ಕವಡೆಪುರದ ಕೌರವರು

Author : ವೈ.ಎಸ್. ಹರಗಿ

Pages 344

₹ 170.00
Published by: ಶ್ರೀನಿವಾಸ ಪುಸ್ತಕ ಪ್ರಕಾಶನ
Address: ಬೆಂಗಳೂರು

Synopsys

‘ಕವಡೆಪುರದ ಕೌರವರು’ ಕೃತಿಯು ವೈ.ಎಸ್. ಹರಗಿ ಅವರ ಕಾದಂಬರಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : ಇದೊಂದು ವಿಭಿನ್ನ ಕಾದಂಬರಿಯಾಗಿದೆ. ಲೇಖಕ ವೈ.ಎಸ್. ಹರಗಿ ಅವರು ಸ್ವಾತಂತ್ಯ್ರ ಚಳವಳಿಯ ಘಟನೆಗಳನ್ನು ತುಂಬಾ ನಾಜೂಕಿನಿಂದ ಬಳಸಿಕೊಂಡು ಅರ್ಥಗರ್ಭಿತ ಸನ್ನಿವೇಶವನ್ನು ಹೆಣೆದಿದ್ದಾರೆ. ಸ್ವಾತಂತ್ಯ್ರ ಹೋರಾಟಗಾರ ‘ಗಾಂಧೀ ಮಾಸ್ತರರು’ ಗ್ರಾಮಸ್ವರಾಜ್ಯದ ಕನಸು ನನಸು ಮಾಡುವ ಸಲುವಾಗಿ ಹೋರಾಟ ಮಾಡಿ. ಊರಿನ ಸಲುವಾಗಿ ಸ್ವತಃ ತಾವೇ ಬಲಿಯಾಗುವ ಸನ್ನಿವೇಶ ತುಂಬಾ ಸುಂದರವಾಗಿ ಮೂಡಬಂದಿದೆ. ಮಲೆನಾಡಿನಲ್ಲಿ ಮರಗಿಡಗಳು ದಟ್ಟ ಕಾನನದ ನಡುವೆ ಈ ಕರಾವಳಿ ಪ್ರದೇಶದಲ್ಲಿ ಸಾಗರ ಸಮುದ್ರಗಳು ಹೇಗೆ ಪಾತ್ರವಾಗುತ್ತದೆಯೋ ಅದೇ ರೀತಿ ಬಿರಿಬಿಸಿಲು ಸಹಾ ಉತ್ತರಕರ್ನಾಟಕದ ಪರಿಸರದಲ್ಲಿ ಒಂದು ಪಾತ್ರವಾಗಿದೆ. ಅದನ್ನು ಲೇಖಕರು ಈ ಕಾದಂಬರಿಯಲ್ಲಿ ಮನೋಜ್ಞವಾಗಿ ರೂಪಿಸಿದ್ದಾರೆ. ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಅಪಾರ ಹಿಡಿತವನ್ನು ಹೊಂದಿದ ಲೇಖಕ ವೈ.ಎಸ್. ಹರಗಿ ಅವರ ಎಲ್ಲಾ ಕೃತಿಗಳು ವಿಭಿನ್ನವಾಗಿರುತ್ತದೆ’ ಎಂದಿದೆ.

About the Author

ವೈ.ಎಸ್. ಹರಗಿ

ಕಾದಂಬರಿಕಾರ, ಕತೆಗಾರ ವೈ. ಎಸ್. ಹರಗಿ ಮೂಲತಃ ರೋಣ ತಾಲ್ಲೂಕಿನ ಹುಲ್ಲೂರಿನವರು. 1999ರಲ್ಲಿ ಕೆ. ಪಿ. ಎಸ್. ಸಿ. ಮುಖಾಂತರ ನೇರ ನೇಮಕಾತಿ ಹೊಂದಿ ನಂಜನಗೂಡು ಮೈಸೂರು ಜಿಲ್ಲೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ‘ಉರಿವ ಜಲ’ ಕಾದಂಬರಿಗೆ 2014ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(ಚದುರಂಗ ದತ್ತಿ ನಿಧಿ) ಪ್ರಶಸ್ತಿಗಳು ದೊರೆತಿವೆ. ಕವಡೆಪುರದ ಕೌರವರು, ಸ್ವಪ್ನಗೆಜ್ಜೆ, ಕವಡೆಪುರದ ಕೌರವರು(ಕಾದಂಬರಿ), ಮೂಕ ಹಕ್ಕಿ ನಕ್ಕಾಗ, ಬಾರಪ್ಪಾ ಬಾರೋ ಮಳೆರಾಯ, ದೇವ್ರು ಬರ್ತಾನೆ ದಾರಿಬಿಡಿ (ಕಥಾ ಸಂಕಲನ), ಮ್ಯಾಕ್ಸ್ ಮುಲ್ಲರ್ (ಜೀವನ ಚರಿತ್ರೆ), `ಕಲ್ಲರಳಿ ಹೂವಾಗಿ’ ಅವರ ಪ್ರಕಟಿತ ಕೃತಿಗಳು. ...

READ MORE

Related Books