ಹುಡುಕಾಟ (ಕಾದಂಬರಿ)

Author : ಬಂಡು ಕೋಳಿ

Pages 114

₹ 75.00
Year of Publication: 2011
Published by: ಬಿ.ಡಿ.ಕೋಳಿ
Address: ಸಾ.ಉಗಾರ ಬಿ.ಕೆ -591 320
Phone: 9972441826

Synopsys

ಲೇಖಕ ಬಂಡು ಕೋಳಿ ಅವರ ‘ಹುಡುಕಾಟ’ ಕೃತಿಯು ಸಾಮಾಜಿಕ ಕಾದಂಬರಿಯಾಗಿದೆ. ಲೇಖಕರೇ ಕೃತಿಯ ಬೆನ್ನುಡಿಯಲ್ಲಿ ಹೇಳುವಂತೆ,‘ ಮನುಷ್ಯನಿಗೆ ಜೀವನದಲ್ಲಿ ನೆಲೆ ಬಹುಮುಖ್ಯ. ನೆಲೆಯನ್ನು ಕಂಡುಕೊಳ್ಳದೇ ಪ್ರೇಮಪಾಶಕ್ಕೆ ಸಿಲುಕಬಾರದು. ನಿರುದ್ಯೋಗವನ್ನು ನೀಗದೆ ಪ್ರೇಮಕ್ಕೆ ಅರ್ಥವಿಲ್ಲ. ಬಡತನದಲ್ಲಿ ಹುಟ್ಟಿದ ಮಕ್ಕಳು ನೈತಿಕ ಜವಾಬ್ದಾರಿಯನ್ನು ಹೊರಲೇಬೇಕು. ಹೊರದಿದ್ದರೆ ಸಮಾಜದಲ್ಲಿ ನೆಲೆ ಕಾಣುವುದು ತುಂಬ ಕಷ್ಟ. ಪ್ರೇಮಕ್ಕಿಂತ ಮೊದಲು ನೆಲೆ ಹುಡುಕುವುದು ಅತ್ಯವಶ್ಯಕ. ಆದ್ದರಿಂದ ನೆಲೆಯ ಹುಡುಕಾಟ ಈ ಕಥೆಯ ಮೂಲ ಆಶಯ ಎಂಬುದಾಗಿ ಹೇಳಿದ್ದಾರೆ.

About the Author

ಬಂಡು ಕೋಳಿ
(15 May 1980)

ಬೆಳಗಾವಿ ಜಿಲ್ಲೆಯ ಉಗಾರ ಬುದ್ರುಕ ಮೂಲದವರಾದ ಬಂಡು ಧನಪಾಲ ಕೋಳಿ ಅವರು ಬಂಡು ಕೋಳಿ ಎಂಬ ಕಾವ್ಯ ನಾಮವನ್ನು ಹೊಂದಿದ್ದಾರೆ. ಧನಪಾಲ ಹಾಗೂ ಲಕ್ಷ್ಮೀ ಬಾಯಿಯವರ ಮಗನಾಗಿ 15-05-1980ರಂದು ಜನಿಸಿದರು. ಎಮ್.ಎ. ಬಿ.ಇಡಿ ಶಿಕ್ಷಣವನ್ನು ಪೂರ್ತಿಗೊಳಿಸಿ, ಅಥಣಿಯ ವಿದ್ಯಾವರ್ಧಕ ಸಂಸ್ಥೆಯಲ್ಲಿ ಶಿಕ್ಷಣ ವೃತ್ತಿ ಪ್ರಾರಂಭಿಸಿದರು. ಪದವಿ ಕಾಲೇಜಿನ ಬೋಧಕರಾದ ಎಂ.ಬಿ.ಹೂಗಾರ ಅವರ ಪ್ರೋತ್ಸಾಹದಿಮದ ಸಾಹಿತ್ಯ ಓದು ಹಾಗೂ ಸಾಹಿತ್ಯ ಕ್ಷೇತ್ರದತ್ತ ಬರಲು ಕಾರಣವಾಯಿತು. ಗಾಯನ ಹಾಗೂ ಅಭಿನಯ ಇವರ ಇತರೇ ಹವ್ಯಾಸಗಳು. ಇವರ ಪ್ರಕಟಿತ ಕೃತಿಗಳು ; ಹುಡುಕಾಟ(2011) ಕಾದಂಬರಿ, ಹೃದಯಧಾರೆ(2018) ಕವನ ಸಂಕಲನ, ಕೃಷ್ಣಾಯಿ ಜೋಗುಳ(2021) ...

READ MORE

Related Books