ಸ್ಕೂಲ್ ಮಿಸ್ಟ್ರೆಸ್

Author : ಭಿ.ಪ. ಕಾಳೆ

Pages 246

₹ 3.00
Year of Publication: 1949
Published by: ಶ್ರೀ ಶೇಷಾಚಲ ಪ್ರೆಸ್
Address: ಮದಿಹಾಳ, ಧಾರವಾಡ

Synopsys

ಲೇಖಕ ಭಿ.ಪ. ಕಾಳೆ ಅವರು ಬರೆದ ಕಾದಂಬರಿ-ಸ್ಕೂಲ್ ಮಿಸ್ಟ್ರೆಸ್. ಮಕ್ಕಳಿಗೆ ಕೇವಲ ಓದು ಬರೆಹ ಕಲಿಸುವುದಷ್ಟೇ ಶಿಕ್ಷಕರ ಕೆಲಸವಲ್ಲ; ಜೊತೆಗೆ ದೇಶಪ್ರೇಮ, ಸಹೋದರತ್ವ, ಧಾರ್ಮಿಕ -ನೈತಿಕ ಶಿಕ್ಷಣವೂ ಬಹು ಮುಖ್ಯ. ಶಿಕ್ಷಣ ವ್ಯವಸಾಯ ಹೇಗೋ ನಡೆದರಾಯಿತು ಎಂಬುದಲ್ಲ; ಶಿಕ್ಷಕ-ಶಿಕ್ಷಕಿಯರೂ ನೈತಿಕವಾಗಿ ಸಂಪನ್ನರಿಬೇಕು. ಅತ್ಯಾಚಾರಿಗಳು, ಅನಾಚಾರಿಗಳು ಶಾಲೆಯಂತಹ ಕ್ಷೇತ್ರದಲ್ಲಿ ಕೆಲಸ ಮಾಡಲು ಅನರ್ಹರು. ಇಂತಹವರೇ ಶಿಕ್ಷಣ ಇಲಾಖೆಯ ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ಶಿಕ್ಷಣ ಕ್ಷೇತ್ರ ಅಧೋಗತಿಗೆ ಇಳಿಯುವುದು ಖಂಡಿತ ಎಂದು ಪ್ರತಿಪಾದಿಸುವ ಕಾದಂಬರಿ ಇದು.

About the Author

ಭಿ.ಪ. ಕಾಳೆ
(20 January 1889)

ಭಿಕಾಜಿಪಂತ ಕಾಳೆ ಎಂಬುದು  ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ.  ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...

READ MORE

Related Books