ನೆಲದ ನಡಿಗೆ

Author : ಸುಬ್ರಹ್ಮಣ್ಯ ಸಿ. ಕುಂದೂರು

Pages 292

₹ 300.00




Year of Publication: 2023
Published by: ಸಾಹಿತ್ಯ ಸುಗ್ಗಿ ಪ್ರಕಾಶನ
Address: # 40, 1ನೇ ಮುಖ್ಯರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು-560072

Synopsys

‘ನೆಲದ ನಡಿಗೆ’ ಕೃತಿಯು ಸುಬ್ರಹ್ಮಣ್ಯ ಸಿ ಕುಂದೂರು ಅವರ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿ ಗ್ರಾಮೀಣ ಜನರ ಕೃಷಿ ಸಂಸ್ಕೃತಿಯ ಜೊತೆಗೆ ಜೀವಂತವಾಗಿದ್ದ ಜಾನಪದ ಮೀಮಾಂಸೆಯ ವಿಚಾರಗಳಿವೆ. ಅಷ್ಟೇಅಲ್ಲದೆ ಜಾನಪದ ಮೀಮಾಂಸೆಯು ಆಧುನೀಕರಣದ ಸ್ಪರ್ಶಕ್ಕೆ ಒಳಗಾದಾಗ ಉಂಟಾದ ಸಾಂಸ್ಕೃತಿಕ ಸಂಘರ್ಷವನ್ನು ಕಾದಂಬರಿಯಲ್ಲಿ ಸಂವಾದ ರೂಪದಲ್ಲಿ ನಿರೂಪಣೆಯಾಗಿದ್ದನ್ನು ಕಾಣಬಹುದಾಗಿದೆ. ಮಣಿ ಪ್ರಸಾದ ಶಾಸ್ತ್ರಿಯಂತಹ ದೊಡ್ಡ ಜ್ಞಾನಿಯಿಂದ ಪರಿಶೋಧಿಸಲ್ಪಟ್ಟ ದುರ್ಗದ ಗುಡ್ಡದ ಸಂಪೂರ್ಣ ಸಮೀಕ್ಷೆಯೊಂದಿಗೆ ಶಿಲಾಶಾಸನಗಳ ವಿಮರ್ಶೆಯನ್ನು ತುಲನೆಮಾಡಲಾಗಿದ್ದು ಶಿಲಾಯುಗದಲ್ಲಿ ಮಾನವ ಬದುಕಿದ್ದ ಎಂಬುವುದನ್ನು ಹಲವು ಶೋಧನೆಯಿಂದ ನೋಡಬಹುದಾಗಿದೆ. ಶಿಲಾಯುಗದ ಪರಿಕಲ್ಪನೆಯನ್ನು ಚರ್ಚಿಸುತ್ತಾ ವೀರಗಲ್ಲಿನ ವಿಚಾರವನ್ನು ಸಂದರ್ಶಗಳ ಮೂಲಕ ತಿಳಿಪಡಿಸಲಾಗಿದೆ. ಆಧುನಿಕ ಚುನಾವಣೆಯ ಸ್ಪರ್ಶವು ಜನರಲ್ಲಿ ಮತ, ಧರ್ಮ, ಜಾತಿ, ಸಂಘಟನೆಗಳು ಅನಾವರಣಗೊಳ್ಳುವುದನ್ನು ಗಮನಿಸಬಹುದು. ಇದು ಧಾರ್ಮಿಕ, ಸಾಮಾಜಿಕ ಬದುಕಿನ ನಂಬಿಕಗೆಳ ಮೇಲೆ ಕೆಸರು ಎರಚುವುದನ್ನು ತೋರಿಸುತ್ತದೆ. ಧರ್ಮ ಧರ್ಮಗಳ ಸಂಘರ್ಷಗಳು ಚುನಾವಣೆಯ ಅಸ್ತ್ರವನ್ನಾಗಿ ಬಳಸಿಕೊಳ್ಳುವ ತಂತ್ರಗಾರಿಕೆಯಿಂದ ಮತಾಂತರದ ಮಾರ್ಗವನ್ನು ಅನುಸರಿಸುವುದು ಸಮಂಜಸವಲ್ಲ ಎಂಬುವುದನ್ನು ಈ ಕಾದಂಬರಿಯಲ್ಲಿ ವಿಸ್ತೃತವಾಗಿ ಹೇಳಲಾಗಿದೆ.

About the Author

ಸುಬ್ರಹ್ಮಣ್ಯ ಸಿ. ಕುಂದೂರು

ಡಾ. ಸುಬ್ರಹ್ಮಣ್ಯ ಸಿ. ಕುಂದೂರು ಅವರು ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಸಮೀಪದ ಹೇರೂರಿನವರು. ಸಂಶೋಧನೆ, ಸಾಹಿತ್ಯ ಬರೆಹದ ಜೊತೆಯಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕ್ರಿಯಾಶೀಲರು. ಆಳ್ವಾಸ್‌ ಕಾಲೇಜಿನಿಂದ ಪದವಿಯನ್ನು ಮತ್ತು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಕನ್ನಡ ಮತ್ತು ಚರಿತ್ರೆ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರಾದ ಇವರು ಡಾ. ಅಮರೇಶ ನುಗಡೋಣಿ ಅವರ ಮಾರ್ಗದರ್ಶನಲ್ಲಿ “ವಸಾಹತು ಕಾಲಘಟ್ಟದ ಕನ್ನಡ ಕಥಾ ಸಾಹಿತ್ಯದಲ್ಲಿ ಸ್ಥಳೀಯ ಪ್ರಜ್ಞೆಯ ತಾತ್ವಿಕ ಶೋಧ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ರಾಷ್ಟ್ರೀಯ ಅರ್ಹತ ಪರೀಕ್ಷೆಗಳಾದ ಎನ್‌ಇಟಿ, ಎಸ್‌ಎಲ್‌ಇಟಿಯಲ್ಲಿ ಅರ್ಹತೆಯನ್ನು ಪಡೆದಿರುವ ಇವರು ...

READ MORE

Related Books