ಆಳ, ನಿರಾಳ (ಕಾದಂಬರಿ)

Author : ಶಿವರಾಮ ಕಾರಂತ

Pages 339

₹ 175.00




Year of Publication: 2011
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

’ಆಳ, ನಿರಾಳ’ ಡಾ. ಶಿವರಾಮ ಕಾರಂತರ ಕಾದಂಬರಿ. ದೇವರು, ಧರ್ಮ, ನಂಬಿಕೆಗಳನ್ನು ಹೊತ್ತುಕೊಂಡು, ಬದುಕಿನಲ್ಲಿ ಮಾತ್ರ ಹಾಗೆ ಇರದೆ, ಅದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದ್ದ ಜನರು ಮತ್ತು ನಂಬಿಕೆಯನ್ನು ನಿಜವಾದ ಅರ್ಥದಲ್ಲಿ ಅಳವಡಿಸಿಕೊಂಡು ಬಾಳುತ್ತಿದ್ದ ಜನರ ನಂಬಿಕೆಯ ಆಳ ಮತ್ತು ಆಳವಿಲ್ಲದಿರುವಿಕೆಯನ್ನು ಹಲವಾರು ದೃಷ್ಟಿಕೋನಗಳಿಂದ ವಿಶ್ಲೇಷಿಸಿರುವ ಕಾದಂಬರಿ.
ನಮ್ಮ ನಾಡಿನ ರಾಜಕೀಯ ಕುರಿತ ಚಿಂತನ-ಮಂಥನಗಳಿವೆ. ನಮ್ಮ ದೇಶದ ಪುಣ್ಯಕ್ಷೇತ್ರಗಳ ಸಾಂಸ್ಕೃತಿಕ ದೃಷ್ಟಿಯ ಅನ್ವೇಷಣೆಯೂ ಹಲವು ಜನರ ಚರ್ಚೆ, ಅಭಿಪ್ರಾಯ, ನಂಬಿಕೆ, ಶಾಸ್ತ್ರಾಭ್ಯಾಸಗಳ ಮೂಲಕ ಸಾಗಿ, ಈ ಕಾದಂಬರಿಯ ಒಟ್ಟು ಶಿಲ್ಪ ಕಡೆಯಲ್ಪಟ್ಟು, ಕಥಾಂಶ ಚಿಕ್ಕದಾದರೂ, ಕಾದಂಬರಿ ಸಾಕಷ್ಟು ವಿಸ್ತಾರವಾಗಿ ಬೆಳೆದು, ಓದುಗನನ್ನು ಚಿಂತನೆಗೆ ಹಚ್ಚುತ್ತದೆ. 

ಪುಣ್ಯಸ್ಥಳಗಳಿಗೆ ಭೇಟಿ ನೀಡುವುದರಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿಂದ ಬಹುತೇಕರು ಯಾತ್ರೆ ಕೈಗೊಳ್ಳುತ್ತಾರೆ. ಹೀಗೆ ಯಾತ್ರೆಗೆ ಹೊರಟ ಜನರ ಪೈಕಿ ಮಾಸೂರಿನ ಜಂಬಣ್ಣ ಒಬ್ಬರು. ಮನೆಯವಳನ್ನು ಬಿಟ್ಟು ಮತ್ತೊಂದು ಹೆಂಗಸಿನೊಂದಿಗೆ ಯಾತ್ರೆಗೆ ಹೊರಟಿದ್ದ. ಭಕ್ತಿಗಿಂತಲೂ ತೋರಿಕೆಯೇ ಪ್ರಧಾನವಾಗಿರುವ ಗುಣದ ಅಭೂತಾನಂದ ಸ್ವಾಮೀಜಿಯೂ, ಜೊತೆಗೆ ಸಮಯ ಸಾಧಕ ಪತ್ರಿಕೋದ್ಯಮಿಯೂ ಇರುತ್ತಾರೆ. ಯಾತ್ರೆಯಲ್ಲಿ ಬುದ್ದಿಜೀವಿ ವಸಂತ ದೇಸಾಯಿಯೂ ಇರುತ್ತಾನೆ. ಇವರೆಲ್ಲರೂ ತಮ್ಮ ಬದುಕಿನಲ್ಲಿ ಏನಿರುವರೋ ಅದನ್ನು ತೋರ್ಪಡಿಸುವುದಿಲ್ಲ. ಆದರೆ, ಹಾಗೆ ಇದ್ದೇವೆ ಎಂದೇ ವರ್ತಿಸುತ್ತಾರೆ. ದೇವರು, ಯಾತ್ರೆ , ಪುಣ್ಯ ಎಂದೆಲ್ಲ ಮಾತನಾಡುವ ಇವರು, ಭಕ್ತಿ ಎಂಬುದು ತೋರಿಕೆಗೆ ಮಾತ್ರವಾಗಿರುತ್ತದೆ. ಲೌಕಿಕ ವ್ಯವಹಾರಗಳೇ ಇವರಿಗೆ ಪ್ರಧಾನ ವಾಗಿರುತ್ತವೆ ಎಂಬುದನ್ನು ಈ ಕಾದಂಬರಿಯು ವ್ಯಂಗ್ಯವಾಗಿ ವಿಡಂಬಿಸುತ್ತದೆ. ಕೆಲವರ ವರ್ತನೆಯಲ್ಲಿ ಆಳವೂ (ಅರ್ಥ) ಇದೆ. ನಿರಾಳ (ನಿರ್+ಆಳ=ಆಳವಿಲ್ಲದ್ದು) ಇದೆ ಎಂಬುದು ಲೇಖಕರು ನೀಡುವ ಅರ್ಥ. 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1962ರಲ್ಲಿ (ಪುಟ: 346)  ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.

 

 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Conversation

Related Books