ಹೂವಿನ ಅರಮನೆ

Author : ಕೆ ರಮಾನಂದ

Pages 168

₹ 150.00




Year of Publication: 2008
Published by: ಕಾವ್ಯಕಲಾ ಪ್ರಕಾಶನ
Address: #1273, 7 ನೇ ಕ್ರಾಸ್, ಚಂದ್ರ, ಲೇಔಟ್,ವಿಜಯನಗರ ಬೆಂಗಳೂರು-40

Synopsys

ಲೇಖಕ ಕೆ. ರಮಾನಂದ ಅವರ ಸಾಮಾಜಿಕ ಕಾದಂಬರಿ-ಹೂವಿನ ಅರಮನೆ. ಸಾಮಾಜಿಕ ದುರಂತವನ್ನು ವಿವರಿಸುವ ಕೃತಿಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಎಸ್.ಜಿ ಜೈನಾಪೂರ ಅವರು, ‘ಒಬ್ಬ ಸಂವೇದನಾಶೀಲ ಲೇಖಕನ ತುಡಿತ ಮಿಡಿತ ಎಷ್ಟು ತೀವ್ರ ಹಾಗೂ ಆಳವಾಗಿ ಸಾಮಾಜಿಕ ಮತ್ತು ವ್ಯಕ್ತಿ ದುರಂತಗಳಿಗೆ ಸ್ಪಂದಿಸಬಲ್ಲದು ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ. ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬಗಳು ಹಳೇ ಮೈಸೂರು ಪ್ರಾಂತದ ವಾತಾವರಣದ ನಂಜನಗೂಡು, ಹೊಳೆನರಸಿಪುರ, ಮೈಸೂರು, ಕೊಳ್ಳೇಗಾಲ ಮುಂತಾದ ಊರುಗಳ ಕುಟುಂಬಗಳ ಸುತ್ತ ಕಥೆಯು ಸುತ್ತಾಡುತ್ತ ಗೋದಾವರಿಯಂತಹ ಒಬ್ಬ ದುರ್ಭಾಗ್ಯ ಹೆಣ್ಣಿನ ಬಾಳಿನ ಬವಣೆಯ ವಿವರಗಳನ್ನು ಹೊಂದುತ್ತ , ರೂಪದಿಂದ ವಂಚಿತಳಾದ ಅವಳಲ್ಲಿ ಕ್ಯಾನ್ಸರ್ ದಂತಹ ಪ್ರಾಣಘಾತಕ ಕಾಯಿಲೆ ಕಾಣಿಸಿಕೊಂಡು, ಜೀವನ ನರಕವಾಗಿ ಆತ್ಮಹತ್ಯೆಯಲ್ಲಿ ಅವಸಾನವಾಗುವ ಹೃದಯ ವಿದ್ರಾವಕ ಕಥೆ ಇದು. ಅನಾರೋಗ್ಯ ಮನಸ್ಸಿನ ವಿಕ್ಷಿಪ್ತ ವ್ಯಕ್ತಿಗಳು ಮಾಡುವ ಹಾನಿ, ಪೊಳ್ಳು ಜೀವನ ಮೌಲ್ಯಗಳಿಂದ, ಕಂದಾಚಾರಗಳಿಂದ ಜರ್ಜರಿತವಾದ ಮಧ್ಯಮ ಬ್ರಾಹ್ಮಣ ಕುಟುಂಬಗಳ ಚಿತ್ರಣವೂ ಇಲ್ಲಿದೆ. ಇಲ್ಲಿ ಬರುವ ಪಾತಜ್ಜಿ, ಗೋವಿಂದ, ಸೀತಾ,, ಪಾರ್ವತಮ್ಮ, ಕಮಲಮ್ಮ, ಭೀಮರಾಯ ಮತ್ತು ಲಕ್ಷಣಯ್ಯನಂತಹ ಪಾತ್ರಗಳು ಪಕ್ಕದ ಮನೆಯವರಷ್ಟು ತೀರ ಪರಿಚಿತರೆ! ಸಾಹಿತ್ಯದ ಜೀವಾಳ ಸೂಕ್ಷ್ಮತೆ ಮತ್ತು ನವಿರತೆ ಕೃತಿಯ ಸಕರಾತ್ಮಕ ಸ್ವೋಪಜ್ಷತೆಗೆ ಸಾಕ್ಷಿಯಾಗಿದೆ ’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ರಂಗನಾಥ ಸ್ಮಾರಕ ಕಾದಂಬರಿ ಸ್ಪರ್ಧೆಯಲ್ಲಿ ಈ ಕಾದಂಬರಿಯು ಮೆಚ್ಚುಗೆ ಪಡೆದಿದೆ. 

About the Author

ಕೆ ರಮಾನಂದ
(06 June 1957)

ಡಾ. ಕೆ ರಮಾನಂದ ಅವರು ಮೈಸೂರಿನವರು. ಬೆಂಗಳೂರಿನ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಐಚ್ಛಿಕ ಕನ್ನಡದಲ್ಲಿ ಅತ್ಯುನ್ನತ ಅಂಕಗಳನ್ನು ಬಿ.ಎ ಪದವೀಧರರು.  ಬೆಂಗಳೂರು ವಿಶ್ವವಿದ್ಯಾಲಯದಿಂದ 4ನೇ ರ್‍ಯಾಂಕ್ ನೊಂದಿಗೆ ಕನ್ನಡ ಎಂ.ಎ ಪದವೀಧರರು. ’ ವಿಜಯನಗರ ಕಾಲದ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬುದು ಇವರ ಸಂಶೋಧನಾ ಮಹಾಪ್ರಬಂಧ ಸಲ್ಲಿಸಿ, ಪಿಎಚ್.ಡಿ ಪಡೆದಿದ್ದಾರೆ. ಹಂಪಿ ವಿಶ್ವವಿದ್ಯಾಲಯದಲ್ಲಿ  ಸಂಶೋಧನಾ ವಿದ್ಯಾರ್ಥಿಗಳಿಗೆ  ಮಾರ್ಗದರ್ಶಕರು. ಆಕಾಶವಾಣಿ , ದೂರದರ್ಶನದಲ್ಲಿ ಇವರ ಚಿಂತನೆಗ್ಳೂ ಪ್ರಸಾರವಾಗಿವೆ. ಭಾರತೀಯ ವಿದ್ಯಾಭವನದಲ್ಲಿ ಸಂಶೋಧನ ವಿದ್ವಾಂಸರು. ಪ್ರಸ್ತುತ ಪ್ರತಿಷ್ಠಿತ ಸಿಂಧಿ ಕಾಲೇಜಿನಲ್ಲಿ ಪ್ರೊಫೆಸರ್ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ.  ಕೃತಿಗಳು; ನೆಕ್ಚರ್ ಆಫ್ ಲವ್ ಕೃತಿ ಸೇರಿದಂತೆ ಅವರು 120 ಲೇಖನ, ...

READ MORE

Related Books