ರೂಪರಾಶಿಯರು

Author : ಎಂ. ವೆಂಕಟಸ್ವಾಮಿ

Pages 196

₹ 150.00




Year of Publication: 2009
Published by: ಸಂಕಲ್ಪ ಪ್ರಕಾಶನ
Address: ನಂ: 1, 1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ದೀಪಾಂಜಲಿನಗರ, ಬೆಂಗಳೂರು-560026

Synopsys

``ರೂಪರಾಶಿಯರು'' ಡಾ. ಎಂ. ವೆಂಕಟಸ್ವಾಮಿ ಅವರ ಸಾಮಾಜಿಕ ಕಾದಂಬರಿ. 1999ರಲ್ಲಿ(ಮೊದಲ ಮುದ್ರಣ) ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ 67 ದಿನಗಳು ದೈನಿಕ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ಒಬ್ಬ ನಾಯಕ ಇಬ್ಬರು ನಾಯಕಿಯರು; ಇಬ್ಬರಲ್ಲಿ ಒಬ್ಬಳು ನಾಯಕನ ಪತ್ನಿಯಾಗಿದ್ದು ಇನ್ನೊಬ್ಬಳು ಅವನ ಅಂದಕ್ಕೆ ಬೆರಗಾಗಿ ಅವನನ್ನು ಫೋನ್ ಮೂಲಕ ಬೇಟೆಯಾಡುತ್ತಿರುತ್ತಾಳೆ. ನಾಯಕನ ಪತ್ನಿ ಮಾಜಿ ಮಿಸ್ ಯೂನಿವರ್ಸ್ ಆಗಿದ್ದರೆ, ಇನ್ನೊಬ್ಬಳು ಅಷ್ಟೇ ಸೌಂದರ್ಯವತಿ, ಗಣಿತ ತಜ್ಞೆ. ಒಂದು ದಿನ ನಾಯಕನನ್ನು ಒಂದು ಸಭೆಯಲ್ಲಿ ನೋಡಿದ ಮೇಲೆ ಅವನ ಅಂದಕ್ಕೆ ಮರುಳಾಗಿ ಅವನ ಹಿಂದೆ ಬಿದ್ದು ಫೋನ್ ಮೂಲಕ ಬೇಟೆಯಾಡತೊಡಗುತ್ತಾಳೆ. ಪ್ರತಿಯೊಂದು ಸಲವೂ ಅವನಿಗೆ ಒಂದು ಗಣಿತದ ಒಗಟು ಹೇಳಿ ಒಗಟು ಬಿಚ್ಚಿದರೆ ನಾನಿರುವ ಸ್ಥಳ ಹೇಳುತ್ತೇನೆ, ನಾವಿಬ್ಬರು ಬೇಟಿಯಾಗಬಹುದು ಎನ್ನುತ್ತಾಳೆ. ಪ್ರತಿಯೊಂದು ಸಲವು ನಾಯಕ ಒಗಟು ಬಿಚ್ಚಿ ಇನ್ನೇನು ಅವಳಿರುವ ಸ್ಥಳವನ್ನು ತಲುಪಬೇಕು ಅನ್ನುಕೊಳ್ಳುವಷ್ಟರಲ್ಲಿ ಅಕೆ ಚಾಕಚಕ್ಯತೆಯಿಂದ ಅಲ್ಲಿಂದ ಪರಾರಿಯಾಗಿರುತ್ತಾಳೆ. ಇದು ಕಾದಂಬರಿಯ ಕೊನೆಯವರೆಗೂ ನಡೆಯುತ್ತಿರುತ್ತದೆ. ಕೊನೆಗೆ ಅವಳು ಹಾಕಿದ ಕೊನೆ ಒಗಟು ಬಿಚ್ಚಿ ಇನ್ನೇನು ಅವಳನ್ನು ಸಂದಿಸಿಬಿಡುತ್ತೇನೆ ಎಂದು ಅವಳಿರುವ ಕೋಣೆ ಒಳಕ್ಕೆ ಧಾವಿಸುತ್ತಾನೆ. ಅವಳ ಮುಖವನ್ನು ಕೊನೆಗೂ ನೋಡಿದನೆ ಇಲ್ಲವೆ ಅವಳ ಜೊತೆಗೆ ಮಾತನಾಡಿದನೆ ಎನ್ನುವುದೇ ಇಲ್ಲಿಯ ಕಥಾ ವಸ್ತು, ಕುತೂಹಲಕಾರಿಯಾಗಿ ಓದುಗರನ್ನು ಸೆಳೆಯುತ್ತದೆ. 

About the Author

ಎಂ. ವೆಂಕಟಸ್ವಾಮಿ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು,  ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು.  ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...

READ MORE

Excerpt / E-Books

`ರೂಪರಾಶಿಯರು'' ಕಾದಂಬರಿ ಹೀಗೆ ಪ್ರಾರಂಭವಾಗುತ್ತದೆ... ''Sex is n't the best thing in the world nor worst thing in the world - but there is nothing else quite like it'' - W.C.Fields. ರಾಜಧಾನಿ ಬೆಂಗಳೂರು ಮುಂದಿನ ದಿನಗಳಲ್ಲಿ ಬರಲಿರುವ ತೊಂದರೆಗಳೆಲ್ಲವನ್ನೂ ಬದಿಗಿಟ್ಟು ದಶ ದಿಕ್ಕುಗಳಲ್ಲಿ ಟೆಂಟ್ಯಾಕಲ್ಸ್ ಚಾಚುತ್ತಾ, ತನ್ನ ಮುಸಿಡಿಯ ಮೇಲೆ ಗಟ್ಟಿಗೊಳ್ಳುತ್ತಲೆ ಬೆಳೆಯುತ್ತಿದೆ. ಪುಷ್ಯಮಾಸದ ಸೊಬಗನ್ನು ಸವಿಯುತ್ತಿರುವ ಬೆಂಗಳೂರು, ಬಾಲಸೂರ್ಯನ  ಕಿರಣಗಳಲ್ಲಿ ಹೊರಳಾಡುತ್ತಾ, ಆಕಳಿಸುತ್ತಾ ದೈನಂದಿನ ಕಾರ್ಯದಲ್ಲಿ ತೊಡಗಿಕೊಳ್ಳಲು ಸಿದ್ಧವಾಗುತ್ತಿದೆ. ಜಯನಗದರ ಬಡಾವಣೆಯಲ್ಲಿ ಒಂದು ಸುಸಜ್ಜಿತ ಮನೆ. ಮನೆಯ ಮುಂದೆ ಅಂದವಾದ ಹೂದೋಟ, ವಿಧವಿಧವಾದ ಹೂವುಗಳು. ಮಾಲಿ ಒಂದು ಪಕ್ಕದಿಂದ ಗಿಡಗಳಿಗೆ ನೀರುಣಿಸುತ್ತಿದ್ದಾನೆ. ಗಿಡಗಳು ಸುಂದರವಾಗಿ ತಾಯಿಂದ ಪ್ರೀತಿ ಪಡೆಯುವಂತೆ ಸ್ನಾನ ಮಾಡುತ್ತಾ ಗಾಳಿಯಲ್ಲಿ ಆಡಿಕೊಳ್ಳುತ್ತಿವೆ. ತೋಟದ ಇನ್ನೊಂದು ಮೂಲೆಯಲ್ಲಿರುವ ಪೋರ್ಟಿಕೋದಲ್ಲಿ ಕೆಂಪು ಪ್ಲಾಸ್ಮಾ ಬಣ್ಣದ ಮಾರುತಿ ಕಾರು ಕಾಯುತ್ತಿದೆ. ಈ ಸುಸಜ್ಜಿತ ಮನೆಯ ಮಧ್ಯದ ಒಂದು ಕೋಣೆಯಲ್ಲಿ ಇಮ್ಮಡಿ ಪಲ್ಲಂಗದ ಮೇಲೆ ಮೆತ್ತನೆ ಕರ್ಲಾನ್ ಹಾಸಿಗೆ. ಹಾಸಿಗೆಯ ಮೇಲೆ ಉದ್ಯಾನ ನಗರದ ಅತಿಸುಂದರ ಚೆಲುವೆ ಮಲಗಿದ್ದಾಳೆ. ಆಕೆಯ ದೇಹವನ್ನು ನವಿರುನವಿರು ಜೈಪುರದ ಬ್ಲಾಂಕೆಟ್ ಒಳಗಿಂದ ಸೌಂದರ್ಯ ಸ್ಫೋಟಗೊಂಡಂತೆ ಅಲ್ಲಲ್ಲಿ ಪ್ರದರ್ಶಿಸಿದೆ. ಸುಂದರ ಬಣ್ಣಗಳನ್ನು ಬಳಿದುಕೊಂಡಿರುವ ಗೋಡೆಗಳ ಮೇಲೆ ಅಲ್ಲಲ್ಲಿ ಸೊಗಸಾದ ಮತ್ತು ಬಹಳ ಅಪರೂಪವಾದ ಚಿತ್ರಗಳನ್ನು ಗೋಡೆಗಳಿಗೆ ನೇತಾಕಲಾಗಿದೆ. ಇಮ್ಮಡಿ ಪಲ್ಲಂಗದ ಇನ್ನರ್ಧ ಭಾಗದಲ್ಲಿ ಪ್ರೀತಿಯ ರುಚಿಯ ಹ್ಯಾಂಡ್ಸಮ್ ಗಂಡ ಪವನ ಮಲಗಿದ್ದಾನೆ. ವಿಶಾಲವಾದ ರೋಮೆದೆ ಹೊಂದಿರುವ ಪವನ್ ಹೆಣ್ಣುಗಳನ್ನು ಪ್ರೇಮಿಸಲೆಂದೆ ಹುಟ್ಟಿದವನಂತೆ ಕಾಣಿಸುತ್ತಾನೆ. ... ಮತ್ತೊಂದು ಬೆಳಗಿಗಾಗಿ ಬೆಂಗಳೂರಿನ ಬೀದಿಗಳು ಸಡಗರದಿಂದ ಕಂಗೊಳಿಸುತ್ತಿವೆ, ಹೆಣ್ಣುಗಳಂತೆ. ಪವನ್ ತನ್ನ ಕಛೇರಿಯ ಕೋಣೆಯಲ್ಲಿ ಪೈಲ್ ನೋಡುತ್ತಾ ಕುಳಿತಿದ್ದಾನೆ. ಎಡಗಡೆ ಇದ್ದ ಫೋನ್ ರಿಂಗಾಯಿತು. ಸಾವಧಾನವಾಗಿ ಎಡಕೈಯಲ್ಲಿ ಫೋನ್ ತೆಗೆದುಕೊಂಡ ಪವನ್ ಕಿವಿಯ ಹತ್ತಿರ ಹಿಡಿದು `ಹಲೋ ಪವನ್ ಹಿಯರ್' ಎಂದ. `ಹಲೋ ಮಿಸ್ಟರ್ ಪವನ್' ಎಂದ ಹೆಣ್ಣುಧ್ವನಿ ಕೆಲವು ಕ್ಷಣಗಳು ನಿಶ್ಯಬ್ದವಾಗಿ, ಮತ್ತೆ ನಾನೊಂದು ಹೆಣ್ಣು ಎನ್ನುವುದು ಮಾತ್ರ ನಿಮಗಿಗಾಲೇ ಅರ್ಥವಾಗಿದೆ. ಆದರೆ ಯಾರು? ಏತಕ್ಕೆ ಎನ್ನುವ ಪ್ರಶ್ನೆಗಳು ಏಳಬೇಕಲ್ಲವೆ?' `ನೀನ್ಯಾರು? ಪವನ್ ಕೇಳೀದ, ` ಪವನ್, ನೀವ್ಯಾರು ಎಂದು ಕೇಳುತ್ತೀಯ ಎಂದುಕೊಂಡಿದ್ದೆ. ಸಧ್ಯ ಕ್ಷಮಿಸಿ ಎಂದು ದೂರವಿಡಲಿಲ್ಲ, ಸಂತೋಷ'. ಕ್ಷಮಿಸು, ಕ್ಷಮಿಸಿ, ಏನು ವ್ಯತ್ಯಾಸ ಎಂದ ಪವನ್ ಮನದಲ್ಲೆದ್ದ ಪ್ರಶ್ನೆಯನ್ನು ಫೋನ್ ಆ ಕಡೆಗೆ ತಲುಪಿಸಿಬಿಟ್ಟಿತ್ತು. `ಕ್ಷಮಿಸು ಎಂದರೆ ಪ್ರೀತಿಯಾಗಿ ಹತ್ತಿರದವರನ್ನು ಸಂಬೋಧಿಸುವುದು. ಕ್ಷಮಿಸಿ ಎಂದರೆ ಸ್ವಲ್ಪ ದೂರ ನಿಂತು ಹೇಳುವ ಮಾತು. ಸಂಬೋಧಿಸುವುದು ಎನ್ನುವ ಪದ ಅವನಿಗೆ ಬೇರೆಯಾಗಿಯೇ ಕೇಳಿತು. ಸ್ವಲ್ಪ ಅದರಿದಂತಾಗಿ `ಇಷ್ಟಕ್ಕೂ ನೀವ್ಯಾರು? ಪವನ್ ಕೇಳಿದ. `ಅಷ್ಟು ಅವಸರವೇ? ಅವಸರವಾದರೆ ತಿಳಿದುಕೊಳ್ಳಬಹುದಲ್ಲವೆ? ಫೋನ್ ಕಟ್ಟಾಯಿತು. ಪವನ್ ದೇಹದಲ್ಲಿ ಏನೋ ಚಲನಗೊಂಡಂತಾಗಿ ಸುತ್ತಲೂ ನೋಡಿದ. ಎದುರಿಗಿದ್ದ ಗ್ಲಾಸ್ ತೆಗೆದುಕೊಂಡು ಒಂದು ಗುಟುಕು ನೀರು ಕುಡಿದ.

Related Books