ಬೇಡ ಕೃಷ್ಣ ರಂಗಿನಾಟ

Author : ಯಂಡಮೂರಿ ವೀರೇಂದ್ರನಾಥ್

₹ 90.00
Published by: ಸಾಹಿತ್ಯ ಪ್ರಕಾಶನ,

Synopsys

ಲೇಖಕ ಯಂಡಮೂರಿ ವೀರೇಂದ್ರನಾಥ್ ಅವರ ತೆಲುಗು ಮೂಲದ ಕಾದಂಬರಿಯನ್ನು ಕಾದಂಬರಿಕಾರ ರಾಜಾ ಚೆಂಡೂರ್ ಕನ್ನಡಕ್ಕೆ ಬೇಡ ಕೃಷ್ಣ ರಂಗಿನಾಟ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ದೇವಲೋಕದ ಮೇಡ್ ಫಾರ್ ಈಚದರ್ ಸ್ಪರ್ಧೆ ಯಲ್ಲಿ ಇಂದ್ರ ಶಚಿದೇವಿ ಜೋಡಿಗೆ ಸಮನಾದ ಪೈಪೋಟಿಯನ್ನು ಬ್ರಹ್ಮ ಸರಸ್ವತಿಯರ ಜೋಡಿ ನೀಡುತ್ತದೆ..ಆಗ ಆ ಎರಡೂ ಜೋಡಿಯಲ್ಲಿ ತಾವೇ ಶ್ರೇಷ್ಠರೆಂಬ ಜಗಳ ಶುರುವಾಗುತ್ತದೆ..ಸರಸ್ವತಿ ಮೂರು ಗಂಡು ಎರಡು ಹೆಣ್ಣುಗಳನ್ನು ಸೃಷ್ಟಿಸುವ ಮೂಲಕ ತಾನು ಶ್ರೇಷ್ಠ ಎಂದು ತೋರಿಸುವ ಭರದಲ್ಲಿ ಒಂದೇ ಹೋಲಿಕೆಯ ಮನುಷ್ಯರನ್ನು ಸೃಷ್ಟಿಸಿ ಬಿಡುತ್ತಾಳೆ..ನಂತರವೇ ಶುರುವಾಗುವ ಪೇಚಾಟ ಅವಘಡ ಅನರ್ಥ...ಅಬ್ಬಾ...ಓದಿಯೇ ಸವಿಯಬೇಕು..ಶುದ್ಧ ಮನರಂಜನೆಗಾಗಿ ಮಾತ್ರ, ಯಾವುದೇ ತರ್ಕಕ್ಕೆ ಜಾಗವಿಲ್ಲ .

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books