ಪಾಡು

Author : ಲಕ್ಷ್ಮಣ ಕೊಡಸೆ

Pages 132

₹ 50.00
Year of Publication: 2009
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಗೋಕುಲಂ 3ನೇ ಹಂತ, ಮೈಸೂರು-570002

Synopsys

ಪಾಡು-ಲೇಕಕ ಲಕ್ಷ್ಮಣ ಕೊಡಸೆ ಅವರ ಕಾದಂಬರಿ. ಎರಡು ಅಂತರ್ ಜಾತೀಯ ಎರಡು ವಿವಾಹಿತ ಕುಟುಂಬಗಳ ಪಾತ್ರಗಳು ಪ್ರಮುಖವಾಗಿರುವ ಕಾದಂಬರಿ. ಒಂದು ದಿನದ ಅವಧಿಯಲ್ಲಿ ಇಡೀ ಕಾದಂಬರಿಯ ಘಟನೆಗಳು ನಡೆಯುವಂಥ ಕಥಾ ಸಂವಿಧಾನ ಓದುಗರ ಗಮನ ಸೆಳೆಯುತ್ತದೆ. 

About the Author

ಲಕ್ಷ್ಮಣ ಕೊಡಸೆ
(12 April 1953)

ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.  ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.    ...

READ MORE

Reviews

`ಹಳ್ಳಿ ಮತ್ತು ಪಟ್ಟಣ ಅಥವಾ ನಗರ ಜೀವನ ವರ್ಣನೆಯಲ್ಲಿ ಯುವಜನರ ಗಮನ ನಗರ ಜೀವನದ ಕಡೆಗೆ ಇರುವುದು ಕಾಣುತ್ತದೆ. ದೇಹ ಶ್ರಮದ ದುಡಿಮೆ ಮಾಡುವುದಕ್ಕಿಂತ ಸರ್ಕಾರಿ ನೌಕರಿಯ ಕಡೆಗೆ ಅವರು ಆಕರ್ಷಿತರಾಗಿದ್ದಾರೆ. ಗ್ರಾಮೀಣ ಬದುಕಿನಲ್ಲಿ ಕಾಂತಿಯುಕ್ತವಾಗಿರುವ ಬಾಂಧವ್ಯ, ಸಾಮರ್ಥ್ಯ, ಬಾವುಣಿಕೆ ಸುಂದರವಾಗಿ ಕೃತಿಗೊಂಡಿದೆ.
    ಪಾತ್ರ್ರಗಳಾಡುವ ಮಾತುಕತೆ ದಿನನಿತ್ಯದ ಕನ್ನಡ ನುಡಿಯಾಗಿದೆ ಎಂದು ಮೇಲೆ ಅಲ್ಲಲ್ಲೆ ಉಲ್ಲೇಖಿಸಿರುವ ಸಂಭಾಷಣೆಯಿಂದ ತಿಳಿಯುತ್ತದೆ. ಸಂವಾದದ ಭಾಷೆ ಆಯಾ ಪಾತ್ರದ ಸ್ವಭಾವವನ್ನು ಪ್ರಕಟಿಸುವ ಪರಿಯಲ್ಲಿ ಪ್ರಯೋಗವಾಗಿದೆ. ಕಾದಂಬರಿಯ ಶೈಲಿ ಸ್ವಾರಸ್ಯಕರವಾಗಿ ಓದಿಸಿಕೊಳ್ಳುತ್ತದೆ. `ಈಳಿಗೆ ಮಣೆಯಿಂದ ಕೊಯ್ಯುವಂತೆ ಹೇಳಿ', `ನಾಯಿ ಬಾಯಿಗೆ ಕೋಲು ಹೆಟ್ಟುವ ಹಾಗೆ ಹಾರನ್ನು ಬಾರಿಸುತ್ತಾನೆ' - ಇಂಥ ಹೊಸ ಹೋಲಿಕೆಗಳಿವೆ.
    ಛತ್ರಿಯನ್ನು ಬಿಚ್ಚಿದರೆ ಹರಡಿಕೊಳ್ಳುತ್ತದೆ. ಆದರೆ ಅದರ ಎಲ್ಲ ತಂತಿಗಳೂ ಅವುಗಳ ಮೇಲಿನ ಮುಚ್ಚು ಬಟ್ಟೆಯೂ ಕೇಂದ್ರಕ್ಕೆ ಕಚ್ಚಿಕೊಂಡಿರುತ್ತವೆ. ಮುಚ್ಚಿದಾಗ ಕೊಡೆಯ ಕಡ್ಡಿಗಳೆಲ್ಲ ಮುಚ್ಚುಬಟ್ಟೆ ಸಮೇತ ಒಂದೆಡೆ ಬಂದು ಸೇರುತ್ತವೆ. ಈ ರೀತಿ ಇದೆ ಈ ಕಾದಂಬರಿಯ ಕಥಾಬಂಧ. ಕೃತಿಯ ಘಟನೆಗಳು ಸ್ವತಂತ್ರವಾಗಿ ನಡೆಯುವಂತೆ ಕಂಡರೂ ಒಂದು ಅಥವಾ ಸಮಗ್ರ ದೃಷ್ಟಿಗೆ ಒಳಪಟ್ಟಿವೆ. `ಪಾಡು' ಅಪರೂಪದ ಕಾದಂಬರಿ.

-ಪ್ರೊ.ಕೆ.ಎಸ್.ಭಗವಾನ್ ಕಾದಂಬರಿಯ ಬಗ್ಗೆ ಬರೆದ ವಿಮರ್ಶೆ 

Related Books