ನೂರ್ ಜಹಾನ್ (ಐತಿಹಾಸಿಕ ಕಾದಂಬರಿ)

Author : ವಿಜಯಾ ಸುಬ್ಬರಾಜ್

Pages 304

₹ 290.00




Year of Publication: 2020
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580/01

Synopsys

‘ನೂರ್ ಜಹಾನ್’ (ಐತಿಹಾಸಿಕ ಕಾದಂಬರಿ) ಲೇಖಕಿ ವಿಜಯಾ ಸುಬ್ಬರಾಜ್ ಅವರ ಕೃತಿ. ನಾಲ್ಕನೇ ಮೊಘಲ್ ದೊರೆ ಜಹಾಂಗೀರ್ ನನ್ನು ವಿವಾಹವಾದ ನೂರ್ ಜಹಾನ್ ಮೊದಲ ಹೆಸರು ಮೆಹರುನ್ನಿಸಾ. ಆಕೆಯ ಸೌಂದರ್ಯಕ್ಕೆ ಮರುಳಾಗಿದ್ದ ದೊರೆ ಜಹಾಂಗೀರ್ ಆಕೆಯನ್ನು ನೂರ್ ಜಹಾನ್ ಎಂದು ಕರೆಯುತ್ತಾನೆ ನೂರ್ ಜಹಾನ್ ಎಂದರೆ ವಿಶ್ವದ ಬೆಳಕು ಎಂದು ಮುಂದೆ ಆಕೆಯ ಹೆಸರು ನೂರ್ ಜಹಾನ್ ಎಂದೇ ಪ್ರಸಿದ್ಧಿ ಪಡೆಯುತ್ತದೆ. ವ್ಯವಹಾರಜ್ಞಾನ, ಬುದ್ಧಿಕುಶಲತೆ ಮತ್ತು ಮಹತ್ತ್ವಾಕಾಂಕ್ಷೆಗಳಿಂದ ಕೂಡಿದ್ದ ಈಕೆ ಸಾಮ್ರಾಟನನ್ನು ಮರುಳುಗೊಳಿಸಿ, ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಎಲ್ಲವನ್ನೂ ನಿಯಂತ್ರಿಸತೊಡಗಿದಳು. ರಾಜ್ಯಭಾರದಲ್ಲಿ ಜಹಾಂಗೀರನ ಆಸಕ್ತಿ ಕ್ರಮೇಣ ಕಡಿಮೆಯಾಯಿತು. ಮದ್ಯಪಾನ ಮಾಂಸಾಹಾರಗಳಲ್ಲಿ ಕಾಲಕಳೆಯುತ್ತಿದ್ದ ಜಹಾಂಗೀರನನ್ನು ಮೂಲೆಗೆ ತಳ್ಳಿ ನೂರ್‍ಜಹಾನಳೇ ಸರ್ವಾಧಿಕಾರಿಣಿಯಾದಳು. ಅವಳ ಹೆಸರನ್ನು ಟಂಕಿಸಿದ ನಾಣ್ಯಗಳೂ ಚಲಾವಣೆಗೆ ಬಂದುವು. ಇಂಥ ನೂರ್ ಜಹಾನಳ ಕತೆಯಾಧಾರಿತ ಐತಿಹಾಸಿಕ ಕಾದಂಬರಿ ‘ನೂರ್ ಜಹಾನ್’.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books