ಹೀಗೊಂದು ಪ್ರೇಮಕಥೆ

Author : ಬಿ.ಆರ್. ಲಕ್ಷ್ಮಣರಾವ್

Pages 162

₹ 120.00
Year of Publication: 2019
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಗೋಕುಲಂ 3ನೇ ಹಂತ, ಮೈಸೂರು- 570002

Synopsys

‘ಹೀಗೊಂದು ಪ್ರೇಮಕಥೆ’ ಲೇಖಕ ಬಿ.ಆರ್. ಲಕ್ಷ್ಮಣರಾವ್ ಅವರ ಕಾದಂಬರಿ. ಜಾತಿ, ಪಂಗಡಗಳ ಬದುಕಿನ ರೀತಿ, ಭಾವನೆಗಳ ತೀವ್ರತೆ ಮೊದಲಾದವುಗಳ ಆಳಕ್ಕಿಳಿದು, ಆ ಜನರ ಶಕ್ತಿ ಸಾಮರ್ಥ್ಯ, ಆಶೋತ್ತರ, ಧೈರ್ಯಗಳನ್ನು ಒರೆಗೆ ಹಚ್ಚುವ ಪ್ರಯತ್ನವಿದು. 

 ಕಾದಂಬರಿಯ ಪಾತ್ರಗಳು, ಬರೀ ನಿಮಿತ್ತ ಮಾತ್ರ, ಆದರೆ ಇಲ್ಲಿ ಆಂತರಿಕವಾಗಿ ಒಂದು ವಿದ್ಯುತ್ ಪ್ರವಾಹದ ಒಳಹರಿವು ಇಡೀಯಾಗಿ ವಿಜೃಂಭಿಸಿದೆ. ಸಮಕಾಲೀನ ಸಮಾಜದ, ಯಾವುದೇ ಪಂಗಡ-ಜಾತಿಗಳ ಆಗುಹೋಗುಗಳು ಮತ್ತು ಹಿಂದೆ ಯಾವ ಕನ್ನಡ ಕಥೆ-ಕಾದಂಬರಿಕಾರರೂ ಗಮನಿಸದಿದ್ದ, ಮುಖ್ಯವೆಂದು ಭಾವಿಸದಿದ್ದ, ಶ್ರೀಮಂತ ಪಂಗಡದ ಕೌಟುಂಬಿಕ ತಾಕಲಾಟ, ಭಾವನೆ ಕೋಪ-ಅಸಹನೆ, ಸಂಕಟ, ಆಸೆ ಆಕಾಂಕ್ಷೆ, ಒಗ್ಗಟ್ಟುಎಲ್ಲವೂ ಘಟನೆಗಳ ಹಾಗೂ , ಪಾತ್ರಗಳ ಮೂಲಕ ಅನಾವರಣಗೊಂಡಿವೆ. ಬಿ.ಆರ್. ಲಕ್ಷ್ಮಣರಾವ್ ಅವರ ಕಥೆ-ಕಾವ್ಯಗಳ ನಯ ಇಲ್ಲಿಯೂ ಸುಂದರವಾಗಿ ಮಿಳಿತಗೊಂಡಿದೆ.

About the Author

ಬಿ.ಆರ್. ಲಕ್ಷ್ಮಣರಾವ್
(09 September 1946)

ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್‌. ಲಕ್ಷ್ಮಣರಾವ್‌ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...

READ MORE

Related Books