ಸವಾಲು

Author : ಗೀತಾ ನಾಗಭೂಷಣ

Pages 360

₹ 270.00
Year of Publication: 2019
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಖ್ಯಾತ ಕಾದಂಬರಿಗಾರ್ತಿ ಗೀತಾ ನಾಗಭೂಷಣ ಅವರ ಕಾದಂಬರಿ-ಸವಾಲು. ಹೆಣ್ಣು ಮಕ್ಕಳ ಜಿಂದಗಾನಿಯಲ್ಲಿ ಸವಾಲುಗಳನ್ನು ಸೃಷ್ಟಿಸುತ್ತಿರುವ ಅನಿವಾರ್ಯತೆಗಳನ್ನು, ಹೃದಯ ಕಲಕುವಂತೆ ಹುಡುಕುತ್ತ ಇಂದಿನ ಬದುಕಿಗೆ ಕನ್ನಡಿಯಾಗಿಸುವ ಕಾದಂಬರಿ 'ಸವಾಲು'.

ಗ್ರಾಮೀಣ ಅನಕ್ಷರಸ್ಥ ಅಮಾಯಕ ಮಹಿಳೆರಿಗೂ ಕೂಡ ತಮ್ಮದೇ ಅಸ್ತಿತ್ವ, ಅಭಿಮಾನ, ತನ್ನತನಗಳಿರುತ್ತವೆ. ಆದರೆ ಅವರ ಗಟ್ಟಿ ನಿರ್ಧಾರ, ಹೋರಾಟದಂಥ ಬದುಕು ಮಾತ್ರ ಅವರನ್ನು ಉತ್ತಮದತ್ತ ಕೊಂಡೊಯುತ್ತದೆ. ಆದರೂ, ಹಲವಾರು ಸವಾಲಾಗಳು ಎದುರಾಗುತ್ತವೆ. ಅದನ್ನೆಲ್ಲ ಎದುರಿಸುವ ಈ ಪಾತ್ರಗಳು ಉದಾತ್ತ ಚಿಂತನೆಯತ್ತ ಕೊಂಡೊಯುತ್ತವೆ.

 

About the Author

ಗೀತಾ ನಾಗಭೂಷಣ
(25 March 1942 - 28 June 2020)

ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...

READ MORE

Related Books