ಶುಭ ಬೆಳಗು ಮತ್ತು ಕಾಫಿ!

Author : ಪ್ರಕಾಶ್ ಡಿಸೋಜಾ

Pages 104

₹ 100.00
Year of Publication: 2021
Published by: ಪ್ರಕಾಶ್ ಡಿಸೋಜಾ
Address: ಆಶಿರ್ವಾದ್ ಪಾಂಡ್ಯೋಟ್ ಮಲೆಬೆಟ್ಟು, ಕೊಯ್ಯುರ್ ಪೋಸ್ಟ್ ಬೆಳ್ತಂಗಡಿ- 574214(ದಕ್ಷಿಣ ಕನ್ನಡ ಜಿಲ್ಲೆ)
Phone: 9741344670

Synopsys

ಶುಭ ಬೆಳಗು ಮತ್ತು ಕಾಫಿ!- ಪ್ರಕಾಶ ಮಲೆಬೆಟ್ಟು ಅವರ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ. ಬಹುತೇಕ ಎಲ್ಲ ಲೇಖನಗಳು ಪ್ರೇರಣಾತ್ಮಕವಾಗಿವೆ. ಬೆಳಗಿನಲ್ಲಿ ಬಿಸಿ ಬಿಸಿ ಕಾಫಿ ಹೀರಿದಾಗ ಮನಸ್ಸು ಆಹ್ಲಾದಗೊಳ್ಳುವಂತೆ ಬೇಸರದ ಬದುಕು ಉಲ್ಲಾಸಮಯಗೊಳಿಸುವ ಈ ಲೇಖನಗಳು ಜೀವನವನ್ನು ಪ್ರೀತಿಸಲು ಪ್ರೇರೇಪಿಸುತ್ತವೆ ಎಂದು ತಮ್ಮ ಲೇಖನಗಳ ಕುರಿತು ಲೇಖಕರು  ಹೇಳಿಕೊಂಡಿದ್ದಾರೆ. 

ಶುಭ ಬೆಳಗು ಮತ್ತು ಕಾಫಿ, ಮನಸ್ಸು ಭಾವನೆ ಸಂಬಂಧ, ನಾವು ಕೂಡ ನಾಯಕರಾಗಬಹುದು, ಸುಳ್ಳನ್ನು ಪ್ರೀತಿಸುವವನು ಮನುಷ್ಯ ಸಂಬಂಧಗಳಿಗೆ ಬೆಲೆ ಕೊಡುವುದಿಲ್ಲ, ಮಾತು ಮೌನ ಯಾವುದು ಶ್ರೇಷ್ಠ?, ಸಮಸ್ಯೆಗಳು ನಮಗೆ ವರವೇ ಇಲ್ಲ ಶಾಪವೆ?, ಅತಿರೇಕದ ವ್ಯಾಮೋಹ, ನಮ್ಮ ನೊಗವನ್ನು ನಾವೇ ಹೊರಬೇಕು, ವೈವಾಹಿಕ ಜೀವನದ ಸಾಮರಸ್ಯಕ್ಕೆ ಹೊಂದಾಣಿಕೆ ಅಗತ್ಯ, ಲಿಂಗಭೇದವಿಲ್ಲದೇ ಮಕ್ಕಳನ್ನು ಬೆಳೆಸುವುದು ಹೇಗೆ? ಇತ್ಯದಿ ಹೀಗೆ ಒಟ್ಟು 30 ಶೀರ್ಷಿಕೆಗಳ ವೈಚಾರಿಕ ಹಾಗೂ ಭಾವನಾತ್ಮಕ ವಿಷಯ ವಸ್ತುಗಳನ್ನು ಕೇಂದ್ರವಾಗಿಸಿ ಬರೆದ ಬರಹಗಳು ಇಲ್ಲಿ ಸಂಕಲನಗೊಂಡಿವೆ. 

 

About the Author

ಪ್ರಕಾಶ್ ಡಿಸೋಜಾ

ಪ್ರಕಾಶ ಡಿಸೋಜಾ ಮೂಲತಃ  ಊರು ಉಜ್ಜಿರೆಯ ಬಳಿಯ ಹಳ್ಳಿ ಮಲೆಬೆಟ್ಟು. ಹುಟ್ಟಿ ಬೆಳೆದದ್ದು ಮಲೆನಾಡಿನ ಬಸರಿಕಟ್ಟೆ ಗ್ರಾಮ.ಇವರ ಕಾವ್ಯನಾಮ ‘ಪ್ರಕಾಶ ಮಲೆಬೆಟ್ಟು’. ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿಬಿಎಂ ಪದವೀಧರರು. ಪ್ರಸ್ತುತ ದುಬೈ ಯಲ್ಲಿ ಕುಟುಂಬದ ಸಣ್ಣ ಉದ್ಯಮ ನಡೆಸುತ್ತಿದ್ದಾರೆ. ಬರವಣಿಗೆ ಶುರು ಹಚ್ಚಿಕೊಂಡದ್ದು ಕಳೆದ ಎರಡು ವರುಷಗಳಿಂದ. ಇವರು ಬರೆದ ಲೇಖನಗಳು ಸುದ್ದಿ ಬಿಡುಗಡೆ ವಾರಪತ್ರಿಕೆ , ಜನಮಿಡಿತ ದಿನ ಪತ್ರಿಕೆ, ಹೊನಲು ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: "ಶುಭ ಬೆಳಗು ಮತ್ತು ಕಾಫಿ  (ಲೇಖನಗಳ ಸಂಕಲನ)   ...

READ MORE

Excerpt / E-Books

ಪ್ರೇಮ ವಿವಾಹದ ಬಗ್ಗೆ ಒಂದು ಧನಾತ್ಮಕ ಚಿಂತನೆ. ‘ಮದುವೆ’ ಮಾನವನ ಜೀವನದ ಒಂದು ಅಮೃತ ಗಳಿಗೆ. ಎರಡು ಆತ್ಮಗಳು ಒಂದಾಗಿ ಬೆಸೆದು ಒಂದೇ ಆತ್ಮವಾಗಿ ಹೊಸ ಜೀವನ ಆರಂಭಿಸಲು ಅನುಮತಿಸುವ ಒಂದು ಪವಿತ್ರ ಕಾರ್ಯ. ‘ಮದುವೆ ’ ಒಂದು ಪವಿತ್ರ ಅನುಬಂಧ.ಎರಡು ವ್ಯಕ್ತಿಗಳು, ಎರಡು ಕುಟುಂಬಗಳು ಪರಸ್ಪರ ಬದ್ಧರಾಗಿರುತ್ತೇವೆ ಎಂದು ಪ್ರಮಾಣೀಕರಿಸುವ ಒಡಂಬಡಿಕೆಯೇ ಈ ಮದುವೆ. ಸುಖ ಮತ್ತು ದುಃಖದಲ್ಲಿ, ಬದುಕಿನ ಯಾವುದೇ ಘಟ್ಟದಲ್ಲಿ ಪರಸ್ಪರ ಕೈ ಬಿಡದೇ  ಒಂದಾಗಿ ಕಡೆ ತನಕ ಬಾಳುತ್ತೇವೆ ಎಂದು ನವ ವಧು ವರರು ಮದುವೆಯ ದಿನ ಅಗ್ನಿಸಾಕ್ಷಿಯಾಗಿ, ದೇವರ ಸಾಕ್ಸಿಯಾಗಿ, ಗುರು ಹಿರಿಯರ ಆಶೀರ್ವಾದದೊಂದಿಗೆ ಪರಸ್ಪರ ಭಾಷೆ ಕೊಟ್ಟು ನವ ಬಾಳಿಗೆ ಕಾಲಿಡುತ್ತಾರೆ . ‘ಮದುವೆ’ ಆಯಿತು ಅಂದ ತಕ್ಷಣ ಕೆಲವರು ಒಂದು ಪ್ರಶ್ನೆ ಮುಂದಿಡುತ್ತಾರೆ ! ಕುಟುಂಬದವರು ಸೇರಿ ಮಾಡಿದ ವ್ಯವಸ್ಥಿತ ಮದುವೆಯೋ ಅಥವಾ ಪ್ರೇಮ ವಿವಾಹವೋ ? ಇದಕ್ಕೆ ಉತ್ತರ ಹೇಳಿದೊಡನೆ ಪ್ರಶ್ನೆಗಳ ಸರದಿ ಮುಂದುವರೆಯುತ್ತದೆ. ಕೆಲವು ಮಡಿವಂತರು ಪ್ರೇಮ ವಿವಾಹ ಎಂದೊಡನೆ ಮೂಗು ಮುರಿಯೋದು ಕೂಡ ಇದೆ. ಪ್ರೇಮ ವಿವಾಹ ಹೆಚ್ಚುದಿನ ಬಾಳುವುದಿಲ್ಲ, ಮುಂದೆ ಅನೇಕ ಸಮಸ್ಯೆಗಳು ಬರ್ತವೆ ಎಂದು ಜನ ಮಾತನಾಡಿಕೊಳ್ಳುವುದು ಅನೇಕ ಬರಿ ನಾವು ಕೇಳಿರಬಹುದು. ಆದರೆ ವಾಸ್ತವತೆ ಏನು ? ಪ್ರೇಮ ವಿವಾಹ ನಿಜವಾಗ್ಲೂ ಸಮಸ್ಯೆಗಳನ್ನು ಉಂಟು ಮಾಡುತ್ತದೆಯಾ ಎಂದು ಪ್ರಶ್ನಿಸಿದಾಗ ಏಕೋ ಹೃದಯ ಆ ಮಾತನ್ನು ಒಪ್ಪಲು ತಯಾರಿಲ್ಲ. ‘"ಮದುವೆ ಒಂದು ದೈವಿಕ ಬಂಧ. ಇಂತಿರುವಾಗ ಅದು ಪ್ರೇಮದ ಅಡಿಪಾಯದ ಮೇಲೆ ಕಟ್ಟಿದಾಗ ಇನ್ನಷ್ಟು ಗಟ್ಟಿಯಾಗಿ, ರೋಚಕವಾಗಿ ಇರಬಹುದು ಒಮ್ಮೆ ಯೋಚನೆಮಾಡಿ ನೋಡಿ. ಪ್ರೀತಿ ಯಾವಾಗಲು ಬೇಷರತ್ತಾಗಿರುತ್ತದೆ. ಅದೇ ಪ್ರೀತಿಯನ್ನು ನೀವು ಮದುವೆಯ ಬಂಧದಲ್ಲಿ ಬಂಧಿಸಿದಾಗ ಅದು ಮತ್ತಷ್ಟು ಗಟ್ಟಿಯಾಗುತ್ತದೆಯೇ ವಿನಃ ಬಿರುಕು ಬಿಡಲು ಸಾಧ್ಯವಿಲ್ಲ, ಆದರೆ ಅದು ಬೇಷರತ್ತಾದ ಪ್ರೀತಿ ಆಗಿದ್ದಾಗ ಮಾತ್ರ . ‘ಹದಿಹರೆಯದ ಹೃದಯದ ಪಿಸು ಮಾತು/ಕನಸು’ ಒಮ್ಮೆ ನಿಮ್ಮ ಹದಿಹರೆಯದ ಜೀವನದ ಬಗ್ಗೆ ಯೋಚನೆ ಮಾಡಿ ನೋಡಿ. ಹದಿ ಹರೆಯ ಕುದಿ ಹೃದಯ. ಒಮ್ಮೆಯಾದರೂ ಇಂಥ ಹುಡುಗಿ ನನ್ನ ಮನದಿನ್ನೇ ಯಾಗಿ ಬರಬೇಕು ಬಾಳಲಿ ಮುಂದೆ ಅಂತ ಹುಡುಗರು ಕನಸು ಕಂಡೇ ಕಂಡಿರುತ್ತಾರೆ . ಅಷ್ಟೇ ಅಲ್ಲ,  ಅನುಕೂಲಕರವಾದ ಪರಿಸ್ಥಿತಿ ಇದ್ದಲ್ಲಿ ಖಂಡಿತ ತಮ್ಮ ಮದುವೆಯಾಗುವ ತನಕ ಕೂಡ ಆ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಾರೆ .

Related Books