ಚಿದಂಬರ ರಹಸ್ಯ

Author : ಕೆ.ಪಿ. ಪೂರ್ಣಚಂದ್ರ ತೇಜಸ್ವಿ

Pages 220

₹ 216.00




Year of Publication: 2013
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570 009
Phone: 0821-2545774, 9448203730

Synopsys

1985ರಲ್ಲಿ ಪ್ರಕಟವಾದ ತೇಜಸ್ವಿಯವರ ’ಚಿದಂಬರ ರಹಸ್ಯ’ ಮತ್ತೊಂದು ಜನಪ್ರಿಯ ಕಾದಂಬರಿ. ಈ ಕಾದಂಬರಿಗೆ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1987, 1988) ದೊರೆತಿವೆ. ಈ ಕಾದಂಬರಿಗೆ 1989ರ ಭಾರತೀಯ ಭಾಷಾ ಪ್ರಾದೇಶಿಕ ಪ್ರಶಸ್ತಿ ಸಂದಿದೆ. ಕೋಮುಗಲಭೆಯಿಂದ ಇಡೀ ಕೆಸರೂರು ಬೆಂಕಿಗಾಹುತಿಯಾಗಿದೆ. ಜಾತ್ಯಾತೀತ ಮನೋಧರ್ಮದ ರಫಿ ಮತ್ತು ಜಯಂತಿ ಮಾತ್ರ ಉಳಿದುಕೊಳ್ಳುವುದರೊಂದಿಗೆ ಕಾದಂಬರಿ ಅಂತ್ಯವಾಗುತ್ತದೆ. ಈ ಕಾದಂಬರಿಯು ರೋಗಗ್ರಸ್ಥ ಸಮಾಜಕ್ಕೆ ಪರಿಹಾರವೊಂದನ್ನು ಸೂಚಿಸುವ ಹಾಗಿದೆ. ಆರು ಮುದ್ರಣಗಳನ್ನು ಕಂಡಿದ್ದು ಮರಾಠಿ, ತಮಿಳು, ಪಂಜಾಬಿ, ತೆಲುಗು ಭಾಷೆಗಳಿಗೂ ಅನುವಾದವಾಗಿದೆ.

About the Author

ಕೆ.ಪಿ. ಪೂರ್ಣಚಂದ್ರ ತೇಜಸ್ವಿ
(08 September 1938 - 05 April 2007)

ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ  ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ತೇಜಸ್ವಿ ...

READ MORE

Awards & Recognitions

Related Books