ಪರಿಣಯ ಪ್ರಪಂಚ

Author : ಸುಶ್ರುತ್ ಜೆ ಆರ್

Pages 248

₹ 250.00




Year of Publication: 2022
Published by: ಸುಶ್ರುತ್‌ ಜೆ.ಆರ್‌
Address: 12 ನೇ ಅಡ್ಡರಸ್ತೆ,ಸೊಪ್ಪುಗುಡ್ಡೆ,ತೀರ್ಥಹಳ್ಳಿ- 577432
Phone: 9986325425

Synopsys

'ಪರಿಣಯ ಪ್ರಪಂಚ' ಸುಶ್ರುತ್‌ ಜೆ. ಆ‌ರ್ ಅವರ ಮೊದಲ ಕಾದಂಬರಿ. ಆಧುನಿಕತೆ, ಆಧುನೀಕರಣಗಳು ತಂದ ಪಲ್ಲಟಗಳು ವ್ಯವಸ್ಥೆಯ ಮೇಲಷ್ಟೇ ಅಲ್ಲದೆ ಮನುಷ್ಯನ ಮನಸ್ಸುಗಳ ಮೇಲೂ ಅಗಾಧವಾದ ಪರಿಣಾಮ ಮಾಡಿವೆ ಎಂಬ ಸಂಗತಿಯನ್ನು ಸೊಗಸಾಗಿ ಈ ಕಾದಂಬರಿ ನಿರೂಪಿಸುತ್ತದೆ. 'ಪರಿಣಯ'ವೆಂದರೆ ವಿವಾಹ, ವರಿಸು, ಬಯಸು ಎಂಬರ್ಥಗಳಿವೆ. ಹೆಣ್ಣು ಪರಸ್ಪರ ವರಿಸುವುದು ಬಯಸುವುದು ಸಹಜವೇ. ಆದರೆ ಮನುಷ್ಯ ಭೂಮಿಯನ್ನು, ಸಂಪತ್ತನ್ನು, ಅಧಿಕಾರವನ್ನು ಕಡೆಗೆ ವ್ಯವಸ್ಥೆಯನ್ನು ವರಿಸುವ ಪರಿಯನ್ನು ಕಾದಂಬರಿ ಸೊಗಸಾಗಿ ಚಿತ್ರಿಸುತ್ತದೆ. 'ಪರಿಣಯ' ಪದಕ್ಕಿರುವ ಲಘುದಾಟಿಯ ಅರ್ಥವನ್ನು ಕಾದಂಬರಿಯು ಸೊಗಸಾಗಿ ದುಡಿಸಿಕೊಳ್ಳುತ್ತದೆ. ಗಂಡು ಪರಿಸರ ಸಮಾಜದೊಂದಿಗಿನ ಮಾನವನ ಸಂಬಂಧವು ಪರಸ್ಪರ ಪ್ರಕೃತಿ ಅದು ಕೇವಲ ಪಡೆಯುವ, ದೋಚುವ ಹುನ್ನಾರದ ಆಗಿರಬೇಕು; ಆದರಿಲ್ಲಿ ಸಂಬಂಧವಾಗಿರುವುದನ್ನು ಕಾದಂಬರಿ ತನ್ನೆಲ್ಲಾ ವಿವರಗಳಲ್ಲಿ ಅನಾವರಣಗೊಳಿಸುತ್ತಾ ಸಾಗುತ್ತದೆ. ಇಲ್ಲಿನ ಭೂ ಆಕ್ರಮಣವು ಬೃಹತ್ ಯಂತ್ರಗಳ ಮೂಲಕ ಭೂವತ್ತುವರಿಯಲ್ಲಿ ಕಂಡರೆ, ಲ್ಯಾಂಡ್ ಡೀಲಿಂಗ್ ಗ್ಯಾಂಗ್ ಚಕ್ರವ್ಯೂಹವನ್ನೇ ಸೃಷ್ಟಿಸುತ್ತದೆ. ಮರಳು ಶ್ರೀಗಂಧ ರಕ್ಷಿಸಬೇಕಾದ ರಕ್ಷಕ ವ್ಯವಸ್ಥೆ ತಮ್ಮ ಅಧಿಕಾರ, ವರ್ಚಸ್ಸಿನ ಹಿಂದೆ ಓಡುತ್ತದೆ. ಹೋಂಸ್ಟೇಗಳು, ಅದ್ದೂರಿ ಮದುವೆಗಳು, ಬೀಗರೂಟದ ಸಮಾರಂಭಗಳು, ರೈತರ ಚೇಣಿ ಸಾಗುವಳಿ ವ್ಯವಸ್ಥೆಗಳು ಕೇವಲ ಬದುಕಿನ ಅನಿವಾರ್ಯಗಳಾಗಿರದೆ ಆಳದ ಬಯಕೆಗಳೇ ಆಗಿರುವುದನ್ನು ಕಾದಂಬರಿ ಓದುಗರಿಗೆ ಅಪೀಲು ಮಾಡಿಸುತ್ತದೆ. ಎಲ್ಲಕ್ಕೂ ಕಳಸವಿಟ್ಟಂತೆ ಬಣಕಲ್ ಬೆಟ್ಟವು ಮಾನವನ ಅತಿಯಾದ ಬಯಕೆಯ ಪರಿಣಾಮವಾದ (ಪರಿಣಯ) ಆಕ್ರಮಣದಿಂದಾಗಿ ಇಂಚಿಂಚೇ ಕದಲುತ್ತಿರುವ ಚಿತ್ರವು ಮಾನವ ಕೋಟಿಯ ಬದುಕನ್ನೇ ಆಪೋಶನ ತೆಗೆದುಕೊಳ್ಳುವುದಕ್ಕೆ ಅಣೆಯಾಗುತ್ತಿರುವುದು; ಅಸೂಕ್ಷ್ಮ ನಾದ, ಆಡಂಬರದಲ್ಲಿಯೇ ಮುಳುಗಿ ಹೋಗಿರುವ ಮಾನವನ ಅರಿವಿಗೇ ಬರುವುದಿಲ್ಲ. ಸಹಜ ಸಂಬಂಧಗಳ ಮೂಲಕ ಸಾಗಬೇಕಾದ ಬದುಕು ಪುರಾಣದ ಪ್ರಸಂಗಗಳಂತೆ ವರ್ಣನೆಗೂ ಅಂತಸ್ಥಕ್ಕೂ ಸಂಬಂಧವೇ ಇಲ್ಲದಂತೆ ಸಾಗುವ ಪರಿಯನ್ನು 'ಪರಿಣಯ ಪ್ರಪಂಚ' ಅದ್ಭುತವಾಗಿ ಅನಾವರಣಗೊಳಿಸುತ್ತಾ ಸಾಗುತ್ತದೆ.

About the Author

ಸುಶ್ರುತ್ ಜೆ ಆರ್

ಸುಶ್ರುತ್ ಜೆ ಆರ್ ಮೂಲತಃ ತೀರ್ಥಹಳ್ಳಿ ಶಿವಮೊಗ್ಗ ಜಿಲ್ಲೆಯವರು. ಬಿ ಇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗು ಎಂಬಿಎ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.‘ಪರಿಣಯ ಪ್ರಪಂಚ’ ಮೊದಲನೆಯ ಕಾದಂಬರಿಯಾಗಿದೆ. ಕೃತಿಗಳು: ಪರಿಣಯ ಪ್ರಪಂಚ ...

READ MORE

Related Books