ಹರಿದ ಹೊನಲು

Author : ಉಷಾ ನವರತ್ನರಾಂ

Pages 131

₹ 4.00




Year of Publication: 1977
Published by: ಜಯಲಕ್ಷ್ಮೀ ಪ್ರಕಾಶನ
Address: ಬಳೆ ಪೇಟೆ ಚೌಕ ಬೆಂಗಳೂರು-53

Synopsys

ʼಹರಿದ ಹೊನಲುʼ ಸಾಮಾಜಿಕ ಕಾದಂಬರಿಯು ಲೇಖಕಿ ಉಷಾ ನವರತ್ನರಾಂ ಅವರಿಂದ ರಚಿತವಾಗಿದೆ. ಮಾಸ ಪತ್ರಿಕೆಯಲ್ಲಿ ಮಿನಿ ಕಾದಂಬರಿಗಳಾಗಿ ಪ್ರಕಟವಾಗಿದ್ದ ಕಥೆಗಳನ್ನೆಲ್ಲ ಸೇರಿಸಿ ಈ ಕಾದಂಬರಿಯನ್ನು ರೂಪಿಸಲಾಗಿದೆ. ಭಾವನೆಗಳಿಗೆ ಹೆಚ್ಚು ಬೆಲೆ ಕೊಡುವ ಇಲ್ಲಿನ ಪಾತ್ರಗಳು, ಬದುಕಿನ ಏರಿಳಿತಗಳ ನಡುವೆ ಸಾಗುತ್ತದೆ. ಒಂಟಿ ಹೆಣ್ಣು ಸಮಾಜದಲ್ಲಿ ಅನುಭವಿಸುವ ನೋವುಗಳು, ಆಸರೆಗಾಗಿ ಪರಿತಪಿಸುವ ಸನ್ನಿವೇಶಗಳನ್ನು ಸರಳ ಭಾಷೆಯಲ್ಲಿ ವಿವರಿಸಲಾಗಿದೆ. ಒಟ್ಟಿನಲ್ಲಿ , ಕಾದಂಬರಿಯು ಹೆಣ್ಣಿನ ಭಾವನೆಗಳ ಸುತ್ತ ಸುತ್ತುತ್ತದೆ.

About the Author

ಉಷಾ ನವರತ್ನರಾಂ
(23 November 1939 - 10 October 2000)

ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...

READ MORE

Related Books