕ ಪಿತಾಮಹರೆಂದೇ ಪ್ರಸಿದ್ಧರಾದ ಕೆ.ಪಿ. ರಾವ್ ಅವರ ಕಾದಂಬರಿ. ಕಲ್ಪನೆ, ತಾರ್ಕಿಕತೆಗಳನ್ನು ಮೇಳವಿಸಿಕೊಂಡ ವಿಶಿಷ್ಟ ಕಾದಂಬರಿ 'ವರ್ಣಕ'. ಈ ಕೃತಿಗೆ ಎನ್. ತಿರುಮಲೇಶ್ವರ ಭಟ್ಟ ಅವರು ಮುನ್ನುಡಿ ಬರೆದಿದ್ದಾರೆ. ವರ್ಣಕ ಎಂಬ ಕೃತಿ ಸ್ಪಷ್ಟವಾಗಿ ಕಥನ ರೂಪದಲ್ಲಿದೆ. ಆದರೆ ಮೊದಲಿಂದ ಕೊನೆಯವರೆಗೂ ಕಥನ ಒಂದೇ ರೀತಿಯದಲ್ಲ. ನಿಜ, ಸರ್ವಜ್ಞರಾದ ಕಥನಕಾರರೊಬ್ಬರನ್ನು ಇಲ್ಲಿ ಗುರುತಿಸುವುದು ಸಾಧ್ಯ ಎನ್ನುತ್ತಾರೆ ತಿರುಮಲೇಶ್ವರ ಭಟ್ಟ. ಕೃತಿಯ ಶರೀರದಲ್ಲಿ ಸ್ಪಷ್ಟವಾಗಿ ಮೂರು ಭಾಗಗಳನ್ನು ಗುರುತಿಸಬಹುದು. ಮೊದಲ ಭಾಗದಲ್ಲಿ ಸರ್ವಜ್ಞರಾದ ನಿರೂಪಕರೊಬ್ಬರು ಶಂಭು ಮಹಾಜನರನ್ನು ಪರಿಚಯಿಸುತ್ತಾರೆ. ಆದರೆ ಅವರ ಪೂರ್ವ ವೃತ್ತಾಂತವು ಅವರೇ ಮನಸ್ಸಿನಲ್ಲಿ ನೆನಪಿಸಿಕೊಳ್ಳುವಂತೆ ರಚನೆಯಾಗಿದೆ. ಅಂದರೆ ಇಲ್ಲಿ ಸಿಂಹಾವಲೋಕನ ಅಥವಾ ಫ್ಲಾಶ್-ಬ್ಯಾಕ್ ತಂತ್ರಗಾರಿಕೆಯ ಉಪಯೋಗವಾಗಿದೆ. ಇವುಗಳಲ್ಲಿ ಒಂದರಲ್ಲಿ ಶಂಭು ಮಹಾಜನರು ವಿದೇಶಿಕನ್ಯೆಯನ್ನು ವರಿಸುವ ತಮ್ಮ ನಿರ್ಣಯವನ್ನು ತಮ್ಮ ಹೆತ್ತವರಿಗೆ ತಿಳಿಸುವ ಆಶಯದಿಂದ ಬಂದು ತಂದೆಯವರಿಂದ ಅವಮಾನಿತರಾಗಿ ಮರಳಿ ವಿದೇಶಕ್ಕೆ ಹೋಗುವ ಸಂದರ್ಭ. ಇದರಲ್ಲಿ ಭಾಷಾ ಸಂಬಂಧಿ ವಿಚಾರಗಳು ಕ್ವಚಿತ್ತಾಗಿ ಇವೆ ಎನ್ನುತ್ತಾರೆ ತಿರುಮಲೇಶ್ವರ ಭಟ್ಟ.

About the Author

ಕೆ.ಪಿ. ರಾವ್ (ಕಿನ್ನಿಕಂಬಳ ಪದ್ಮನಾಭರಾವ್)
(29 January 1940)

ಕೆ.ಪಿ. ರಾವ್ ಭಾರತೀಯ ಭಾಷಾ ಗಣಕ ಪಿತಾಮಹರೆಂದೇ ಪ್ರಸಿದ್ಧರಾಗಿದ್ದಾರೆ. ಇವರ ಮೂಲ ಹೆಸರು ಕಿನ್ನಿಕಂಬಳ ಪದ್ಮನಾಭರಾವ್, ಇವರು 29 ಫೆಬ್ರವರಿ 1940ರಂದು ಜನಿಸಿದರು. ಗಣಕ ಪಿತಾಮಹರೆಂದೇ ಪ್ರಸಿದ್ದರಾದ ರಾವ್ ತಾಂತ್ರಿಕ ತರಬೇತಿ ಪಡೆದದ್ದು ಟಾಟಾ ಅಣುಶಕ್ತಿ ಸಂಶೋಧನಾ ವಿಭಾಗದಲ್ಲಿ. ಸ್ನಾತಕೋತ್ತರ ಕಂಪ್ಯೂಟರ್ ಇಂಜಿನಿಯರಿಂಗ್ ಶಿಕ್ಷಣ ಪಡೆದದ್ದು ಅಮೆರಿಕಾದ ಪುರ್ದೂ ವಿಶ್ವವಿದ್ಯಾಲಯದಲ್ಲಿ. ವ್ಯಾಸಂಗದ ನಂತರ ಟಾಟಾ ಸಂಸ್ಥೆ-ಹೊಮಿಭಾಭಾ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದ ಅವರು ನಂತರ ಬೆಂಗಳೂರಿನ ಮೊನೋಟೈಪ್ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ್ದರು. ನಿವೃತ್ತಿ ಬಳಿಕ ಮಣಿಪಾಲದ ಎಂ.ಐ.ಟಿಯಲ್ಲಿ ಪ್ರಿಂಟಿಂಗ್ ಟೆಕ್ನಾಲಜಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಲ್ಲದೆ. ಕ್ವಾರ್ಕ್ ಎಕ್ಸ್ ಪ್ರೆಸ್, ...

READ MORE

Related Books