ಹೃದಯ ಗೀತ-ತ್ರಿವೇಣಿ ಅವರ ಕಾದಂಬರಿ. ತ್ರಿವೇಣಿ ಪಬ್ಲಿಕೇಷನ್ಸ್ ನ ಮೊದಲ ಮುದ್ರಣವಾಗಿ 1987ರಲ್ಲಿ ಪ್ರಕಟಗೊಂಡಿತ್ತು. ಕಾದಂಬರಿಯ ಪಾತ್ರಗಳಾದ ಗೀತಾ ಹಾಗೂ ಪದ್ಮಿನಿ ಸಹಪಾಠಿಗಳು. ಮುಂದೆ ಜೀವನದುದ್ದಕ್ಕೂ ಕಷ್ಟ-ಸುಖಗಳನ್ನು ಪರಸ್ಪರ ವಿನಿಮಯ ಮಾತ್ರವಲ್ಲ; ಪರಸ್ಪರ ವ್ಯಕ್ತಿಗತ ವಿಚಾರಗಳನ್ನು ಸಹ ಹಂಚಿಕೊಳ್ಳುವ ಪ್ರಕ್ರಿಯೆಯಲ್ಲಿ ನಡೆಯುವ ಮನೋವಿಶ್ಲೇಷಣಾತ್ಮಕ ವ್ಯಾಪಾರಗಳ ಹಿನ್ನೆಲೆಯಲ್ಲಿ ಕಾದಂಬರಿ ರೂಪುಗೊಂಡಿದೆ.
ಮನಸ್ಸಿನ ಕ್ರಿಯೆಗಳಿಗೆ ಕಥಾರೂಪ ನೀಡಿ ಕಾದಂಬರಿಗಳನ್ನು ರಚಿಸಿದ್ದು ತ್ರಿವೇಣಿ ಅವರ ಹೆಗ್ಗಳಿಕೆ. ಇವರು 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಜನಿಸಿದರು. ಮನಸ್ಸಿನ ಭಾವನೆಗಳನ್ನೂ ಚಿತ್ರಿಸಿ ಬರೆದ ಇವರು ರಚಿಸಿದ ಪ್ರಮುಖ ಕಾದಂಬರಿಗಳೆಂದರೆ- ಹೂವು ಹಣ್ಣು, ಅಪಸ್ವರ, ಅಪಜಯ, ಸೋತುಗೆದ್ದವಳು, ಬೆಕ್ಕಿನಕಣ್ಣು, ಶರಪಂಜರ, ದೂರದ ಬೆಟ್ಟ, ಅಪಜಯ, ಕಂಕಣ, ಮುಚ್ಚಿದ ಬಾಗಿಲು, ಬಾನು ಬೆಳಗಿತು, ಅವಳ ಮನೆ, ವಸಂತಗಾನದಿಂದ ಹಿಡಿದು ಬೆಳ್ಳಿಮೋಡದವರೆಗೆ ಸುಮಾರು 20 ಕಾದಂಬರಿಗಳನ್ನು ಹಾಗೂ 3 ಕತಾ ಸಂಕಲನಗಳನ್ನು ರಚಿಸಿದ್ದಾರೆ. ಇವರ ಬೆಳ್ಳಿಮೋಡ, ಶರಪಂಜರ, ಹಣ್ಣಲೆ ಚಿಗುರಿದಾಗ ಕಾದಂಬರಿಗಳು ಚಲನಚಿತ್ರವಾಗಿಯೂ ಅಪಾರ ಜನಮನ್ನಣೆ ಗಳಿಸಿವೆ. ಇವರಿಗೆ ಕರ್ನಾಟಕ ರಾಜ್ಯಪ್ರಶಸ್ತಿ – 'ಅವಳ ಮನೆ' ...
READ MORE