ಬಿಳಿಯ ಹೆಂಡತಿ

Author : ಎಂ. ನರಸಿಂಹಮೂರ್ತಿ (ಮ.ನ. ಮೂರ್ತಿ)

Pages 168

₹ 90.00




Published by: ಧೃತಿ ಪ್ರಕಾಶನ

Synopsys

ಮ.ನಾ. ಮೂರ್ತಿ ಅವರ ಸಾಮಾಜಿಕ ಕಾದಂಬರಿ ‘ಬಿಳಿಯ ಹೆಂಡತಿ’. ಶಾರದೆ ಅಚ್ಚ ಬಿಳುಪಿನ ಎಲ್ಲರೂ ಹುಬ್ಬೇರಿಸುವಂಥ ಸುಂದರಿ. ಗೋಪಿ ಅಮಾವಾಸ್ಯೆಯ ಕಪ್ಪು. ಇವರಿಬ್ಬರ ತಂದೆ-ತಾಯಂದಿರು ಚಿಕ್ಕವರಿರುವಾಗಲೇ ಮದುವೆ ಮಾಡಿದರೆ ಗೋಪಿ ಮತ್ತೆ ಶಾರದೆಯೆ ಅಂತ ನಿಶ್ಚಯ ಮಾಡಿರುತ್ತಾರೆ. ಮೊದಮೊದಲು ಶಾರದೆ ಗೋಪಿಯ ಬಣ್ಣ ನೋಡಿ ಅವನನ್ನು ಮುಟ್ಟಿದರೆ ತಾನು ಕಪ್ಪಾಗುತ್ತದೆ ಅನ್ನುವಂತೆ ಇರುತ್ತಾಳೆ. ಆದರೆ ನಿಧಾನವಾಗಿ ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ ಉಪ್ಪಿಯನ್ನು ತನ್ನ ಗಂಡನೆಂದೇ ಭಾವಿಸುತ್ತಾಳೆ. ಗೋಪಿ ತನ್ನ ಓದಿನ ಸಲುವಾಗಿ ವಿದೇಶಕ್ಕೆ ಹೋಗುತ್ತಾನೆ. ಆಗರ್ಭ ಶ್ರೀಮಂತರಾದ ಗೋಪಿಯ ತಂದೆ ಇಬ್ಬರ ಮದುವೆ ಮಾಡಿಕೊಳ್ಳುವುದಾಗಿ ಯೋಚಿಸಿದರು ನಂತರ ಇಬ್ಬರ ಓದಿಗಾಗಿ ಬೇಡವೆಂದೆನಿಸಿ ವಿದೇಶದಿಂದ ಬಂದ ನಂತರ ಮದುವೆ ಮಾಡುವುದಾಗಿ ಹಾಗೆ ಕಳಿಸುತ್ತಾರೆ. ಮೂರು ವರ್ಷದ ನಂತರ ಬಂದ ಗೋಪಿಯ ಸ್ವಭಾವದಲ್ಲಿ ಬದಲಾವಣೆಯನ್ನು ಶಾರದೆ ಗಮನಿಸುತ್ತಾಳೆ. ಮೊದಲಿದ್ದ ಪ್ರೀತಿ ಈಗ ಇರುವುದಿಲ್ಲ. ಬಹಳ ಸಲ ತಂದೆ-ತಾಯಿ ಮದುವೆಯಾಗು ಅಂತ ಹೇಳಿದರು ಯಾವ ಕಾರಣವೂ ಹೇಳದೆ ಮದುವೆಯನ್ನು ಮುಂದೂಡುತ್ತಾನೆ. ಗೋಪಿಯ ಗೆಳೆಯ ಶ್ರೀರಂಗ ಒತ್ತಾಯಪೂರ್ವಕವಾಗಿ ಗೋಪಿಗೆ ಮದುವೆಗೆ ಯಾಕೆ ಮುಂದೆ ಹಾಕುತ್ತಿರುವೆ ಎಂದು ಕೇಳಿದಾಗ.. ವಿದೇಶದಲ್ಲಿದ್ದಾಗ ಭಾರತವನ್ನು ,ಭಾರತದ ಸಂಸ್ಕೃತಿಯನ್ನು ವಿವೇಕಾನಂದರನ್ನು ಬಹುವಾಗಿ ಆದರಿಸುವ ಎಲಿಸಾಳ ಅವಳ ತಂದೆಯ ಪರಿಚಯ,ಈ ಪರಿಚಯ ಎಲಿಸಾ ಗೋಪಿಯನ್ನು ಪ್ರೀತಿಸಲು ಶುರು ಮಾಡುತ್ತಾಳೆ. ಒಮ್ಮೆ ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋದಾಗ ಅವಳ ತಂದೆ ನಾನಿನ್ನು ಜಾಸ್ತಿ ದಿನ ಬದುಕಲ್ಲ ನೀವಿಬ್ಬರು ಮದುವೆಯಾಗಲು ಸಲಹೆ ನೀಡುತ್ತಾರೆ. ಗೋಪಿ ಮನಸ್ಸಿನಲ್ಲಿ ಏನೇನೋ ಯೋಚಿಸಿ ಎಲಿಸಾಳೊಂದಿಗೆ ಮದುವೆಯಾಗುತ್ತಾನೆ. ಆದರೆ ಅವನ ಅಂದುಕೊಂಡಂತೆ ಆಗದೆ ಈ ವಿಷಯವನ್ನ ಮನೆಯವರಿಗೆ ಹೇಗೆ ತಿಳಿಸುವುದೆಂದು ತಿಳಿದೇ ಒದ್ದಾಡುತ್ತಿರುವಾಗಲೇ.ಎಲಿಸಾ ವಿದೇಶದಿಂದ ಭಾರತಕ್ಕೆ ಬಂದಿರುವ ವಿಷಯ ತಿಳಿಯುತ್ತದೆ. ತಂದೆ ಮತ್ತೆ ಗೋಪಿ ಇಬ್ಬರೂ ದೆಹಲಿಗೆ ಹೋಗಿ ಅವಳನ್ನು ಹಾಗೆಯೇ ವಿಚ್ಛೇದನ ಕೊಟ್ಟು ಕಳಿಸುವ ಯೋಚಿಸಿದಾಗ. ಎಲಿಸಾಳ ಸುಸಂಸ್ಕೃತ ಅಥನಿ ನೋಡಿ ವಾಸಪ್ಪ ಅವಳನ್ನ ತನ್ನ ಸೊಸೆಯನ್ನು ಸ್ವೀಕರಿಸಿ ಮನೆಗೆ ಕರೆತರುತ್ತಾನೆ. ಇತ್ತ ಶಾರದೆ ಗೋಪಿಯನಲ್ಲದೆ ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ಅಂತ ಪಟ್ಟು ಹಿಡಿದು ಕುಳಿತಿರುತ್ತಾಳೆ. ಮನೆಗೆ ಸೊಸೆಯಾಗಿ ಬಂದ ಎಲಿಸಾಳಿಗೆ ಮನೆಯ ಕೆಲವೊಂದು ಆಚರಣೆಗಳನ್ನು ಆಚರಿಸಲು ತನ್ನ ಧರ್ಮದ ತೊಡಕಾಗುವುದು ತಿಳಿದು ಬೇಸರಗೊಳ್ಳುತ್ತಾಳೆ. ಒಮ್ಮೆ ದಸರೆಯ ನೋಡಲು ಶ್ರೀರಂಗ, ಗೋಪಿ ,ಎಲಿಸಾ ಮತ್ತೆ ಶಾರದೆ ಮೈಸೂರಿಗೆ ಹೋಗುತ್ತಾರೆ.ಅಲ್ಲಿ ಬೇರೊಂದು ಉದ್ದೇಶದಿಂದ ಶ್ರೀರಂಗ ಎಲಿಸಾಲಿಳಿಗೆ ಚಿಕ್ಕವರಿರುವಾಗಲೇ ಗೋಪಿಯನ್ನು ಶಾರದಾಳ ಮದುವೆಯೆಂದು ನಿಶ್ಚಯಿಸಿರುವುದು ಶಾರದೆಯ ಮನದ ತುಂಬಾ ಗೋಪಿ ತುಂಬಿರುವುದು ತಿಳಿದು... ಅವಳೊಂದು ನಿರ್ಧಾರಕ್ಕೆ ಬರುತ್ತಾಳೆ.....ರಾಜ್ಯದ ಹೆಣ್ಣುಮಗಳೊಬ್ಬಳು ಇಂತಹ ನಿರ್ಧಾರ ತೆಗೆದುಕೊಳ್ಳಲು ಸಂಕಟಪಡುತ್ತಾಳೆ.. ಆದರೂ ಗೋಪಿಯನ್ನು ತನ್ನ ಪತಿಯೆಂದು ಚಿಕ್ಕವಳಿಂದಲೇ ಭಾವಿಸುವ ಶಾರದೆಗಾಗಿ ಒಂದು ನಿರ್ಧಾರ ತೆಗೆದುಕೊಳ್ಳುತ್ತಾಳೆ... ಕಾದಂಬರಿ ಓದಿದಾಗ ವಿದೇಶದ ಹೆಣ್ಣುಮಗಳು ಹೀಗಿರುತ್ತಾರೆ ಅಂತ ಆಶ್ಚರ್ಯವಾಗುತ್ತದೆ?!. ಅವಳಿಗಿರುವ ಭಾರತದ ಬಗ್ಗೆ ಆಸಕ್ತಿ, ಅಭಿಮಾನ ಮನಮೂಖವಾಗಿಸುತ್ತದೆ.

About the Author

ಎಂ. ನರಸಿಂಹಮೂರ್ತಿ (ಮ.ನ. ಮೂರ್ತಿ)
(06 June 1906 - 22 April 1977)

ಮ.ನ. ಮೂರ್ತಿ (06-06-1906, 22-04-1977) ಕಥೆ, ಕಾದಂಬರಿಕಾರರು, ಪತ್ರಿಕಾ ಸಂಪಾದಕರು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಮಂದಲಹಳ್ಳಿಯವರು. ತಂದೆ ಮಧ್ವರಾವ್ ಮತ್ತು ತಾಯಿ ಭೀಮಕ್ಕ. ಪ್ರೌಢಶಾಲೆ ಶಿಕ್ಷಣವನ್ನು ತುಮಕೂರಿನಲ್ಲಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ. ಸೇರಿ ನಂತರ ಕನ್ನಡದಲ್ಲಿಯ ಆಸಕ್ತಿಯಿಂದ ಸಾಹಿತಿ ಎ.ಆರ್. ಕೃಷ್ಣ ಶಾಸ್ತ್ರೀ ಹಾಗೂ ಟಿ.ಎಸ್. ವೆಂಕಣ್ಣಯ್ಯ ಅವರ ಪ್ರೋತ್ಸಾಹದಿಂದ ಬಿ.ಎ. ಪೂರೈಸಿದರು.  ಕೃತಿಗಳು: ‘ಚಿಕ್ಕದೇವರಾಯ’ (ಕಾದಂಬರಿ), ‘ಟಿಪ್ಪೂ ಸುಲ್ತಾನ್’ (3 ಭಾಗಗಳಲ್ಲಿ) ಹಾಗೂ ಸಣ್ಣ ಕಥಾ ಸಂಕಲನ ‘ತಂಗಳೂಟ’. ‘ಗಾನಯೋಗಿ ರಾಮಣ್ಣ’, ‘ಸ್ವಯಂವರ’, ‘ಸುವರ್ಣ ಮುಖಿ’ (ಕಾದಂಬರಿಗಳು), ಪ್ರಜಾಮತ ವಾರಪತ್ರಿಕೆಗಾಗಿ ‘ಶಾಂತಲಾ’ ಕಾದಂಬರಿಯನ್ನು ಬರೆಯತೊಡಗಿದಾಗ ಅನಿರೀಕ್ಷಿತವಾಗಿ ಪ್ರಜಾಮತ ವ್ಯವಸ್ಥಾಪಕ ಸಂಪಾದಕರ ...

READ MORE

Related Books