ಪ್ರೇಮ ಕಾವ್ಯ

Author : ಕಾವ್ಯಶ್ರೀ ಮಹಾಗಾಂವಕರ್

Pages 140

₹ 80.00
Year of Publication: 2006
Published by: ಕರ್ನಾಟಕ ಲೇಖಕಿಯರ ಸಂಘ (ರಿ), ಬೀದರ ಜಿಲ್ಲಾ ಘಟಕ.
Address: 1 - 18, ಮಹಾಗಾಂವಕರ ಮ್ಯಾನ್ಷನ್, ಕೋರ್ಟ್ ರಸ್ತೆ, ಕಲಬುರಗಿ - 585102.
Phone: 9343456704

Synopsys

’ಪ್ರೇಮ ಕಾವ್ಯ’ ಕಾದಂಬರಿಯು ಪ್ರಪಂಚದಲ್ಲಿರುವ ಎಂದೂ ಬತ್ತದ ‘ಪ್ರೀತಿ’ಯನ್ನೇ ಕಥಾವಸ್ತುವಾಗಿಸಿಕೊಂಡಿದೆ. ಹಾಗೆಯೇ ಸಮಾಜದಲ್ಲಿ ಶತಶತಮಾನಗಳಿಂದಲೂ ಪಿಡುಗಾಗಿ ಕಾಡುತ್ತಿರುವ ಜಾತಿ ಸಮಸ್ಯೆಯನ್ನೂ ಎತ್ತಿಕೊಳ್ಳುತ್ತದೆ. ’ಪ್ರೇಮ ಕಾವ್ಯ’ ಶೀರ್ಷಿಕೆಯು ಮೇಲ್ನೋಟಕ್ಕೆ ಸರಳ ಪ್ರೇಮ ಕತೆಯೆಂಬಂತೆ ಬಿಂಬಿಸಿದರೂ, ಇದರಲ್ಲಿ ಜಾತಿ ಸಂಘರ್ಷ, ಹೆಣ್ಣಿನ ಅಸ್ವಾತಂತ್ರ್ಯ ಬದುಕು, ಜೀವನದಲ್ಲಿ ಎದುರಾಗುವ ಅಸಹಾಯಕತೆ, ಸಂಪ್ರದಾಯಸ್ಥ ಹೆತ್ತವರ ದಬ್ಬಾಳಿಕೆ, ವೈಚಾರಿಕ ಚಿಂತನೆ ಮುಂತಾದ ಸಂಗತಿಗಳನ್ನು ಒಳಗೊಂಡಿದೆ. ಇಂತಹ ವಿಷಯಗಳನ್ನು ಕಾದಂಬರಿಯುದ್ದಕ್ಕೂ ದಾಖಲಿಸಲು ಪ್ರಯತ್ನಿಸಿರುವುದು ಕೃತಿಯ ವಿಶೇಷ.

ಇದೊಂದು ಮಹಿಳಾ ಕೇಂದ್ರಿತ ಕಾದಂಬರಿ ಎನ್ನುವ ಕಾರಣಕ್ಕೂ ಗಮನ ಸೆಳೆಯುತ್ತದೆ. ಹೆಣ್ಣಿನ ನೆಲೆಯಲ್ಲಿ ಚಿಂತನಾ ಕ್ರಮವು ಸಕಾರಾತ್ಮಕವಾಗಿ ಸಾಗುವುದಲ್ಲದೆ ಉನ್ನತಿಯೆಡೆಗೆ ಕರೆದೊಯ್ಯುವುದು ಮಹತ್ವವೆನಿಸುವುದು. ಹೆಣ್ಣಿನ ಬದುಕಿನಲ್ಲಿ ಬಂದೊದಗುವ ಸಂಕಷ್ಟಗಳನ್ನು, ಒಂಟಿಯಾಗಿ ನಿಭಾಯಿಸುವ ಎದೆಗಾರಿಕೆಯೂ ಮಾದರಿಯಾಗಿ ಕಂಡು ಬರುವುದು. ಮಹಿಳೆಗೆ ಅವಶ್ಯಕವಾಗಿ ಬೇಕಾಗಿರುವ ಆರ್ಥಿಕ ಭದ್ರತೆಯತ್ತ ಬೆಳಕು ಚೆಲ್ಲುತ್ತದೆ.

ಮನುಷ್ಯ ಎಷ್ಟೇ ಪ್ರಗತಿಯತ್ತ ಸಾಗಿದ್ದರೂ ಅಂತರಜಾತಿ ವಿವಾಹ ಮಾನ್ಯತೆ ಪಡೆಯುವಲ್ಲಿ ಹೇಗೆ ಸೋಲುತ್ತಿದೆ? ಮುಂದೆ ಕಾಲ ಕ್ರಮೇಣ ಅದನ್ನೇ ಹೇಗೆ ಸ್ವೀಕರಿಸುತ್ತದೆ ಎನ್ನುವ ಅಂಶವನ್ನು ಪಾತ್ರಗಳ ಆಲೋಚನಾ ಕ್ರಮದ ಮುಖಾಂತರ ಹೊರ ಹಾಕಿರುವ ಪ್ರಯತ್ನ ಪ್ರಜ್ಞಾಪೂರ್ವಕವಾಗಿ ಮೂಡಿ ಬಂದಿದೆ. ತಲೆಮಾರಿನಿಂದ ತಲೆಮಾರಿಗೆ ಬದಲಾಗುವ ವಿಚಾರಧಾರೆ ಕಾಲ ಕ್ರಮೇಣ ತನ್ನ ಮೌಲ್ಯ ಕಳೆದುಕೊಳ್ಳುವುದನ್ನೂ ಗಮನಿಸಬಹುದು. ಮಾನವೀಯ ಸಂಬಂಧಗಳನ್ನು ಪೋಷಿಸುತ್ತ ತನ್ನ ಕರ್ತವ್ಯ ನಿಭಾಯಿಸುವ ನಾಯಕಿ, ಹೆಣ್ಣಿಗೆ ಶಿಕ್ಷಣ, ವೃತ್ತಿ, ಅಧಿಕಾರ ಎಲ್ಲದರ ಅಗತ್ಯವಿದೆ ಮತ್ತು ಅದನ್ನು ನಿಭಾಯಿಸುವ ಜಾಣ್ಮೆಯೂ ಇದೆ ಎನ್ನುವುದನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗುವಳು. ಸಶಕ್ತ ಮಹಿಳೆಯ ಪ್ರಗತಿಯನ್ನು ದಾಖಲಿಸುವುದು. ಪ್ರಜ್ಞಾವಂತಿಕೆಯ ಸರಳ ನಿರೂಪಣೆ, ಸುಖಾಂತ್ಯದ ಖುಷಿಯೊಂದಿಗೆ, ಓದಿಸಿಕೊಂಡು ಹೋಗುವ ಕಾದಂಬರಿ ಪ್ರೇಮ ಕಾವ್ಯ.

About the Author

ಕಾವ್ಯಶ್ರೀ ಮಹಾಗಾಂವಕರ್
(11 April 1969)

ಲೇಖಕಿ, ಕಾವ್ಯಶ್ರೀ ಮಹಾಗಾಂವಕರ್‌ ಹುಟ್ಟೂರು ಶಿವಮೊಗ್ಗ. ಇವರು ಬರೆದಿರುವ ಕಥೆಗಳಿಗೆ ಗುಲ್ಬರ್ಗ ವಿಶ್ವವಿದ್ಯಾಯಲಯವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಬರೆದಿರುವ ಪ್ರಮುಖ ಕಾದಂಬರಿ ಪ್ರೇಮಕಾವ್ಯ ಹಾಗೂ ಬೆಳಕಿನೆಡೆಗೆ. ಪಿಸುಮಾತುಗಳ ಜುಗಲ್, ಜೀವಜಗತ್ತಿಗೆ ಜೇನಹನಿ, ಪ್ರಳಯದಲ್ಲೊಂದು ಪ್ರಣತಿ ಅವರ ಮತ್ತಿತರ ಕೃತಿಗಳು. ...

READ MORE

Related Books