ಪ್ರದೀಪನ ಪರಾಭವ

Author : ಎನ್. ನರಸಿಂಹಯ್ಯ

Pages 162

₹ 1.00




Year of Publication: 1957
Published by: ರಾಜಕಮಲ್ ಪ್ರಕಾಶನ
Address: #109, ಬಳೇಪೇಟೆ, ಬೆಂಗಳೂರು-2

Synopsis

ಎನ್. ನರಸಿಂಹಯ್ಯ ಅವರ ಮನೋಹ್ಲಾದಕ ಪತ್ತೇದಾರಿ ಕಾದಂಬರಿ. ಕಳ್ಳರು, ಕೊಲೆಗಾರರು ಹಾಗೂ ದರೋಡೆಕೋರರನ್ನು ಹಲವು ಬಗೆಯ ಯುಕ್ತಿ ಹಾಗೂ ಚತುರತೆಗಳಿಂದ ಸೆರೆ ಹಿಡಿಯುವ ಪತ್ತೇದಾರರು, ತಾವೊಂದು ಹೊಸ ಮಾದರಿಯ ವಿದ್ಯಾ ಚತುರತೆಯನ್ನು ತೋರಿ ಅಂತ್ಯದಲ್ಲಿ ತಮ್ಮ ಪ್ರತಿಜ್ಞೆಯನ್ನು ಯಾವ ರೀತಿ ನೆರವೇರಿಸಿ, ಅಜಯರಾದರೆಂಬುದನ್ನು ಈ ಕಾದಂಬರಿಯುದ್ದಕ್ಕೂ ಕಾಣಬಹುದು. ಜೊತೆಗೆ, ತನ್ನಿಂದಲೇ ಈ ಪ್ರಪಂಚ ಎಂದು ಬೀಗುವವರಿಗೂ ಇಲ್ಲಿಯ ವಿಷಯ ವಸ್ತುವು ನೀತಿ ಬೋಧಕವಾಗಿದೆ ಎಂದು ಕಾದಂಬರಿಕಾರರು ಕೃತಿಗೆ ಬರೆದ ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

About the Author

ಎನ್. ನರಸಿಂಹಯ್ಯ
(18 September 1925 - 25 December 2011)

ಹೊಸ ವಸ್ತು, ತಂತ್ರಗಾರಿಕೆ ಮೂಲಕ ತಮ್ಮದೇ ಓದುಗರನ್ನು ಸೃಷ್ಟಿಸಿಕೊಂಡು, ಪತ್ತೆದಾರಿ ಕಾದಂಬರಿಗಳ ಜನಕನೆನ್ನುವಷ್ಟು ಪ್ರಸಿದ್ಧಿ ಗಳಿಸಿದ್ದವರು ಎನ್‌. ನರಸಿಂಹಯ್ಯ. ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಸಿ. ನಂಜಪ್ಪ, ತಾಯಿ ಯಲ್ಲಮ್ಮ. ನರಸಿಂಹಯ್ಯನವರು ಓದಿದ್ದು ಕನ್ನಡ ನಾಲ್ಕನೆಯ ತರಗತಿಯವರೆಗೆ. 18 -09-1925 ರಂದು ಜನನ. ತಂದೆಯ ಅಕಾಲ ಮರಣದಿಂದ ಓದು ನಿಲ್ಲಿಸಿ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿದರು. ನಂತರ ಖಾಸಗಿ ಬಸ್‌ ಕ್ಲೀನರ್ ಆಗಿ, ಕಂಡಕ್ಟರಾಗಿ ಯಾವುದೂ ಸರಿಯಾಗದೇ, ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಮೊಳೆ ಜೋಡಿಸುವ ಕೆಲಸಕ್ಕೆ ಸೇರಿದರು. ಹೀಗೆ ಮೊಳೆ ಜೋಡಿಸುತ್ತಲೇ ಕಾದಂಬರಿಗಳನ್ನು ಓದತೊಡಗಿದರು. ಮ. ರಾಮಮೂರ್ತಿಯವರು ಬರೆದಿದ್ದ ಪತ್ತೇದಾರಿ ...

READ MORE

Related Books