ಕಣ್ಣಾಮುಚ್ಚಾಲೆ

Author : ಬೇಲೂರು ರಾಮಮೂರ್ತಿ

Pages 176

₹ 110.00




Year of Publication: 2005
Published by: ಶ್ರೀ ಕೃಷ್ಣ ಬುಕ್ ಏಜನ್ಸಿ
Address: ಬೆಂಗಳೂರು

Synopsys

‘ಕಣ್ಣಾಮುಚ್ಚಾಲೆ’ ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ಪತ್ತೇದಾರಿ ಕಾದಂಬರಿ ಕಣ್ಣಾಮುಚ್ಚಾಲೆ. ನಾವು ಕಣ್ಣು ಮುಚ್ಚಿಕೊಂಡು ಕೆಲಸ ಮಾಡಿದ್ದೀವಿ ಅಂದರೆ ಬೇರೆಯವರೂ ಕಣ್ಣು ಮುಚ್ಚಿಕೊಂಡಿರುತ್ತಾರೆಯೇ. ಇಲ್ಲಿ ಮಿಸ್ ಮುಖರ್ಜಿ ಕೊಲೆಯಾಗಿರುತ್ತಾಳೆ. ಅವಳನ್ನು ಕೊಲೆ ಮಾಡಿದವರು ಯಾರು ? ಪತ್ತೇದಾರರು ಅಂದರೆ ಕೊಲೆ, ದರೋಢೆ ಮುಂತಾದುವುಗಳನ್ನು ಪತ್ತೆ ಮಾಡೋರು. ಆದರೆ ಹುಡುಗಿಯೊಬ್ಬಳು ಒಂದು ಫೋಟೋ ತೋರಿಸಿ ಇವರನ್ನು ಕೊಲೆ ಮಾಡಿ ಎಂದು ಕೇಳುತ್ತಾಳೆ. ಅವಳ ಜಾಡು ಹಿಡಿದು ಹೊರಟ ಪತ್ತೇದಾರರಿಗೆ ವಿವಿಧ ಪಾತ್ರಗಳೂ ಅವುಗಳ ವಿಚಿತ್ರ ನಡವಳಿಕೆಗಳೂ ಬಯಲಾಗುತ್ತಾ ಹೋಗುತ್ತವೆ. ಒಂದು ದೊಡ್ಡ ದಾರ ಉಂಡೆಯಿಂದ ನೂಲು ಹೊರಬರುವಂತೆ ಪಾತ್ರಗಳೂ ಅವುಗಳ ನಡವಳಿಕೆಗಳೂ ಹೊರಬರುತ್ತವೆ. ಇಡೀ ಕಾದಂಬರಿ ಒಂದೇ ವೇಗದಲ್ಲಿ ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಯಾರು ಕಣ್ಣಾ ಮುಚ್ಚಾಲೆ ಆಡಿದರು ಎನ್ನುವುದನ್ನು ಕಾದಂಬರಿ ಓದಿಯೇ ಅರಿಯುವುದು ಒಳ್ಳೆಯದು.

About the Author

ಬೇಲೂರು ರಾಮಮೂರ್ತಿ
(30 June 1950)

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು.  ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು.  ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.  ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...

READ MORE

Related Books