ದಂದುಗ

Author : ಅಮರೇಶ ನುಗಡೋಣಿ

₹ 200.00
Year of Publication: 2020
Published by: ವಸಂತ ಪ್ರಕಾಶನ
Address: #360, 10 ನೇ ಬಿ ಮುಖ್ಯರಸ್ತೆ, ಜಯನಗರ ಪಶ್ಚಿಮ, ಬೆಂಗಳೂರು - 560011
Phone: 0802244 3996

Synopsys

‘ದಂದುಗ’ ಲೇಖಕ ಅಮರೇಶ ನುಗಡೋಣಿ ಅವರ ಕಾದಂಬರಿ. ಜವಾರಿ ಕಥನಕಾರ ಅಮರೇಶ ನುಗಡೋಣಿಯವರ ಮೊದಲ ಕಾದಂಬರಿ ಇದು. ಕೊರೊನಾ ಕಾಲದ ಸಂಕಷ್ಟಗಳ ಕಥನವಿದೆ. ಗಕ್ಕನೆ ಬಂದೆರಗಿದ ಕೊರೊನಾ ಎಲ್ಲರ ಎದೆಗಳನ್ನು ಝಲ್ ಎನಿಸಿತು. ದಿನಗೂಲಿಗಳ, ವಲಸೆಗಾರರ, ಇತರೆ ಜೀವಗಳ ನರಳಾಟ ತೀವ್ರಗೊಂಡಿತು. ಉಳ್ಳವರ ವಿಕಾರಗಳು ಗರಿಗೆದರಿದವು. ಇಂತಹ ಸ್ಥಿತಿಯೊಂದು ನಡೆಯುತ್ತಿರುವಾಗಲೇ ಅದನ್ನು ಕಥನವಾಗಿಸುವುದು ಸವಾಲಿನ ಕೆಲಸ. ಆ ಕೊರತೆಯನ್ನು ಈ ಕೃತಿ ನೀಗಿಸಿದೆ. ಇದು ಲಾಗಾಯ್ತಿನ ಸಂಕಟಗಳ ಬೇರುಗಳು, ವಿಪತ್ತು ಸೃಷ್ಟಿಸಿದ ದಾರುಣತೆ, ಅಸಹಾಯಕತೆ, ಭರವಸೆಗಳನ್ನು ಮುಷ್ಟಿಯಲ್ಲಿ ಹಿಡಿದಿದೆ.

About the Author

ಅಮರೇಶ ನುಗಡೋಣಿ
(02 June 1969)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...

READ MORE

Conversation

Related Books