ಸುಂದರ ಸುಮಧುರ

Author : ಹೆಚ್.ಜಿ. ರಾಧಾದೇವಿ

Pages 176

₹ 100.00




Year of Publication: 2013
Published by: ಶ್ರೀ ಲಕ್ಷ್ಮಿ ವೆಂಕಟೇಶ್ವರ ಪ್ರಕಾಶನ

Synopsys

ಹೆಚ್.ಜಿ.ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ‘ಸುಂದರ ಸುಮಧುರ’. ಈ ಕಾದಂಬರಿ ಕಾಲ್ಪನಿಕವಲ್ಲ.ಇದು ಲೇಖಕಿ ಅವರೇ ಹೇಳುವಂತೆ ಅವರ ಸ್ವಂತ ಅತ್ತೆಯವರನ್ನು ಕುರಿತು ಬರೆದ ಕಾದಂಬರಿ.ಅತ್ತೆಯವರ ಬಗ್ಗೆ ಹೀಗೊಂದು ಸಕಾರಾತ್ಮಕ ಕಾದಂಬರಿಯನ್ನು ಬರೆದ ಲೇಖಕಿಯವರು ಹಾಗೂ ಅವರ ಅತ್ತೆಯವರ ನಡುವಿನ ಸಂಬಂಧ ಎಷ್ಟು ಸೌಹಾರ್ದಯುತವಾಗಿ ಇತ್ತು ಎನ್ನುವುದನ್ನು ಈ ಕಾದಂಬರಿಯನ್ನು ಓದಿ ಮನವರಿಕೆಯಾಗಲಿದೆ. ಇವರ ಎಲ್ಲ ಕಾದಂಬರಿಗಳಿಗಿಂತ ತುಂಬಾ ವಿಭಿನ್ನವಾದ ಈ ಕಾದಂಬರಿ ಅತ್ತೆ ಎಂದರೆ ಹೀಗಿರಬೇಕು ಎನಿಸುವಂತಹ ಮಧುರಬಾಯಿಯವರ ವ್ಯಕ್ತಿತ್ವದ ಔನ್ನತ್ಯ ಈ ಕೃತಿಯಲ್ಲಿ ಹಾಸುಹೊಕ್ಕಾಗಿದೆ.ತೇಯ್ದಷ್ಟು ಘಮಘಮಿಸುವ ಗಂಧದ ಚಕ್ಕೆಯ ಹಾಗೆ ಅವರ ವಿಶಿಷ್ಟ ವ್ಯಕ್ತಿತ್ವದ ಪರಿಮಳ ಓದುಗರ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ...ಇಲ್ಲಿ ನಿಮಗೆ ರಾಗದ್ವೇಷಗಳು...ಅಸೂಯೆ ಅಸಹನೆಗಳ ಚಿತ್ರಣದ ಬದಲಿಗೆ ಪರಿಪೂರ್ಣ ಸುಖಿ ಸಂಸಾರದ ಸಂತೋಷದ ಸೊಬಗು ಅನಾಯಾಸವಾಗಿ ದಕ್ಕಿಬಿಡುತ್ತದೆ. ಮೊದಲನೆಯ ಮುದ್ರಣ- 1993, ಎರಡನೆಯ ಮುದ್ರಣ- 2013

About the Author

ಹೆಚ್.ಜಿ. ರಾಧಾದೇವಿ - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books