ಕ್ರಾಂತಿ ಪರ್ವ

Author : ಬಾಬು ಕೃಷ್ಣಮೂರ್ತಿ

Pages 328

₹ 350.00




Year of Publication: 2023
Published by: ಸಾಹಿತ್ಯ ಪ್ರಕಾಶನ
Address: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್‍ ರಸ್ತೆ, ನ್ಯು ಹುಬ್ಬಳ್ಳಿ, ಹುಬ್ಬಳ್ಳಿ-580020.
Phone: 094481 10034

Synopsys

‘ಕ್ರಾಂತಿ ಪರ್ವ’ ಬಾಬು ಕೃಷ್ಣಮೂರ್ತಿ ಅವರ ಐತಿಹಾಸಿಕ ಕಾದಂಬರಿಯಾಗಿದೆ. ಐತಿಹಾಸಿಕ ದಾಖಲೆಗಳನ್ನು ಅಮೂಲಾಗ್ರವಾಗಿ ಸಂಗ್ರಹಿಸಿ, ಅವುಗಳನ್ನು ಆಳವಾಗಿ ಅಧ್ಯಯನ ಮಾಡಿ, ಓರಣವಾಗಿ ಜೋಡಿಸಿ ಕಾದಂಬರಿಯ ಶಿಲ್ಪವನ್ನು ಸೃಷ್ಟಿಸುವುದರಲ್ಲಿ ಡಾ| ಬಾಬು ಕೃಷ್ಣಮೂರ್ತಿ ಸಿದ್ಧಹಸ್ತರು. ಅವರು ಈಗಾಗಲೇ ಪ್ರಕಟಿಸಿರುವ ಐತಿಹಾಸಿಕ ಕಾದಂಬರಿಗಳಲ್ಲಿ ಈ ಸಂಗತಿ ಸುಸ್ಪಷ್ಟವಾಗಿದೆ. ಈ ಸಾಲಿನಲ್ಲಿ 'ಕ್ರಾಂತಿಪರ್ವ' ಒಂದು ಅನರ್ಥ್ಯ ಸೇರ್ಪಡೆ. ಗಾಂಧೀಜಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವುದಕ್ಕೆ ಮುಂಚಿನ ಅವಧಿಯಲ್ಲಿ ಕ್ರಾಂತಿಕಾರಿಗಳು ಉತ್ತರ ಭಾರತದಲ್ಲಿ, ವಿಶೇಷವಾಗಿ ಬಂಗಾಲದಲ್ಲಿ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದ, ಎದೆ ಜುಮ್ಮೆನ್ನಿಸುವ ಪ್ರಸಂಗಗಳು ಇಲ್ಲಿ ರೋಚಕವಾಗಿ ಹರಳುಗಟ್ಟಿವೆ. ಅವುಗಳಲ್ಲಿ ಜತೀನನ ಕೊಡುಗೆ ಅನನ್ಯವಾದದ್ದು. ಅವನು ಕೇವಲ ಒಂದು ಚಿಕ್ಕ ಚೂರಿಯನ್ನು ಹಿಡಿದುಕೊಂಡು ಬಂಗಾಲದ ದೈತ್ಯ ನರಭಕ್ಷಕ ಹುಲಿಯೊಡನೆ ಇಪ್ಪತ್ತು ನಿಮಿಷ ಕಾದಾಡಿ ಅದನ್ನು ಕೊಂದು ಹಾಕಿದ ರೋಮಾಂಚಕಾರಿ ಘಟನೆಯೊಡನೆ ಆರಂಭವಾಗುವ ಕಾದಂಬರಿ ಮುಂದಿನ ಕಥೆಗೆ ಒಂದು ಸಾಂಕೇತಿಕ ಪೀಠಿಕೆಯನ್ನು ಒದಗಿಸುತ್ತದೆ. ಜತೀನ್ ಮತ್ತು ಮಿತ್ರ ಕ್ರಾಂತಿಕಾರಿಗಳು ಬ್ರಿಟಿಷರನ್ನು ದೇಶ ಬಿಟ್ಟು ಓಡಿಸಲು ಮಾಡುವ ಕೆಚ್ಚೆದೆಯ ಪ್ರಯತ್ನಗಳೆಲ್ಲ ಎಳೆಎಳೆಯಾಗಿ ನಿರೂಪಿತವಾದಂತೆ ಓದುಗರನ್ನು ಮಂತ್ರಮುಗ್ಧರನ್ನಾಗಿಸಿ ಸೆರೆಹಿಡಿಯುತ್ತವೆ. ಇಲ್ಲಿನ ಪುಟಪುಟಗಳಲ್ಲಿ ದೇಶಾಭಿಮಾನ ಉಕ್ಕಿ ಹರಿಯುತ್ತದೆ. ಕ್ರಾಂತಿಕಾರಿಗಳ ಪ್ರಯತ್ನ ಸಫಲವಾದಾಗ ಭೇಷ್ ಎನ್ನುತ್ತಾ, ವಿಫಲವಾದಾಗ ಅಯ್ಯೋ ಎಂದು ಮರುಗುತ್ತಾ ಓದುಗನೂ ಆಕಾಲದಲ್ಲಿ ಜೀವಿಸಿ ಪ್ರತ್ಯಕ್ಷದರ್ಶಿಯಾಗುತ್ತಾನೆ. ಕಣ್ಣಿಗೆ ಕಟ್ಟುವಂತೆ ಘಟನೆಗಳನ್ನು ನಿರೂಪಿಸುವ ಅದ್ಭುತ ರಚನಾಕ್ರಮದಿಂದ ಮತ್ತು ದೇಶಾಭಿಮಾನದ ಕಿಚ್ಚನ್ನು ಹಚ್ಚುವ ಸ್ವರೂಪದಿಂದ 'ಕ್ರಾಂತಿಪರ್ವ' ಜನಮಾನಸದಲ್ಲಿ ಅನಂತಕಾಲ ಉಳಿಯುವ ಮೇರುಕಾದಂಬರಿಯಾಗುತ್ತದೆ ಎಂದು ಲೇಖಕ ಈಶ್ವರಚಂದ್ರ ಅವರು ಕೃತಿಯ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಬಾಬು ಕೃಷ್ಣಮೂರ್ತಿ

ಸಾಹಿತ್ಯ, ಪತ್ರಿಕೋದ್ಯಮ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾದ ಬಾಬು ಕೃಷ್ಣಮೂರ್ತಿ ಹುಟ್ಟಿದ್ದು ಬೆಂಗಳೂರು. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ. ಅವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ಪತ್ರಿಕೆ) ಪ್ರಕಟವಾಗಿವೆ. ಇವರು ರಚಿಸಿದ ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದ್ ಕುರಿತು ಆರು ವರ್ಷ ಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ಅವರ ಪ್ರಮುಖ ಕೃತಿಗಳು - ಅಜೇಯ (1974), ಸಿಡಿಮದ್ದು ನೆತ್ತರು ನೇಣುಗಂಬ (1984), ಅದಮ್ಯ (1984), ರುಧಿರಾಭಿಷೇಕ (2005), ಡಾ. ಸಿ.ಜಿ. ಶಾಸ್ತಿಒಂದು ಯಶೋಗಾಥೆ (2007), 1857-ಭಾರತದ ಸ್ವಾತಂತ್ರ್ಯ ಸಂಗ್ರಾಮ (2007), ...

READ MORE

Related Books