ಹಾವಳಿ

Author : ಮಲ್ಲಿಕಾರ್ಜುನ ಹಿರೇಮಠ

₹ 400.00




Year of Publication: 2021
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.
Phone: 9845447002

Synopsys

ಹಿರಿಯ ಲೇಖಕ ಡಾ. ಮಲ್ಲಿಕಾರ್ಜುನ ಹಿರೇಮಠ ಅವರ ಹೊಸ ಕಾದಂಬರಿ ‘ಹಾವಳಿ’. ಸ್ವಾತಂತ್ಯ್ರ ಚಳವಳಿಯನ್ನು ಕುರಿತು ಕನ್ನಡದಲ್ಲಿ ಸಾಕಷ್ಟು ಕತೆ-ಕಾದಂಬರಿಗಳು ಪ್ರಕಟವಾಗಿವೆ. ಆದರೂ, ಈ ಪರಂಪರೆಯಲ್ಲಿ ಬಂದ ಒಂದು ವಿಶಿಷ್ಟ ಕಾದಂಬರಿ ಇದು. ಈ ಕಾದಂಬರಿಗೆ ಹಿನ್ನುಡಿ ಬರೆದಿರುವ ವಿಮರ್ಶಕ ಟಿ.ಪಿ. ಅಶೋಕ, ‘ಹಾವಳಿ’ ಕಾದಂಬರಿಯು ಹಿರೇಮಠರ ಸೃಜನಶೀಲ ಪಯಣದ ಅರ್ಥಪೂರ್ಣ ಮುಂದುವರಿಕೆಯಾಗಿದೆ. ಬಸಾಪುರ ಎಂಬ ಕಾಲ್ಪನಿಕ ಗ್ರಾಮವೊಂದರಲ್ಲಿ ವಿನ್ಯಸ್ತಗೊಂಡಿರುವ ಈ ಕಾದಂಬರಿಯು, ಕೇವಲ ಒಂದು ಗ್ರಾಮ ವೃತ್ತಾಂತವಾಗಿ ಸೀಮಿತಗೊಳ್ಳದೇ, ಆಧುನಿಕ ಭಾರತದ ರಾಜಕೀಯ ಇತಿಹಾಸದ ಒಂದು ಮುಖ್ಯ ವಿದ್ಯಮಾನದ ದಾಖಲೆಯೂ ಆಗಿಬಿಟ್ಟಿರುವುದು ಮಹತ್ವದ ಸಂಗತಿಯಾಗಿದೆ. ಹೈದರಾಬಾದ ವಿಮೋಚನಾ ಚಳವಳಿಯ ಸಂದರ್ಭವನ್ನು ಅದರೆಲ್ಲ ಬಹುಮುಖತೆಯಲ್ಲಿ ಕಾಣಿಸುವ ಈ ಕಾದಂಬರಿಯು ಕಾಲಬದ್ಧವಾಗಿದ್ದೂ, ಕಾಲಾತೀತ ನೆಲೆಗಳನ್ನು ಸ್ಪರ್ಶಿಸುವ ಮಹತ್ವಾಕಾಂಕ್ಷೆಯನ್ನು ಪ್ರಕಟಿಸುತ್ತದೆ . ಹಿಂಸೆಯ ಅನ್ಯ ಮೂಲವನ್ನು ಹುಡುಕುವುದು ಸುಲಭ. ನಮ್ಮೊಳಗೇ ಇರುವ ಹಿಂಸೆಯ ಸಾಧ್ಯತೆಯನ್ನು ಅರಿತಾಗ ಅದನ್ನು ಎದುರಿಸಿ, ಅದರಿಂದ ವಿಮೋಚನೆ ಪಡೆದಾಗ ಮಾತ್ರ ನಿಜವಾದ ಸ್ವಾತಂತ್ಯ್ರವನ್ನು ಪಡೆಯಬಹುದು ಎಂದು ಹಿರೇಮಠರ ಕಾದಂಬರಿ ಸೂಚಿಸುತ್ತದೆ ಒಬ್ಬ ವ್ಯಕ್ತಿಯ ಅಥವಾ ಗುಂಪಿನ ವಿಕೃತಿಗಳಿಗೆ ಇಡೀ ಸಮುದಾಯವನ್ನು ಹೊಣೆ ಮಾಡುವುದೂ ಹಿಂಸೆಯ ಮತ್ತೊಂದು ಕರಾಳ ರೂಪವೇ. ಕೋಮುವಾದೀ ಕಥನಗಳು ಮಾಡುವುದೇ ಇದನ್ನು. ಇಂಥ ಅಪಾಯದಿಂದ ತಪ್ಪಿಸಿಕೊಂಡಿರುವುದು ಹಿರೇಮಠರ ಕಾದಂಬರಿಯ ಹೆಗ್ಗಳಿಕೆಯಾಗಿದೆ. ಈ ಕಾರಣದಿಂದ ‘ಹಾವಳಿ’ ಗೆ ಕನ್ನಡ ಕಾದಂಬರಿ ಪರಂಪರೆಯಲ್ಲಿ ಒಂದು ಮಹತ್ವದ ಸ್ಥಾನವಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಮಲ್ಲಿಕಾರ್ಜುನ ಹಿರೇಮಠ
(06 June 1946)

ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರದ್ದು ವಿವೇಚನಾಪೂರ್ಣ ಸಾಹಿತ್ಯ ಮತ್ತು ವ್ಯಕ್ತಿತ್ವ. ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ 1946 ಜೂನ್ 05ರಂದು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸದ್ಯ ನಿವೃತ್ತರಾಗಿದ್ದಾರೆ. 'ಆಕ್ವೇರಿಯಂ ಮೀನು' ಅವರ ಮೊದಲ ಕವನ ಸಂಕಲನ 1974ರಲ್ಲಿ ಪ್ರಕಟವಾಯಿತು.  ‘ಅಮೀನಪುರದ ಸಂತೆ,  ಜ್ಞಾನೇಶ್ವರನ ನಾಡಿನಲ್ಲಿ (ಪ್ರವಾಸ ಕಥನ), ಅಂತರ್ಗತ (ವಿಮರ್ಶೆ), ಅಭಿಮುಖ (ವಿಮರ್ಶೆ), ಹವನ (ಕಾದಂಬರಿ), 'ಮೊಲೆವಾಲು ನಂಜಾಗಿ' (ಕತಾ ಸಂಕಲನ), ಮೂರುಸಂಜೆ ಮುಂದ ಧಾರವಾಡ (ಲಲಿತ ಪ್ರಬಂಧಗಳು), ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ)’ ಅವರ ಪ್ರಮುಖ ಕೃತಿಗಳು.  ಅವರ ಸಾಹಿತ್ಯ ಸೇವೆಗೆ ‘ಕನಾಟಕ ...

READ MORE

Related Books