ಬೆಂಗಳೂರು Y2K50-Y2K64

Author : ಎಂ. ವೆಂಕಟಸ್ವಾಮಿ

Pages 148

₹ 90.00
Year of Publication: 2009
Published by: ಜಾಗೃತಿ ಪ್ರಿಂಟರ್‍ಸ್
Address: # 56/1-6, ನರಸಿಂಹಯ್ಯ ಗಾರ್ಡನ್, ಕೊಟ್ಟಿಗೆಪಾಳ್ಯ, ಮಾಗಡಿ ಮುಖ್ಯರಸ್ತೆ, ಬೆಂಗಳೂರು-560091
Phone: 08023583850

Synopsys

ಲೇಖಕ ಡಾ. ಎಂ. ವೆಂಕಟಸ್ವಾಮಿ ಅವರು ಬರೆದ `ಬೆಂಗಳೂರು Y2K50 - Y2K64'' ವೈಜ್ಞಾನಿಕ ಕಾದಂಬರಿ. ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ 2004ರಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಕ್ರಿ.ಶ.2050 ರಿಂದ 2064ರ ಮಧ್ಯೆ ಹೈಪರ್ ಸಿಟಿ ಬೆಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಕೆಲವು ಪಾತ್ರಗಳ ಜೊತೆಗೆ ರೋಬೋಟ್ಸ್, ಬಾಹ್ಯಾಕಾಶ, ವೈದ್ಯ ವಿಜ್ಞಾನ, ಕಂಪ್ಯೂಟರ್ಸ್ ಮತ್ತು ಆಧುನಿಕ ಯಂತ್ರ-ತಂತ್ರಜ್ಞಾನದೊಂದಿಗೆ ಈ ಕಾದಂಬರಿಯನ್ನು ಹೆಣೆಯಲಾಗಿದೆ. ಇದು ಪೂರ್ಣವಾಗಿ ವೈಜ್ಞಾನಿಕ ಕಲ್ಪನೆಯಾದರೂ ಇದರಲ್ಲಿ ಬರುವ ಬಹಳಷ್ಟು ವಿಷಯಗಳು 2050 ರಿಂದ 2064ರ ಮಧ್ಯೆ ನಡೆಯುತ್ತವೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಕೆಲವು ಘಟನೆಗಳು ಇನ್ನೂ ಮುಂದೆ ಘಟಿಸಬಹುದು. ಕಾದಂಬರಿಯ ಮುಕ್ತಾಯ ಒಂದು ವೈಜ್ಞಾನಿಕ ಕಲ್ಪನೆಯಾಗಿದ್ದು ಅದು ಕೆಲವು ನೂರು, ಸಾವಿರ ಅಥವ ಮಿಲಿಯಾಂತರ ವರ್ಷಗಳಲ್ಲಿ ಸಂಭವಿಸುತ್ತದೆ. ಭೂಮಿ ಎರಡು ರೀತಿಯಲ್ಲಿ ಮಾತ್ರ ಪೂರ್ಣವಾಗಿ ಛಿದ್ರವಾಗಿ ಹೋಗುವ ಸಂಭವಗಳಿವೆ. ಒಂದು ಯಾವುದೊ ಒಂದು ಅನ್ಯಗ್ರಹ ಅಥವ ದೈತ್ಯ ಉಲ್ಕಾಶಿಲೆ ಭೂಮಿಗೆ ಬಡಿದು ಭೂಮಿ ಛಿದ್ರವಾಗಿ ಹೋಗುತ್ತದೆ. ಎರಡು, ನೆಬ್ಯುಲರ್ ಕಲ್ಪನೆಯ ಪ್ರಕಾರ ಸೂರ್ಯ ಒಂದು ದಿನ ಭೂಮಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಉರಿಸಿಬಿಡುತ್ತಾನೆ. ಅಂದರೆ ಸೂರ್ಯನೂ ಉರಿದುಹೋಗುತ್ತಾನೆ’ ಎಂಬುದು ಕಾದಂಬರಿಯ ಕಥಾ ವಸ್ತು’ ಎಂದು ಲೇಖಕರು ಹೇಳಿಕೊಂಡಿದ್ದಾರೆ.

 

About the Author

ಎಂ. ವೆಂಕಟಸ್ವಾಮಿ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು,  ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು.  ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...

READ MORE

Excerpt / E-Books

 ಬೆಂಗಳೂರು Y2K50 - Y2K64, ವೈಜ್ಞಾನಿಕ ಕಾದಂಬರಿ ಹೀಗೆ ಪ್ರಾರಂಭವಾಗುತ್ತದೆ... ``Each and every atom of my body is a part of stars one upon a time'' - Carl Sagan. ಸಮಯ : ಬೆಳಿಗ್ಗೆ 6:00 ಗಂಟೆ. ದಿನಾಂಕ : ಕ್ರಿ.ಶ. Y2K50 01 01 : ಸ್ಥಳ : ಬೆನ್ ನಗರ. ಎ ವಲಯದ ''ಆಕಾರ'' ಬಂಗಲೆಯಲ್ಲಿ ಸಣ್ಣದಾಗಿ ಧ್ವನಿ ಮೊಳಗಿತು. ಇಂಪಾದ ಧ್ವನಿ ಸುರುಳಿ ಸುರಳಿಯಾಗಿ ರಾಗವಾಗಿ ಮನೆಯೆಲ್ಲ ಓಡಾಡುತ್ತಾ ಮಂಚದ ಮೇಲೆ ನಗ್ನವಾಗಿ ಮಲಗಿದ್ದ ಐಯಾನ್ ಮತ್ತು ಅಶ್ವಿನಿಯ ಕಿವಿಗಳನ್ನು ಮುಟ್ಟಿತು. ಕಳೆದ ರಾತ್ರಿ ಝೀರೋ ಗಂಟೆಯ ಕೊನೆ ಕ್ಷಣ ಮುಗಿದು ಸೆಕೆಂಡಿನ ಮುಳ್ಳು ಹೊಸ ವರ್ಷಕ್ಕೆ ಜಿಗಿದಾಗ ಇಬ್ಬರೂ ಒಂದು ಸುಧೀರ್ಘ ಚುಂಬನದಲ್ಲಿ ಸಿಲುಕಿಕೊಂಡಿದ್ದರು. ನಂತರ ಹಗುರವಾಗಿ ಒಂದೊಂದು ಪೆಗ್ ಏರಿಸಿಕೊಂಡು ರತಿ ಕ್ರೀಡೆಯಲ್ಲಿ ತೊಡಗಿಕೊಂಡಿದ್ದರು. ಅವರ ಪುಟ್ಟ ಮಗು ಕಾಸ್ಮೋರಾ ಪಕ್ಕದ ಕೋಣೆಯಲ್ಲಿ ಮೆತ್ತನೆಯ ಹಾಸಿಗೆಯ ಮೇಲೆ ಮಲಗಿದ್ದಾಳೆ. ಪಕ್ಕದಲ್ಲಿಯೇ ರೋಬೋಟ್ ಅವಳ ಚಲನವಲನಗಳನ್ನು ಗಮನಿಸುತ್ತ ನಿಂತುಕೊಂಡಿದೆ.

ರಾತ್ರಿಯ ತಂಪಿನಲ್ಲಿ ಕಾಲ ಕಳೆದು, ಬಾಲ ಸೂರ್ಯನ  ಕಿರಣಗಳಿಗಾಗಿ ಕಾದು ಕುಳಿತಿದ್ದ ನೈದಿಲೆಯಂತೆ ಐಯಾನ್ ಮತ್ತು ಅಶ್ವಿನ ಕಣ್ಣುಗಳು ಸಣ್ಣದಾಗಿ ಬಿರಿದವು. ರಾತ್ರಿ ಅವರಿಬ್ಬರು ರೋಬೋಟ್ಗೆ ನಿರ್ದೇಶನ ನೀಡದೆ ಮಲಗಿದ್ದರಿಂದ ರೋಬೋಟ್ ಅವರ ಹತ್ತಿರಕ್ಕೆ ಬಂದು ''ಮೇ ಐ ಹೆಲ್ಪ್ ಯು ಮಾಮ್''' ಎಂದಿತು ವಿನಮ್ರವಾಗಿ. ನಗ್ನಳಾಗಿದ್ದ ಅಶ್ವಿನಿ ದಿಢೀರನೆ ಕಣ್ಣು ಬಿಟ್ಟು ನೋಡುತ್ತಾಳೆ. ರೋಬೋಟ್ ಹತ್ತರವೇ ನಿಂತುಕೊಂಢು ಅವಳನ್ನೇ ನೋಡುತ್ತಿದೆ. ಅಶ್ವಿನಿ ಒಂದು ಕ್ಷಣ ಮಾನ ಕಳೆದುಕೊಂಡವಳಂತೆ ಬ್ಲಾಂಕೆಟನ್ನು ಸರ್‍ರನೆ ಮೈಮೇಲೆ ಎಳೆದುಕೊಳ್ಳುತ್ತ ''ಕಂ ಆಫ್ಟರ್ 30 ಮಿನಿಟ್ಸ್'' ಎಂದಳು. ಸಾರಿ ಮಾಮ್ ಎಂದ ರೋಬೋಟ್ ತನ್ನ ಸ್ಥಾನದಲ್ಲಿ ಹೋಗಿ ನಿಂತುಕೊಂಡಿತು. ಅಶ್ವಿನಿ ಎದ್ದು ಕುಳಿತುಕೊಂಡು ಪ್ಯಾಂಟಿ ಮೇಲೆ ಸಣ್ಣ ನಿಕ್ಕರ್ ಮತ್ತು ದೊಗಳೆ ಶರ್ಟ್  ಧರಿಸಿ ಐಯಾನ್ ಬೆತ್ತಲೆ ದೇಹವನ್ನು ಮತ್ತೆ ತಬ್ಬಿಕೊಂಡು ಬ್ಲಾಂಕೆಟ್ ಎಳೆದುಕೊಂಢಳು.

ಕಾಸ್ಮೋರಾಗೆ ಈಗ 15 ವರ್ಷ. ತನ್ನ ಕೋಣೆಯಲ್ಲಿ ಒಬ್ಬಳೆ ಹೂವಿನಂತಹ ಹಾಸಿಗೆ ಮೇಲೆ ನಗ್ನವಾಗಿ ಮಲಗಿಕೊಂಡಿದ್ದಾಳೆ. ಕೋಣೆಯಿಂದ ಹೊರಗೆ ಬಂದಾಗ ಮಾತ್ರ ಸಣ್ಣದೊಂದು ಪ್ಯಾಂಟಿ, ಒಂದು ಪುಟ್ಟ ಬ್ರಾ ಧರಿಸುತ್ತಾಳೆ. ಒಂದು ಕೋಣೆ ಎಷ್ಟು ಸ್ವಚ್ಛ ಸೌಂದರ್ಯದಿಂದ ಕೂಡಿರಬೇಕೊ ಅಷ್ಟು ಸೊಗಸಾಗಿದೆ. ಅವಳದು ಹೂವಿನಷ್ಟೇ ನುಣುಪಾದ ದೇಹ, ಬಂಗಾರದ ಬಣ್ಣ, ಪುಟಿದ ಎದೆಗಳು, ಕನಸುಗಳ ಕಟ್ಟೆ ಒಡೆದು ಹೋಗುತ್ತಿರುವ ವಯಸ್ಸು. ಉಕ್ಕಿ ಹರಿಯುತ್ತಿರುವ ಯೌವ್ವನ. ಅವಳ ಕೋಣೆಯಲ್ಲಿ ಇದ್ದಕ್ಕಿದ್ದ ಹಾಗೆ ಅತಿ ಪ್ರಕಾಶಮಾನವಾದ ಬೆಳಕು ಕಾಣಿಸಿಕೊಂಡಿತು. ಬೆಳಕು ಆಕಾಶದಿಂದ ನೇರವಾಗಿ ಧಾವಿಸಿ ಬರುತ್ತಿದೆ. ಕಾಸ್ಮೋರ  ಕಣ್ಣುಗಳನ್ನು ಅಗಲಿಸಿ ನೋಡುತ್ತಾಳೆ. ಆ ಬೆಳಕಿನಲ್ಲಿ ಮೂವರು ಅನ್ಯಕಾಯ ಜನರು ಕೈಕಾಲುಗಳನ್ನು ಹಕ್ಕಿಗಳಂತೆ ಆಡಿಸುತ್ತಾ ಅವಳ ಕಡೆಗೆ ಬರುತ್ತಿದ್ದಾರೆ. ಈಗ ಅವಳು ಮಲಗಿರುವ ಕೋಣೆಗೆ ಗೋಡೆಗಳಿರಲಿಲ್ಲ. ಇನ್ನೇನು ಆ ಮೂವರು ಬಂದೇಬಿಟ್ಟರು. ಬಂದು ಅವಳ ಸುತ್ತಲು ನಿಂತುಕೊಂಡರು. ಈಗ ಮೂವರೂ ಕಾಸ್ಮೋರ ಜೊತೆಗೆ ಆಕಾಶದ ಕಡೆಗೆ ಹಾರಿ ಹೋಗುತ್ತಿದ್ದಾರೆ. ಕಣ್ಣುಗಳ ಮುಂದೆ ಅನಂತ ನಕ್ಷತ್ರಗಳ ದೀಪಾವಳಿ ಕಾಣಿಸುತ್ತಿದೆ..

ಸ್ಥಳ : ಬೆನ್ ಸಿಟಿ. ದಿನಾಂಕ : ಕ್ರಿ.ಶ. Y2K64. ಸಮಯ: 18:02.30. ಆ ದಿನ ಇಡೀ ಭೂಮಿಯ ಮೇಲಿರುವ ಜನರೆಲ್ಲ ಉಲ್ಕಾಶಿಲೆಯ ಕಡೆಗೆ ತಮ್ಮ ಕಣ್ಣುಗಳನ್ನು ನೆಟ್ಟು ಕುಳಿತುಕೊಂಡಿದ್ದಾರೆ. ದೈತ್ಯಾಕಾರದ ಉಲ್ಕಾಶಿಲೆ ಭೂಕಕ್ಷೆಯ ಒಳಕ್ಕೆ ಜಿಗಿದು ಭೂಮಿಯ ಕಡೆಗೆ ಚೈನಾ ಡ್ರ್ಯಾಗನ್ನಂತೆ ಮುಖ ಮಾಡಿಕೊಂಡು ಬುಸುಗುಡುತ್ತ ಧಾವಿಸಿ ಬರುತ್ತಿದೆ. ಜನರು ಎಲ್ಲಾ ಕೆಲಸಗಳನ್ನು ಬಿಟ್ಟು ಮನೆ, ಕಛೇರಿ, ಕಾರ್ಖಾನೆ, ಕಂಪನಿ, ವಿಮಾನ, ಬಸ್ಸು, ಬೀದಿ ರಸ್ತೆಗಳಲ್ಲಿ; ಟಿವಿ, ಕಂಪ್ಯೂಟರ್, ಸ್ಕೈ ಸಿಗ್ನಲ್ ಪರದೆಗಳ ಮೇಲೆ ನೇರವಾಗಿ ಪ್ರಸಾರವಾಗುತ್ತಿರುವ ಉಲ್ಕಾಶಿಲೆಯನ್ನು ನೋಡುತ್ತಿದ್ದಾರೆ. ಆ ಉಲ್ಕಾಶಿಲೆ ಭೂಕಕ್ಷೆಯಲ್ಲಿ ನಾಗರ ಹಾವಿನಂತೆ ಧಾವಿಸಿ ಬರುತ್ತಿದೆ. ಎಲ್ಲರದೂ ಒಂದೇ ಪ್ರಶ್ನೆ. ಈ ಉಲ್ಕಾಶಿಲೆ ಭೂಮಿಗೆ ಬಡಿಯುವುದೆ? ಭೂಮಿಗೆ ಕೊನೆ ದಿನಗಳು ಬಂದುಬಿಟ್ಟವೆ? ಭೂಮಿ ಸಂಪೂರ್ಣವಾಗಿ ನಾಶವಾಗುವುದು ಮಾತ್ರ ಅನ್ಯಕಾಯಗಳ ದಾಳಿಯಿಂದಲೇ ಎನ್ನುವುದು ವೈಜ್ಞಾನಿಕ ಸತ್ಯ. ಭೂಮಿ ಸಾವಿರಾರು, ಲಕ್ಷಾಂತರ ಪ್ರಳಯಗಳನ್ನು ಕಂಡಿದೆ. ಆದರೆ ಅದ್ಯಾವವು ಭೂಮಿಯನ್ನು ಪೂರ್ಣವಾಗಿ ನಾಶ ಮಾಡಲಿಲ್ಲ. ಭೂಮಿಯನ್ನು ನುಚ್ಚುನೂರು ಮಾಡಬಲ್ಲ ಶಕ್ತಿ ಇರುವುದು ಅಕಾಶಕಾಯಗಳಿಗೆ ಮಾತ್ರ. ಆದರೆ ಅದು ಇಷ್ಟು ಬೇಗನೆ ಬರುತ್ತದೆಂದು ಯಾರೂ ಊಹಿಸಲಿಲ್ಲ. ಭೂಮಿಯ ಅತಿ ಎತ್ತರದ ಐದು ಪ್ರದೇಶಗಳಿಂದ ಒಂದೇ ಸಲಕ್ಕೆ ಮಿಸೈಲ್ ಗಳು ಜೇನು ನೊಣಗಳಂತೆ ಜ್ಯೂಯ್ಯನೆ ಉಲ್ಕಾಶಿಲೆಯ ಕಡೆಗೆ ಧಾವಿಸತೊಡಗಿದವು. ಜನರೆಲ್ಲ ಭೀತಿಯಿಂದ ಕಣ್ಣುಗಳನ್ನು ಮಿಟಿಕಿಸದೇ ನೋಡುತ್ತಲೇ ಇದ್ದಾರೆ.

Related Books