ಶರಧಿ ಹೋಗಿ ಬಾ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 226

₹ 170.00
Year of Publication: 2002
Published by: ಸುಧಾ ಎಂಟರ್‍ ಪ್ರೈಸಸ್
Address:  #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560107
Phone: 98454 49811

Synopsys

ಈ ಕಾದಂಬರಿಯಲ್ಲಿ ಬರುವ  ಪಾರಿಜಾತಳ ಪಾತ್ರವನ್ನು ಹೊರತುಪಡಿಸಿ ಉಳಿದೆಲ್ಲ ಪಾತ್ರಗಳು ಸಹ ಒಂದು ನಿರ್ದಿಷ್ಟವಾದ ಪರಿಧಿಗೆ ಒಳಪಡದೆ ನಾವು ನೋಡುವ ದೃಷ್ಟಿಕೋನದಿಂದ ಮಾತ್ರವೇ ಅಳಿಯಲು ಸಾಧ್ಯವೇನೋ? ಕೆಲವೊಮ್ಮೆ ಸರಿಯೆನಿಸಿದರೆ ಸರಿಯೆಂಬಂತೆ, ತಪ್ಪೆಂದರೆ ತಪ್ಪೆಂಬಂತೆ, ನಮಗೆ ಘಾಸವಾಗುತ್ತದೆ.ಇಲ್ಲಿ ಮನಸ್ಸುಗಳ ನಡುವಿನ ತಳಮಳ ಮಾತಿನಿಂದ ಹೊರಬರದೆ ತಡಕಾಡುತ್ತವೆ.ಅತೀ ಒಳ್ಳೆಯತನವೇ ತಲೆಗೆ ಸುತ್ತಿಕೊಳ್ಳುವ ಗ್ರಹಚಾರವೆಂಬಂತೆ ಅಪರೂಪ, ಪುರುಷೋತ್ತಮ, ಕಾಮೇಶ್ವರರಾವ್ ಎಲ್ಲರೂ ಒಳ್ಳೆಯತನದ ಪ್ರತಿರೂಪವೇ.ಇದರ ಲಾಭ ಪಡೆದದ್ದು ಪಾರಿಜಾತ.ಇದರ ಫಲ ಸಮಾಜದಲ್ಲಿ ಸಿಗದ ಸ್ಥಾನಮಾನಕ್ಕಾಗಿ ಹೋರಾಡುವ ಶರಧಿ, ಹಾಳಾಗಿದ್ದು ಶರಧಿ ಜೀವನ ಹಾಗೂ ಕಾಮೇಶ್ವರರಾವ್ ಬದುಕು,ಅದೇ ಸಮಾಜದಲ್ಲಿ ಅಧಿಕೃತ ಮನ್ನಣೆ ಪಡೆದ ರೋಹಿತ್ ಅನುಭವಿಸುವ ವೇದನೆ  ಈ ಎಲ್ಲಾ ವಿಷಯಗಳು ಈ ಕೃತಿಯಲ್ಲಿ ಸ್ಪಷ್ಟವಾಗಿ ಮೂಡಿಬಂದಿವೆ.ಶರಧಿ ಮಾಡಿದ ತಪ್ಪಾದರೂ ಏನು? ಅನ್ಯಾಯವಾಗಿದ್ದು ಮಾತ್ರ ಶರಧಿಗೆ ಈ ಎಲ್ಲಾ ಅಂಶಗಳನ್ನು ಮುಂದಿಡುತ್ತಾ ಈ ಕೃತಿಯೂ ಮುಂದೆ ಸಾಗುತ್ತದೆ.ಪಾರಿಜಾತಳ ಕೆಟ್ಟ ಹಠ ಅವಳನ್ನು ಎಲ್ಲಿಗೆ ತಂದು ನಿಲ್ಲಿಸಿದೆ, ಬದುಕಿನಲ್ಲಿ ಎಲ್ಲ ಇದ್ದೂ ಏನು ಇಲ್ಲವೆಂಬ ಬರೀ ಖಾಲಿತನ.ಕ್ಷಣಕ್ಷಣವೂ ಹಂಗಿಸುತ್ತಿದ್ದ ಮಗಳ ಕೊಂಕುಮಾತು.ಕೊನೆಗೆ ಉಳಿದದ್ದು ಏನೂ ಇಲ್ಲ.ತನ್ನ ನಂಬಿದವರಿಗೂ ದ್ರೋಹ,ತಾನು ನಂಬಿದವರಿಂದಲೂ ಅದೇ,, ಬದುಕು ತನ್ನ ಅಸ್ತಿತ್ವವನ್ನು ಹುಡುಕಿಕೊಳ್ಳುವಾಗ ಮಾಡಿದ ತಪ್ಪು ನೈತಿಕವಾದದ್ದೇ ಅನೈತಿಕವಾದದ್ದೇ ಎಂಬ ಜಿಜ್ಞಾಸೆ ಮೂಡಿಸಿಕೊಳ್ಳುವ ಅವಿವೇಕಿಗಳ ಸಾಲಿನಲ್ಲಿ ನೂಕುನುಗ್ಗಲಿಲ್ಲದೆ.ಪಾರಿಜಾತ ಮೊದಲ ಸ್ಥಾನದಲ್ಲಿ ನಿಂತು ಬಿಡುತ್ತಾಳೆ.ಶರಧಿ ಬಂಧವನ್ನು ತೊಡೆದುಕೊಂಡು ಹೊರಟಳೋ,ಇಲ್ಲ ಬಂಧವನ್ನು ಹುಡುಕಿಕೊಂಡು ಹೊರಟಳೋ?ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಾದಂಬರಿಯಲ್ಲಿದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books