ಹದಿನಾರು ಅಧ್ಯಾಯಗಳಲ್ಲಿರುವ ಕಾದಂಬರಿಯನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ. ಸಾಮಾಜಿಕ ಬದ್ಧತೆ ಮತ್ತು ಕಾಳಜಿ ಈ ಕಾದಂಬರಿಯ ಕೇಂದ್ರ ಕಾಳಜಿ. ಸಮಕಾಲೀನ ವ್ಯವಸ್ಥೆಯ ರಾಜಕಾರಣ, ಆಡಳಿತದಂತಹ ಆಯಾಮಗಳ ಬಗೆಗೆ ಜನತೆ ಅನಾಸಕ್ತಿ ತೋರಿಸಿದಾಗ ಸಮಾಜದಲ್ಲಿ ಕಾಣಿಸಿಕೊಳ್ಳುವ ಮನೋಭಾವವನ್ನು ಕಾದಂಬರಿ ಚಿತ್ರಿಸುತ್ತದೆ.