ಸಮತಾ ಮತ್ತು ಇತರ ಕಿರು ಕಾದಂಬರಿಗಳು

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 155

₹ 140.00




Year of Publication: 2019
Published by: ಸುಧಾ ಎಂಟರ್ ಪ್ರೈಸೆಸ್
Address: 761, 8ನೇ ಮುಖ್ಯರಸ್ತೆ, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು- 560 034.
Phone: 08022443996

Synopsys

ಕನ್ನಡ ಕಾದಂಬರಿ ವಲಯದಲ್ಲಿ ವಿಶೇಷವಾಗಿ ಮಹಿಳೆ ಕಾದಂಬರಿಕಾರರಲ್ಲಿ ಅತ್ಯಂತ ಪ್ರಮುಖ ಹೆಸರು -ಸಾಯಿಸುತೆ ಅವರದ್ದು. ‘ಸಮತಾ ಮತ್ತು ಇತರ ಕಿರು ಕಾದಂಬರಿಗಳು’ ಅವರ ಕಿರು ಕಾದಂಬರಿಗಳ ಸಂಗ್ರಹ. ಹೆಚ್ಚು ತಂತ್ರಗಳ ಬಳಕೆ ಇಲ್ಲದ ಸರಳ ಭಾಷೆ, ಆಕರ್ಷಕವಾದ ನಿರೂಪಣಾ ಶೈಲಿಯು ಓದಿಗರನ್ನು ಸೆಳೆಯುವುದು ಇವರ ಕಾದಂಬರಿಗಳ ವೈಶಿಷ್ಟ್ಯ. ಸಾಮಾಜಿಕ ವಿದ್ಯಮಾನಗಳು ಹಾಗೂ ಕೌಟುಂಬಿಕ ಸಂಗತಿಗಳು ಕಾದಂಬರಿಯ ವಸ್ತುಗಳಾಗಿವೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books