ಧರ್ಮ ಚಾವಡಿ

Author : ಪ್ರಭಾಕರ್‌ ನೀರ್‌ಮಾರ್ಗPublished by: ಅಪರಂಜಿ ಪ್ರಕಾಶನ
Address: 2ನೇ ಅಡ್ಡ ರಸ್ತೆ, ಚಾಮುಂಡಿ ನಗರ, ಹೆಬ್ಬಾಳ, ಬೆಂಗಳೂರು- 560032
Phone: 080 2668 8488

Synopsys

ಲೇಖಕ ಡಾ. ಪ್ರಭಾಕರ್‌ ನೀರ್‌ಮಾರ್ಗ ಅವರು ಬರೆದ ಲೇಖನ ಕೃತಿ ʻಧರ್ಮಚಾವಡಿʼ. ಈ ಕಾದಂಬರಿಯು ತುಳುನಾಡಿನ ತುಳುನಾಡ ಸಂಸ್ಕೃತಿ, ಅಲ್ಲಿನವರ ಜೀವನ, ಭೂತಾರಾಧನೆಯ ಮೇಲಿನ ನಂಬಿಕೆಯನ್ನು ಅನಾವರಣಮಾಡುತ್ತದೆ. ಲೇಖಕ ಹಾಗೂ ಕನ್ನಡ ಉಪನ್ಯಾಸಕ ಡಾ. ವಾಸುದೇವ ಬೆಳ್ಳೆ ಅವರು ಪುಸ್ತಕದ ಬೆನ್ನುಡಿಯಲ್ಲಿ, “ಧರ್ಮಚಾವಡಿ ಕಾದಂಬರಿಯಲ್ಲಿ ಕರಾವಳಿಯ ಸಾಂಸ್ಕೃತಿಕ ಬದುಕು ಪ್ರತಿಬಿಂಬದಂತೆ ವ್ಯಕ್ತವಾಗಿದೆ. ನಶಿಸಿ ಕಣ್ಮರೆಯಾಗುತ್ತಿರುವ ಬದುಕಿನ ಭಾಗಗಳಾದ ನಂಬಿಕೆಗಳು, ನಡವಳಿಕೆಗಳು ಒಳಗೊಳಗೆ ಹುಟ್ಟಿಕೊಂಡ ಸಂವೇದನೆಗಳನ್ನು ದಟ್ಟವಾದ ವಿವರಗಳಲ್ಲಿ ಹಿಡಿದಿಡುತ್ತಾ ಹೊಸಕಾಲದ ವಿಚಾರ, ಆಸೆ, ಆಸಕ್ತಿಗಳ ನಿಟ್ಟಿನಿಂದ ಅವುಗಳನ್ನು ಪರೀಕ್ಷಿಸುವ ಯತ್ನ ಈ ಕಾದಂಬರಿಯಲ್ಲಿ ವ್ಯಕ್ತವಾಗಿದೆ. ಗ್ರಾಮೀಣ ಸಂವೇದನೆ ಈ ಕೃತಿಯಲ್ಲಿ ವಿಸ್ತಾರವಾಗಿ ಪ್ರಕಟಗೊಂಡಿದೆ. ಹಳ್ಳಿಯ ಬದುಕಿನ ಭಿನ್ನ ಭಿನ್ನ ಸ್ತರಗಳು ಈ ಕಾದಂಬರಿಯಲ್ಲಿ ಬಹುವಾಗಿ ವ್ಯಾಪಿಸಿದೆ. ಹಳ್ಳಿಯ ಜನರ ನಡುವಿನ ಮಾನವೀಯತೆ, ಸಂಬಂಧಗಳು, ಕೌಟುಂಬಿಕ ಮತ್ತು ಸಾಮಾಜಿಕ ವಲಯದಲ್ಲಿ ಅನಾವರಣಗೊಳ್ಳುವ ಬಗೆಯನ್ನು ಈ ಕಥನದಲ್ಲಿ ಬಹುವಾಗಿ ಪ್ರಕಟಗೊಂಡಿದೆ” ಎಂದು ಹೇಳಿದ್ದಾರೆ.

About the Author

ಪ್ರಭಾಕರ್‌ ನೀರ್‌ಮಾರ್ಗ

ಕರಾವಳಿಯ ಸೃಜನಶೀಲ ಬರಹಗಾರ ಡಾ. ಪ್ರಭಾಕರ್‌ ನೀರ್‌ಮಾರ್ಗ ಅವರು ಕನ್ನಡದ ಕಾದಂಬರಿಕಾರ. ಜೊತೆಗೆ, ನೂರಾರು ಕತೆ, ಕವನ, ನಾಟಕಗಳನ್ನೂ ಬರೆದಿದ್ದಾರೆ. ಇವರು ತುಳು ಜಾನಪದ ಲೋಕವನ್ನು ತಮ್ಮ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅನಾವರಣ ಮಾಡಿದವರು. ಹಾಗಾಗಿ ತುಳುನಾಡಿನ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಆರಾಧನಾ ಆಯಾಮಗಳು ಇವರ ಬರವಣಿಗೆಗಳಲ್ಲಿ ಕಾಣಸಿಗುತ್ತವೆ. ಇವರು ಕನ್ನಡ ಸಾಹಿತ್ಯ ಲೋಕಕ್ಕೆ 27 ಕೃತಿಗಳನ್ನು ನೀಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿ, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ, ಮಂಗಳೂರಿನ ಮ್ಯಾಪ್ಸ್ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಕೃತಿಗಳು: ಧರ್ಮಚಾವಡಿ, ಕಾಲಚಕ್ರ, ಕಣ್ಮಣಿ, ದಾಯಿತ್ವ, ಕಾರ್ಣಿಕ, ಮದಿಪು, ವೇಷ, ...

READ MORE

Related Books