ಜಲಯುದ್ಧ

Author : ಜಾಣಗೆರೆ ವೆಂಕಟರಾಮಯ್ಯ

Pages 448

₹ 360.00




Year of Publication: 2020
Published by: ಶಶಿ ಪಬ್ಲಿಷರ್
Address: ಅಕ್ಕೂರು, ಜಲಮಂಗಲ ರಸ್ತೆ, ಜಲಮಂಗಲ, ಕರ್ನಾಟಕ-562159

Synopsys

ಖ್ಯಾತ ಪತ್ರಕರ್ತ ಹಾಗೂ ಲೇಖಕ ಜಾಣಗೆರೆ ವೆಂಕಟರಾಮಯ್ಯ ಅವರ ಕಾದಂಬರಿ-ಜಲಯುದ್ಧ. ನೀರೊಳಗೆ ನಿಂತು ಪರಸ್ಪರ ವೈರಿಗಳು ಎದುರಿದ್ದವರ ಮುಖಕ್ಕೆ ನೀರೆರಚುವುದು ಜಲಯುದ್ಧ. ಯುದ್ಧದಿಂದ ಅಸಂಖ್ಯ ಸೇನಾನಿಗಳ ಸಾವು ತಪ್ಪಿಸಲು ಅಂದಿನ ಯುದ್ಧ ನೀತಿ ಇದಾಗಿತ್ತು. ಬಲಾಢ್ಯ ಅರಸ ಮಾತ್ರ ಗೆಲ್ಲುತ್ತಿದ್ದ. ಇಲ್ಲಿ ಯಾವುದೇ ರಹಸ್ಯ ತಂತ್ರಗಳು ಕೆಲಸ ಮಾಡುತ್ತಿರಲಿಲ್ಲ. ಇದೇ ಪರಿಕಲ್ಪನೆಯನ್ನು ಸಾಮಾಜಿಕ ಸಂದರ್ಭದಲ್ಲಿಟ್ಟು ಹೆಣೆದ ಕಾದಂಬರಿ ಇದು. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

About the Author

ಜಾಣಗೆರೆ ವೆಂಕಟರಾಮಯ್ಯ
(05 June 1949)

ಹಿರಿಯ ಪತ್ರಕರ್ತ, ಲೇಖಕ ಜಾಣಗೆರೆ ವೆಂಕಟರಾಮಯ್ಯ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಜಾಣಗೆರೆಯವರು. ಓದಿದ್ದು ಬಿ.ಕಾಂ ಆದರೂ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಅವರ ಆಸಕ್ತಿದಾಯಕ ಕ್ಷೇತ್ರವಾಗಿತ್ತು. ಪತ್ರಕರ್ತರಾಗಿ  ಪ್ರಪಾತ, ನನ್ನ ನಲ್ಲ ನನ್ನ ಜನ, ಕಪ್ಪು ನ್ಯಾಯ, ದಡ, ನೆಲೆ, ಗರ, ಮಹಾನದಿ, ಮಾಯಾನಗರಿಯಲ್ಲಿ ಮಾಯಾಶಿಲ್ಲಿ, ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು, ಸವೆಯದ ಹಾದಿ, ಎದೆಯಾಳ, ಬೆಂಕಿ ಮತ್ತು ಬೆಳಕು ಇವರ ಪ್ರಮುಖ ಕೃತಿಗಳು.  ಇವರಿಗೆ ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಚ್.ಕೆ. ವೀರಣ್ಣಗೌಡ ಪ್ರಶಸ್ತಿ, ವಿ.ಚಿ. ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ, ...

READ MORE

Related Books